ADVERTISEMENT

ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 8:50 IST
Last Updated 20 ಏಪ್ರಿಲ್ 2017, 8:50 IST
ಬಸವನಬಾಗೇವಾಡಿಯಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು
ಬಸವನಬಾಗೇವಾಡಿಯಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು   

ಬಸವನಬಾಗೇವಾಡಿ: ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯ ಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ಮುಂಭಾಗದ ವಿಜಯಪುರ ರಸ್ತೆಯ ಮಾರ್ಗವಾಗಿ ಬಸವೇಶ್ವರ ವೃತ್ತದ ಮೂಲಕ ಪ್ರತಿಭಟನಾ ಮೆರವಣಿಗೆಯು ತಹಶೀಲ್ದಾರ್ ಕಚೇರಿಗೆ ತೆರಳಿ ತಹ ಶೀಲ್ದಾರ್ ಎಂ.ಎನ್.ಚೋರಗಸ್ತಿ ಅವರಿಗೆ ಮನವಿ ಸಲ್ಲಿ ಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮನಗೂಳಿಯ ಸಂಗನಬಸವ ಶಿವಾ ಚಾರ್ಯ ಸ್ವಾಮೀಜಿ ಹಾಗೂ ಸಂಘಟನೆ ಮುಖಂಡ ಸಂಗಮೇಶ ದಾಶ್ಯಾಳ ಮಾತ ನಾಡಿ, ರಾಜ್ಯ ಸರ್ಕಾರ ಬಜೆಟ್ ಮಂಡನೆ ವೇಳೆ ರೈತರ ಸಾಲ ಮನ್ನಾ ಮಾಡುತ್ತದೆ ಎಂಬ ನೀರಿಕ್ಷೆ ಇಟ್ಟುಕೊಂಡಿದ್ದರು. ಆದರೆ ರಾಜ್ಯ ಸರ್ಕಾರ ರೈತ ಸಾಲ ಮನ್ನಾ ಮಾಡದೇ ಇರುವುದರಿಂದ ರೈತರಿಗೆ ಅನ್ಯಾಯ ಮಾಡಿದಂತಾಗಿದೆ. ವಿಜಯ ಪುರ ಜಿಲ್ಲೆಯನ್ನು ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡಿದ್ದರೂ ಇದು ವರೆಗೂ ರೈತರ ನೆರವಿಗೆ ಬಾರದೇ ಇರುವುದು ನೋವಿನ ಸಂಗತಿ ಎಂದು ಹೇಳಿದರು.

ರೈತರು ಉತ್ತಮ ಮಳೆ, ಬೆಳೆ ಬರುತ್ತದೆ ಎಂಬ ನೀರಿಕ್ಷೆಯಲ್ಲಿ ತಮ್ಮ ಕೃಷಿ ಕಾರ್ಯಕ್ಕಾಗಿ ಬ್ಯಾಂಕ್‌ಗಳಲ್ಲಿ ಹಾಗೂ ಖಾಸಗಿಯಾಗಿ ಸಾಲ ಮಾಡಿದ್ದಾರೆ. ಆದರೆ ಈಗ ಸಾಲವನ್ನು ಮರುಪಾವತಿ ಮಾಡಬೇಕೆಂದರೆ ರೈತರ ಬಳಿ ತಮ್ಮ ಕುಟುಂಬ ನಿರ್ವಹಿಸುವಷ್ಟು ಹಣವಿಲ್ಲ. ಹೀಗಾಗಿ ಸಾಕಷ್ಟು ಸಂಖ್ಯೆ ರೈತರು ಆತ್ಮಹತ್ಯೆಗೆ ಶರಣಾಗಿರುವುದನ್ನು ನಾವು ಕಂಡಿದ್ದೇವೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ನೀಡಿದರೆ ಅದು ಶಾಶ್ವತ ಪರಿಹಾರ ಎನಿಸಲಾರದು. ರೈತರ ಆತ್ಮಹತ್ಯೆಗೆ ಮೂಲ ಕಾರಣವನ್ನು ತಿಳಿದುಕೊಳ್ಳ ಬೇಕು. ಬರಗಾಲದಿಂದ ತತ್ತರಿಸುತ್ತಿರುವ ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಾಹಿಸಿದ ಅವರು ಹದಿನೈದು ದಿನ ಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳದಿ ದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಉಪಾ ಧ್ಯಕ್ಷ ವಿಜುಗೌಡ ಬಿರಾದಾರ, ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪು ಗಬ್ಬೂರ, ಜಿಲ್ಲಾ ಸಂಚಾಲಕ ಮಹೇಶ ನಾಯಕ, ಶಿವಾ ನಂದ ತಾಳಿಕೋಟಿ, ರಾಜು ಹಿರೇಮಠ, ಬಸವರಾಜ ರಾಯಗೊಂಡ, ಮುತ್ತು ಹಾಲಿಹಾಳ, ಸುರೇಶ ಜಂಗೋಣಿ, ಸಿದ್ದು ಜೋಗಿ, ರಮೇಶ ಜಂಗೋಣಿ, ಗುರು ನಾಥ ದಳವಾಯಿ, ಮಾಂತೇಶ ಓದಿ, ಹಣಮಂತ ಹಚ್ಯಾಳ, ನಿಂಗರಾಜ ಗೊರ ಗುಂಡಗಿ, ಅಣ್ಣಪ್ಪ ಹಾಲಿಹಾಳ, ಬನ್ನೆಪ್ಪ ತೊನಶ್ಯಾಳ, ಅಸ್ಲಂ ನದಾಫ್, ಪ್ರಭು ಹಲಸಗಿ, ಮಂಜು ಯರಝರಿ, ಬಸವ ರಾಜ ಕಂಚ್ಯಾಣಿ, ಬಸು ಬಿಂಜಲಬಾವಿ, ವಿಶ್ವನಾಥ ಗಬ್ಬೂರ, ಮಾಂತೇಶ ಗಬ್ಬೂರ ಇತರರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.