ADVERTISEMENT

ಶಾಂತಿ, ನೆಮ್ಮದಿಗೆ ಅಧ್ಯಾತ್ಮ ವೇ ಔಷಧ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 4:52 IST
Last Updated 24 ಏಪ್ರಿಲ್ 2017, 4:52 IST

ಮನಗೂಳಿ (ಬಸವನಬಾಗೇವಾಡಿ): ‘ಜನರು ಸಂಪತ್ತು ಗಳಿಸುವ ಭರಾಟೆ ಯಲ್ಲಿ ಶಾಂತಿ, ನೆಮ್ಮದಿ, ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬದುಕಿ ನಲ್ಲಿ ನೆಮ್ಮದಿ ಸಿಗಬೇಕಾಗದರೆ ಅಧ್ಯಾತ್ಮ ವಿಚಾರ ತಿಳಿದುಕೊಳ್ಳಬೇಕು’ ಎಂದು ರಂಭಾಪುರಿ ಪೀಠದ  ವೀರ ಸೋಮೇಶ್ವರ ರಾಜದೇಶೀಕೇಂದ್ರ ಶಿವಾ ಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಪಟ್ಟೀಕಂಥಿ ಹಿರೇಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರದ ರಜತ ಮಹೋತ್ಸವದ ಅಂಗವಾಗಿ  ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯ ವಂತರಾಗಿರಬೇಕಾದರೆ ಆರೋಗ್ಯ  ಸೂತ್ರ ಪರಿಪಾಲನೆ ಮಾಡ ಬೇಕು. ಶಿಕ್ಷಣ, ಆರೋಗ್ಯ, ಅಧ್ಯಾತ್ಮ  ವಿಚಾರಗಳು ಸುಂದರ ಸಮಾಜ ನಿರ್ಮಾಣ ಮಾಡುತ್ತದೆ. ಹಿಂದೆ ನಗರ ಪ್ರದೇಶಗಳಲ್ಲಿ ಮಾತ್ರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಇಂದು ಗ್ರಾಮೀಣ ಪ್ರದೇಶದಲ್ಲಿಯೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಮಾಜದಲ್ಲಿ ಜ್ಞಾನ ವೃದ್ಧಿಯಾಗುತ್ತಿದೆ. ಆದರೆ ಜನರಲ್ಲಿ ಭಾವನೆಗಳು ಬೆಳೆಯುತ್ತಿಲ್ಲ. ಭಾವನೆ ಬೆಳೆಯಬೇಕಾದರೆ ಧರ್ಮದ ಅಗತ್ಯತೆ ಇದೆ ಎಂದು ಹೇಳಿದರು.

ಸರ್ಕಾರ ಸಾಲ ಮನ್ನಾ ಮಾಡಲಿ, ಬಿಡಲಿ ಯಾವ ರೈತರು ಆತ್ಮಹತ್ಯೆಗೆ ಮುಂದಾಗಬಾರದು.  ನೋವಿಗೆ ಆತ್ಯಹತ್ಯೆ ಪರಿಹಾರವಲ್ಲ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ ಸದಸ್ಯರು ಸಂಕಷ್ಟಕ್ಕೆ ಸಿಲುಕುತ್ತಿರುವುದು ತುಂಬಾ ವಿಷಾದನೀಯ. ಸರ್ಕಾರ ಯೋಜನೇತರ ಕಾರ್ಯಕ್ಕಾಗಿ ಸಾಕಷ್ಟು ಅನುದಾನ ಖರ್ಚು ಮಾಡುತ್ತಿದೆ. ರೈತರ ಯೋಜನೆಗಳಿಗೆ ಸಾಕಷ್ಟು ಅನುದಾನ ಖರ್ಚು ಮಾಡಿದರೆ ರೈತರು ನೆಮ್ಮದಿಯ ಜೀವನ ಸಾಗಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ ಆಲೋಚನೆ ಮಾಡಬೇಕಾದ ಅಗತ್ಯತೆ ಇದೆ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಬಬಲೇಶ್ವರದ ಡಾ. ಮಹಾದೇವ ಶಿವಾಚಾರ್ಯರು ಮಾತನಾಡಿ, ಸಮಾಜವು ಸನ್ಮಾರ್ಗದಲ್ಲಿ ನಡೆಯಬೇಕಾದರೆ ಧರ್ಮ ಗುರು ಗಳಿಂದ ಉಪದೇಶ ಪಡೆಯಬೇಕು. ಮನಗೂಳಿಯ ಪಟ್ಟೀಕಂಥಿ ಮಠದ ಶ್ರೀಗಳು ಬೆಂಗಳೂರಿನಲ್ಲಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ವ್ಯವಸ್ಶೆ ಮಾಡಿರುವುದು ಶ್ಲಾಘನೀಯ ಎಂದರು.
ಹುಕ್ಕೇರಿಯ ಚಂದ್ರಶೇಖರ ಸ್ವಾಮೀಜಿ, ಡಾ.ಮಹಾಂತಲಿಂಗ ಶಿವಾ ಚಾರ್ಯ ಸ್ವಾಮೀಜಿ ಮಾತನಾಡಿದರು.   ವಡವಡಗಿಯ ಬೖಂಗೀಶ್ವರ ಶಿವಾ ಚಾರ್ಯ ಸ್ವಾಮೀಜಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಹಾದೇವ ಪವಾರ, ಉಪಾ ಧ್ಯಕ್ಷ ಸಂಗಯ್ಯ ಕಂದಗಲ್ಲ, ಚಂದ್ರ ಶೇಖ ರಗೌಡ ಪಾಟೀಲ, ರಾಜೇಂದ್ರ ಪಾಟೀಲ, ಸಂಗನಗೌಡ ಪಾಟೀಲ, ಸಿದ್ರಾಮ ಬಿರಾ ದಾರ, ಶಿವಯ್ಯ ಮಠಪತಿ, ಕೃಷ್ಣಾ ಪತ್ತಾರ, ಲಕ್ಷ್ಮಣ ಹಡಪದ ಇದ್ದರು.

ಅನ್ನದಾನಿ ಶಾಸ್ತ್ರಿ ಸ್ವಾಗತಿಸಿದರು. ಅಪ್ಪಗೌಡ ಪಾಟೀಲ ವಂದಿಸಿದರು.  25 ವೈದ್ಯರಿಗೆ, ಯುವ ರೈತರನ್ನು ಸನ್ಮಾನಿಸ ಲಾಯಿತು.ಕಾರ್ಯಕ್ರಮಕ್ಕೂ ಮುನ್ನ ರಂಭಾ ಪುರಿ ಶ್ರೀಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋ ತ್ಸವ ಪಟ್ಟಣದ ಬೀದಿಗಳಲ್ಲಿ ವಿವಿಧ ವಾದ್ಯಮೇಳ, ಕುಂಭಮೇಳಗಳೊಂದಿಗೆ ಅದ್ಧೂರಿಯಾಗಿ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.