ADVERTISEMENT

ಶ್ರೀಗಳ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 6:32 IST
Last Updated 16 ಮೇ 2017, 6:32 IST

ಕೊಂಡಗೂಳಿ(ತಾಳಿಕೋಟೆ): ಗ್ರಾಮದ ಸಮರ್ಥ ಚಂದ್ರಶೇಖರ ಶಿವಯೋಗಿಗಳ ಹಾಗೂ ಶಾಂತಾನಂದ ಶ್ರೀಗಳ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಭಾನುವಾರ ಸಂಜೆ ನೂತನವಾಗಿ ನಿರ್ಮಿ ಸಿದ ಭವ್ಯ ರಥದ ರಥೋತ್ಸವ ಜರುಗಿತು.

ಬೆಳಿಗ್ಗೆ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ನಂತರ ಕುಂಭಕಳಸ  ಸಕಲ ವಾದ್ಯ ವೈಭವಗಳೊಂದಿಗೆ  ಪಲ್ಲಕ್ಕಿ ಉತ್ಸವ,  ಮಧ್ಯಾಹ್ನ ಮಹಾಪ್ರಸಾದ, ಹಾಗೂ ಮಧ್ಯಾಹ್ನ  ಧರ್ಮಸಭೆ ಜರುಗಿತು.  ಧರ್ಮಸಭೆಯಲ್ಲಿ ಸಾನ್ನಿಧ್ಯವನ್ನು  ಮಾಗಣಗೇರಿ ಶ್ರೀಗಳು, ಕಲಕೇರಿ ಶ್ರೀಗಳು, ನೇತೃತ್ವವನ್ನು  ನಾವದಗಿ ಶ್ರೀಗಳು, ಅಧ್ಯಕ್ಷತೆಯನ್ನು ಚಳಕಾಪುರ ಹಾಗೂ ಆಳೂರ ಸಿದ್ಧಾರೂಢ ಮಠದ ಶ್ರೀಗಳು ವಹಿಸಿದ್ದರು.

ಗಣ್ಯರಿಗೆ ಸನ್ಮಾನ ನೆರವೇರಿತು.  ಸಂಜೆ  ಚಂದ್ರಶೇಖರ ಶಿವಯೋಗಿಗಳ ಜನ್ಮಸ್ಥಳ ಗೋಟಕಂಡಕಿ ಗ್ರಾಮದ ಸಚ್ಚಿ ದಾನಂದ ಮಠದಿಂದ  ತೇರಿನ ಕಳಸ ಬಂತು.
ಭಕ್ತಸಮೂಹದ ಹರ್ಷೋದ್ಘಾರಗಳ ಮಧ್ಯೆ  ಭವ್ಯ ರಥೋತ್ಸವ ಜರುಗಿತು.  ರಾತ್ರಿ 10.00 ಗಂಟೆಗೆ ಬಸವನ ಬಾಗೇವಾಡಿ ತಾಲ್ಲೂಕಿನ ನಾಗೂರ ಗ್ರಾಮದ ಶ್ರೀಯಮನೂರೇಶ್ವರ ನಾಟ್ಯ ಸಂಘದ ವತಿಯಿಂದ  ‘ದೀಪಾವಳಿ’ ನಾಟಕವನ್ನು ಅಭಿನಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.