ADVERTISEMENT

ಶ್ವೇತಪತ್ರ ಹೊರಡಿಸಲು ಈಶ್ವರಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಮೇ 2017, 6:58 IST
Last Updated 17 ಮೇ 2017, 6:58 IST


ತಾಳಿಕೋಟೆ: ಬರ ಪರಿಹಾರಕ್ಕೆ ಕೇಂದ್ರ ದಿಂದ ₹ 1685 ಕೋಟಿ ಬಿಡುಗಡೆ ಮಾಡಿದ್ದರೂ ಕೂಡ ರಾಜ್ಯ ಸರ್ಕಾರ ರೈತರಿಗೆ ₹ 1100 ಕೋಟಿ ಮಾತ್ರ ನೀಡಿ ₹ 585 ಕೋಟಿ ಹಣ ತನ್ನಲ್ಲಿಯೇ ಇಟ್ಟು ಕೊಂಡು ಕೇಂದ್ರ ಹಣ ನೀಡಿಲ್ಲ ಅಂತ ಸುಳ್ಳು ಅಪಾದನೆ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

ಅವರು ಮಂಗಳವಾರ ಬೆಳಿಗ್ಗೆ ಗ್ರಾಮದೇವತೆ ದ್ಯಾಮವ್ವನ ದರ್ಶನ ಪಡೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದರು. ವಿಜಯಪುರ ಜಿಲ್ಲೆಯಲ್ಲಿ  1.80 ಲಕ್ಷ ರೈತರಿಗೆ ಹಣ ನೀಡಿದೆ. ಆದೇ ರೀತಿ ರಾಜ್ಯದಲ್ಲಿನ 24 ಲಕ್ಷ ರೈತರಿಗೆ ಹಣ ನೀಡಿದೆ. ಆದರೆ 70 ಸಾವಿರ ರೈತರಿಗೆ  ಬ್ಯಾಂಕ್‌ಗೆ ಆಧಾರ ಜೋಡಣೆ ಮಾಡ ಲಾಗದ್ದರಿಂದ ಬ್ಯಾಂಕ್‌ಗೆ ಹಣ ಹೋಗಿಲ್ಲ. ಆದರೆ ಇದು ಕಂದಾಯ ಇಲಾಖೆಯ ಕರ್ತವ್ಯಲೋಪ  ಎಂದರು.

ವಿಧಾನಸೌಧದಲ್ಲಿ ಕುಳಿತು ವಿಡಿಯೋಕಾನ್‌ಫೆರನ್ಸ್‌ ಮೂಲಕ ಅಧಿ ಕಾರಿಗಳ ಜೊತೆ ಕುಳಿತು ಬರಪರಿಹಾರ ಚರ್ಚೆ ಮಾಡಿದರೆ ವಾಸ್ತವ ತಿಳಿಯದು ರೈತರ ಜಮೀನುಗಳಿಗೆ ಬಂದು ಕಷ್ಟ ನೋಡಿ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದರು.

ADVERTISEMENT

ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಹಾಗೂ ಕಾಂಗ್ರೆಸ್‌ ಅಧಿಕಾರದಲ್ಲಿ ಬಂದ ಮೇಲೆ ಹಿಂದುಳಿದವರಿಗೆ ದಲಿತರಿಗೆ ಬಿಡುಗಡೆ ಮಾಡಿದ ಹಣದ ಬಗ್ಗೆ ಶ್ವೇತಪತ್ರ ಹೊಡಿಸುವಂತೆ ಆಗ್ರಹಿಸಿದರು.

ರಾಯಣ್ಣ ಬ್ರಿಗೇಡ್‌ನಿಂದ  ಬಿಜೆಪಿಗೆ ನನಗೆ ಹಾಗೂ ಹಿಂದುಳಿದವರಿಗೆ ದಲಿತ ರಿಗೆ ಲಾಭವಿದೆ ಆದ್ದರಿಂದ ಅದನ್ನು  ನಿಲ್ಲಿಸುವುದಿಲ್ಲ.  ಬಸವಣ್ಣ, ಅಂಬೇಡ್ಕರ್‌ ಕನಕದಾಸರಂತಹವರು ಸಮಾನತೆ ಬಗ್ಗೆ ಹೋರಾಡಿದ್ದಾರೆ ಅವರ ತತ್ವದಡಿ ಸಮಾ ನತೆಗೆ ಸಣ್ಣ ಪ್ರಯತ್ನ ನಡೆದಿದೆ. ಇಲ್ಲಿ ಬ್ರಾಹ್ಮಣ, ಲಿಂಗಾಯಯತ ಸೇರಿದಂತೆ ಎಲ್ಲ ಸಮುದಾಯದ ಬಡವರಿಗೆ ನ್ಯಾಯ ಸಿಗಬೇಕು ಎಂಬುದೇ ಬ್ರಿಗೇಡ್‌ನ ಪ್ರಯತ್ನವಾಗಿದೆಯೆಂದರು.

ಯಡಿಯೂರಪ್ಪನವರಲ್ಲಿ ನಮ್ಮಲ್ಲಿ ಬೇಧ ವಿಲ್ಲ: ಪಕ್ಷ ಅಂದ್ರೆ ಕುಟುಂಬ ಇದ್ದಂತೆ ಸಣ್ಣಪುಟ್ಟ ಮನಸ್ತಾಪ ಇರುತ್ತವೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ.  ಯಡಿಯೂ ರಪ್ಪನವರು ದಲಿತರ ಹಿಂದುಳಿದ ವರ್ಗ ದವರ ವಿರೋಧಿಯಲ್ಲ. ಅವರ ಅವಧಿ ಯಲ್ಲಿಯೆ ಹೆಚ್ಚು ಹಣ ನೀಡಿದ್ದಾರೆ ಎಂದರು.

ನಮ್ಮ ಮುಂದಿನ ಮುಂದಿನ ಮುಖ್ಯ ಮಂತ್ರಿ ಅವರೇ ಎಂದು ನಿರ್ಣಯಿಸಿಯಾ ಗಿದೆ,  ಆದರೆ ಕಾಂಗ್ರೆಸ್‌ನಲ್ಲಿ ನಾನೇ ಮುಖ್ಯಮಂತ್ರಿಯೆಂದು ಸಿದ್ಧರಾಮಯ್ಯ ಹೇಳುತ್ತಾರೆ. ಈ ಬಗ್ಗೆ ಕೇಂದ್ರ, ರಾಜ್ಯದ ಕಾಂಗ್ರೆಸ್‌ ನಾಯಕರು ಬಾಯಿ ಬಿಡು ತ್ತಲೇ ಇಲ್ಲ,   ಕಾಂಗ್ರೆಸ್‌  ಯಾರ ನಾಯ ಕತ್ವದಲ್ಲಿ ಚುನಾವಣೆ ಎದುರಿಸುತ್ತದೆ ಎಂದು ಹೇಳಲಿ ಎಂದು ಸವಾಲು ಹಾಕಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌.ಎಸ್‌. ಪಾಟೀಲ(ಕೂಚಬಾಳ), ಯುವ ಘಟಕದ ಅಧ್ಯಕ್ಷ ರಾಘೂ ವಿಜಾ ಪುರ, ನಿಂಗಪ್ಪಗೌಡ ಬಪ್ಪರಗಿ, ವಿಶ್ವನಾಥ ಬಬಲೇಶ್ವರ, ಶಶಿಧರ ಡಿಸಲೆ, ಮುದಕಪ್ಪ ಬಡಿಗೇರ, ಅಣ್ಣಪ್ಪ ಜಗತಾಪ, ಕಾಶಿನಾಥ ಮುರಾಳ, ಮಾನಸಿಂಗ ಕೊಕಟನೂರ, ರಾಮು ಜಗತಾಪ, ಕಾಶಿನಾಥ ಮಬ್ರುಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.