ADVERTISEMENT

ಸಂಭ್ರಮದ ಗ್ರಾಮದೇವತೆ ಜಾತ್ರೆ

ಜಂಗಮುರಾಳದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಉತ್ಸವ

​ಪ್ರಜಾವಾಣಿ ವಾರ್ತೆ
Published 7 ಮೇ 2015, 8:35 IST
Last Updated 7 ಮೇ 2015, 8:35 IST
ಮುದ್ದೇಬಿಹಾಳ ತಾಲ್ಲೂಕಿನ ಜಂಗಮುರಾಳ ಗ್ರಾಮದಲ್ಲಿ ಮಂಗಳವಾರ ಗ್ರಾಮದೇವತೆ ಜಾತ್ರೆಯನ್ನು ಶ್ರೀದೇವಿಯ ಭವ್ಯ ಮೆರವಣಿಗೆ ನಡೆಸುವ ಮೂಲಕ ಶ್ರದ್ಧೆ, ಭಕ್ತಿಯಿಂದ ನಡೆಸಲಾಯಿತು
ಮುದ್ದೇಬಿಹಾಳ ತಾಲ್ಲೂಕಿನ ಜಂಗಮುರಾಳ ಗ್ರಾಮದಲ್ಲಿ ಮಂಗಳವಾರ ಗ್ರಾಮದೇವತೆ ಜಾತ್ರೆಯನ್ನು ಶ್ರೀದೇವಿಯ ಭವ್ಯ ಮೆರವಣಿಗೆ ನಡೆಸುವ ಮೂಲಕ ಶ್ರದ್ಧೆ, ಭಕ್ತಿಯಿಂದ ನಡೆಸಲಾಯಿತು   

ಮುದ್ದೇಬಿಹಾಳ: ತಾಲ್ಲೂಕಿನ ಜಂಗ ಮುರಾಳ ಗ್ರಾಮದಲ್ಲಿ ಮಂಗಳವಾರ, ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮದೇವತೆ ಜಾತ್ರೆಯನ್ನು ಸಾವಿರಾರು ಸದ್ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆ ಶ್ರೀದೇವಿಯನ್ನು ಗಂಗಸ್ಥಳಕ್ಕೆ ತೆಗೆದುಕೊಂಡು ಹೋಗಿ ಬರಲಾಯಿತು. ನಂತರ ಸಕಲ ವಾದ್ಯ ವೈಭವದೊಂದಿಗೆ ಶ್ರೀದೇವಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ನಡೆಸಲಾಯಿತು. ನಾಡಿನಲ್ಲಿ ಮಳೆ, ಬೆಳೆ ಎಲ್ಲ ಸರಿಯಾಗಿ ಆಗಲಿ ಎಂದು ದೇವರ (ಹೇಳಿಕೆ) ಹರಕೆ ನುಡಿಯಲಾಯಿತು.

ಗ್ರಾಮದ ಗಣ್ಯರಾದ ಶಿವಯೋಗಿ ಹಿರೇಮಠ, ಈರಯ್ಯ ಹಿರೇಮಠ, ಹನುಮಂತ್ರಾಯ ಮೇಟಿ, ಮಾರುತಿ ಪವಾರ, ಅರುಣ ಪಾಟೀಲ, ಅಮರಪ್ಪ ಚಿನ್ನಾಪೂರ, ಬಸಪ್ಪ ಬಡಿಗೇರ, ದೇವೇಂದ್ರ ಚಿನ್ನಾಪೂರ, ಬಸವರಾಜ ಚಿನ್ನಾಪೂರ, ಶಿವಪ್ಪ ರಕ್ಕಸಗಿ, ಈರಪ್ಪ ಮಡಿಕೇಶ್ವಭಾಗವಹಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.