ADVERTISEMENT

ಸಾಧಕಿಯರಲ್ಲಿ ಸಾರ್ಥಕತೆ; ಪಾಲಕರಲ್ಲಿ ತೃಪ್ತತೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:07 IST
Last Updated 18 ಏಪ್ರಿಲ್ 2017, 6:07 IST
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸೋಮವಾರ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರು
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸೋಮವಾರ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರು   

ವಿಜಯಪುರ: ಚಿನ್ನದ ಪದಕಕ್ಕೆ ಮುತ್ತಿಡಬೇಕು ಎಂಬ ಕನಸು ನನಸಾದ ಸಾರ್ಥಕತೆ... ನಿರಂತರ ಅಧ್ಯಯನಕ್ಕೆ ಸಂದ ಪದವಿ ಪಡೆದ ಖುಷಿಯಲ್ಲಿ ಸಂಶೋಧಕರು... ಈ ಎರಡೂ ವರ್ಗದವರ ಸಾಧನೆಯನ್ನು ಕಣ್ತುಂಬಿಕೊಂಡು ತೃಪ್ತ ಮನೋಭಾವ ಪ್ರದರ್ಶಿಸಿದ ಪೋಷಕ ವರ್ಗ... ಸೋಮವಾರ ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಗೋಚರಿಸಿದ ಚಿತ್ರಣವಿದು.

ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಾಗಿ ಮರು ನಾಮಕರಣಗೊಂಡ ಬಳಿಕ, ಪ್ರೊ.ಸಬಿಹಾ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಘಟಿಕೋತ್ಸವವಿದು.ಉನ್ನತ ಶಿಕ್ಷಣ ಸಚಿವರಿಂದ ಚಿನ್ನದ ಪದಕ ಪಡೆದು ವೇದಿಕೆ ಇಳಿಯುತ್ತಿದ್ದಂತೆ ಸಹಪಾಠಿಗಳು ಸಹ ಆತ್ಮೀಯವಾಗಿ ಅಭಿನಂದಿಸಿದರು. ಪದಕ ಸ್ವೀಕರಿಸುವ ಸಂದರ್ಭ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.   ವೇದಿಕೆಯಲ್ಲಿ ಮಗಳು ಚಿನ್ನದ ಪದಕವನ್ನು ಕೊರಳಿಗೇರಿಸಿಕೊಳ್ಳುತ್ತಿದ್ದಂತೆ, ಸಭಾಂಗಣದಲ್ಲಿದ್ದ ಪೋಷಕರು ಆನಂದಭಾಷ್ಪ ಸುರಿಸಿ, ತಮ್ಮ ಶ್ರಮ ಸಾರ್ಥಕವಾಯಿತು ಎಂದು ಧನ್ಯತಾಭಾವ ಹೊಂದಿದರು.

ವೇದಿಕೆಯ ಎಡ, ಬಲ ಬದಿಯಲ್ಲಿ ಶಿವಶರಣೆ ಅಕ್ಕಮಹಾದೇವಿ, ಭಾರತದ ಕೋಗಿಲೆ ಸರೋಜಿನಿ ನಾಯ್ಡು, ಕಲ್ಪನಾ ಚಾವ್ಲಾ, ಸಾಲುಮರದ ತಿಮ್ಮಕ್ಕ ಸೇರಿದಂತೆ ಹಲ ಮಹಿಳಾ ಸಾಧಕಿಯರ ಭಾವಚಿತ್ರಗಳು, ಯಶೋಗಾಥೆಯನ್ನು ಪ್ರತಿಬಿಂಬಿಸುವಂತಿದ್ದವು.ಚಿನ್ನದ ಹುಡುಗಿಯರು..!

ADVERTISEMENT

ಅಕ್ಷತಾ ಕುಲಕರ್ಣಿ (ಕನ್ನಡ), ಚೈತ್ರಾ ಎಚ್.ಸಿ, (ಕನ್ನಡ), ಗೌರಮ್ಮ (ಕನ್ನಡ), ಉಮಾ ಬಿ.ಜೆ. (ಕನ್ನಡ), ಶೃತಿ ದೇಶಪಾಂಡೆ (ಕನ್ನಡ), ಸಂಗವ್ವ ಮಳಲಿ (ಕನ್ನಡ). ವನಹಳ್ಳಿ ಅಕ್ಕಮ್ಮ ಯಲ್ಲಪ್ಪ (ಹಿಂದಿ), ಅನೀಸ್‌ ಫಾತಿಮಾ ದುಂಡಸಿ (ಉರ್ದು), ಸುಮನ ಪಾಟೀಲ (ಆಂಗ್ಲ ಭಾಷೆ), ಹೇಮಾ ಕುರಿ (ಪ್ರದರ್ಶಕ ಕಲೆ), ಸನಾ ಫಾತಿಮಾ, ಚೇತನಾ ಹಿರೇಮಠ (ವ್ಯವಹಾರ ಅಧ್ಯಯನ), ಸೋನಾಲಿ ಜೈನ (ವಾಣಿಜ್ಯ), ಚೇತನಾ (ವಾಣಿಜ್ಯ), ರಂಜಿತಾ (ವಾಣಿಜ್ಯ).

ಅಶ್ವಿನಿ ಜೆ (ಫ್ಯಾಷನ್ ಡಿಸೈನಿಂಗ್), ಸ್ಫೂರ್ತಿ ಪಾಟೀಲ, ಪೂನಂ ಸಂಚೇತಿ, ದಿವ್ಯಾ ಈದರಾ, ವಿಜಯಲಕ್ಷ್ಮೀ ಮುಗಳೊಳ್ಳಿ (ಎಂಪಿ.ಇಡಿ) ಯಶೋಧಾ ಗುಂಡಾರ (ಎಂಪಿ.ಇಡಿ), ಗೀತಾ ಪೊಲೀಸ್ (ಶಿಕ್ಷಣ ಅಧ್ಯಯನ ವಿಭಾಗ),  ಶಿವಲೀಲಾ ಬಿರಾದಾರ (ಬಯೋ ಇನ್ಫಾರ್ಮೆಟಿಕ್ಸ್), ಪ್ರನಾಲಿ ದೇಖನೆ, (ಬಯೋ ಟೆಕ್ನಾಲಜಿ ವಿಭಾಗ), ಶಿವಲೀಲಾ ಶಿವರಾಜ (ಔಷಧೀಯ ರಸಾಯನಶಾಸ್ತ್ರ),  ಆಯೇಷಾ ಸೌದಾಗರ (ಗಣಕ ವಿಜ್ಞಾನ ವಿಭಾಗ), ಕಲ್ಲವ್ವ ಪೂಜಾರಿ (ಎಲೆಕ್ಟ್ರಾನಿಕ್ಸ್ ವಿಭಾಗ), ಖುಲ್ದೆ ಬರೀನ್ ಮಗರಬಿ (ಭೌತಶಾಸ್ತ್ರ ವಿಭಾಗ), ಆಸ್ಮಾಬಾನು (ರಸಾಯನ ಶಾಸ್ತ್ರ).

ರೇಣುಕಾ (ಗಣಿತಶಾಸ್ತ್ರ ವಿಭಾಗ), ಸ್ನೇಹಾ ಮುಗ್ಗನವರ (ಸಸ್ಯಶಾಸ್ತ್ರ), ಅಶ್ವಿನಿ ದೇಸಾಯಿಗೌಡ್ರ (ಪ್ರಾಣಿಶಾಸ್ತ್ರ), ಸೌಮ್ಯಶ್ರೀ ವಸ್ತ್ರದ (ಆಹಾರ ಸಂಸ್ಕರಣೆ ಮತ್ತು ಪೋಷಕಾಂಶ ಅಧ್ಯಯನ ವಿಭಾಗ), ತೇಲಿ ಪ್ರಿಯಾಂಕಾ ಶಾಂತಪ್ಪ (ಕಂಪ್ಯೂಟರ್ ಅಪ್ಲಿಕೇಷನ್),  ಐಶ್ವರ್ಯಲಕ್ಷ್ಮೀ ಜಿ, ಸೈಯಿದಾ ತಸ್ನೀಮ್, ಅನುಷಾ ಯರಮರಸ್, ತಮೀಮುನ್ನಿಸಾ ಆರ್, ಅಮೃತಾ ಮೋತಿಲಾಲ ರಾಠೋಡ, ನೇತ್ರಾವತಿ ಸಜ್ಜನ (ಇತಿಹಾಸ ವಿಭಾಗ). ಹಸೀನಾ ಸೈಯದ್ (ರಾಜ್ಯಶಾಸ್ತ್ರ), ಅಶ್ವಿನಿ ರಾಠೋಡ (ಸಮಾಜಶಾಸ್ತ್ರ ವಿಭಾಗ), ಮಾಯವ್ವ ಹೊಸೂರ (ಸಮಾಜಶಾಸ್ತ್ರ), ಶಿವಪೂಜಾ ಹಿರೇಮಠ, ಸಾವಿತ್ರಿ ಕೊಪ್ಪಳ ಎಸ್ (ಮಹಿಳಾ ಅಧ್ಯಯನ ವಿಭಾಗ),  ಮೇಘನಾ ಕೆ.ಎಂ.(ಮಹಿಳಾ ಅಧ್ಯಯನ ವಿಭಾಗ), ಮಲ್ಲಮ್ಮ (ಅರ್ಥಶಾಸ್ತ್ರ), ರೇಣುಕಾ ಹೊನ್ನದ (ಅರ್ಥಶಾಸ್ತ್ರ),   ಪುಷ್ಪಾ ಹಳ್ಳಿ (ಸಮಾಜ ಕಾರ್ಯ ವಿಭಾಗ), ಪೂಜಾ ಕಲ್ಯಾಣಶೆಟ್ಟಿ (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ), ಸ್ಮಿತಾ ಆರ್ ಯಳಮೇಲಿ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ), ವಿಜಯಲಕ್ಷ್ಮೀ ರುದ್ರಯ್ಯ ಹಿರೇಮಠ, ಜುಬೇದಾಬೇಗಂ,  ಅರ್ಚನಾ, ಪ್ರೀತಿ ಕೋರೆ, ಸವಿತಾ ಬಮ್ಮಗೋಳ, ಯಶೋಧಾ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.