ADVERTISEMENT

‘ಹೊತ್ತಿನ ಊಟ ಬಿಟ್ಟಾದರೂ ಶಿಕ್ಷಣ ಕೊಡಿ’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 5:35 IST
Last Updated 3 ಸೆಪ್ಟೆಂಬರ್ 2017, 5:35 IST

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಅನ್ನು ಮುಸ್ಲಿಮರು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ಇಲ್ಲಿನ ಐತಿಹಾಸಿಕ ದಖನಿ ಈದ್ಗಾ, ಶಾಹಿ ಈದ್ಗಾ, ಜಾಮೀಯಾ ಮಸೀದಿ, ಮಲೀಕ್ ಜಹಾನ್ ಮಸೀದಿ, ಖಡ್ಡೇ ಮಸಜೀದ್, ಬುಖಾರಿ ಮಸಜೀದ್, ಅಂಡೂ ಮಸೀದಿ, ಯಾಸೀನ್ ಮಸೀದಿ, ಧಾತರಿ ಮಸೀದಿ ಸೇರಿದಂತೆ ವಿವಿಧ ಮಸೀದಿಗಳಲ್ಲಿ ನಮಾಜ್ ಸಲ್ಲಿಸಿದರು.

ಧರ್ಮಗುರುಗಳಿಂದ `ಬಯಾನ್' (ಪ್ರವಚನ) ಆಲಿಸಿ, ನಂತರ ಲೋಕ ಕಲ್ಯಾಣಕ್ಕಾಗಿ ದುವಾ (ಪ್ರಾರ್ಥನೆ) ಮಾಡಿದರು. ನಗರದ ಎಲ್ಲೆಡೆ ಬೆಳಿಗ್ಗೆ ಯಿಂದಲೇ ಬಕ್ರೀದ್ ಸಂಭ್ರಮ ಕಳೆ ಕಟ್ಟಿತ್ತು. ಪ್ರತಿಯೊಬ್ಬ ಮುಸ್ಲಿಮರು  ಮಸೀದಿ, ಈದ್ಗಾಗಳತ್ತ ಹೆಜ್ಜೆ ಹಾಕುತ್ತಿ ರುವ ದೃಶ್ಯ ಕಂಡು ಬಂದಿತು. ವಿಶೇಷ ಟೋಪಿ, ವಿವಿಧ ಬಗೆಯ ಅತ್ತರ, ಹಚ್ಚಿ ಕೊಂಡು ನಮಾಜ್ ಸಲ್ಲಿಸಿದರು.

ನಿರ್ಗತಿಕರೊಂದಿಗೆ ಬಕ್ರೀದ್‌ ಆಚರಿಸಿ: ಒಂದು ಹೊತ್ತಿನ ಊಟ ಕಡಿಮೆ ಮಾಡಿದರೂ ಚಿಂತೆಯಿಲ್ಲ, ಆದರೆ ಮಕ್ಕಳಿಗೆ ಮಾತ್ರ ಉತ್ತಮ ಶಿಕ್ಷಣ ನೀಡಿ ಎಂದು ಹಜರತ್ ಸೈಯ್ಯದ್ ತನ್ವೀರ್ ಪೀರಾ ಹಾಶ್ಮಿ ಕರೆ ನೀಡಿದರು.

ADVERTISEMENT

ಐತಿಹಾಸಿಕ ದಖನಿ ಈದ್ಗಾ ಮೈದಾನದಲ್ಲಿ ನಮಾಜ್ ನಂತರ ವಿಶೇಷ ಬಯಾನ್ (ಪ್ರವಚನ) ನೀಡಿದ ಅವರು, ಶಿಕ್ಷಣಕ್ಕೆ ಮಹತ್ವ ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಶಿಕ್ಷಣ ಬದುಕಿನ ಬೆಳಕು. ಹೀಗಾಗಿ ಒಂದು ಹೊತ್ತಿನ ಊಟ ಕಡಿಮೆ ಮಾಡಿದರೂ ಪರವಾಗಿಲ್ಲ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ಆಗ ಅವರ ವರ್ತಮಾನ, ಭವಿಷ್ಯ ಉಜ್ವಲವಾಗಿ ರೂಪುಗೊಳ್ಳುತ್ತದೆ ಎಂದರು.

ಪವಿತ್ರ ಬಕ್ರೀದ್ ಹಬ್ಬ ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಅಲ್ಲಾಹನ ಮೇಲೆ ಅವರು ಇರಿಸಿದ ಅಚಲ ಭಕ್ತಿ, ನಂಬಿಕೆಯ ಪ್ರತೀಕವಾಗಿ ಆಚರಿಸಲಾಗುತ್ತದೆ. ಬದುಕಿನ ದಾರಿ ತೋರಿದ ಪ್ರವಾದಿಗಳ ಜೀವನಾದರ್ಶ ಗಳು ನಮಗೆ ಮಾರ್ಗದರ್ಶಿಯಾಗಿವೆ. ಪ್ರವಾದಿ ಇಬ್ರಾಹಿಂ ಅವರ ಮಗನಾದ ಇಸ್ಮಾಯಿಲ್‌ನನ್ನು ಅತಿಯಾಗಿ ಪ್ರೀತಿಸು ತ್ತಿದ್ದರು. ದೇವರ ಸಂದೇಶದಂತೆ ಇಬ್ರಾಹಿಂ ಅವರು ತನ್ನ ಮಗ ಇಸ್ಮಾಯಿಲ್‌ನನ್ನು ಬಲಿದಾನ ಮಾಡಲು ಸಿದ್ಧನಾಗುತ್ತಾನೆ.

ಇದಕ್ಕೆ ಮಗನು ಸಹ ಒಪ್ಪಿಗೆ ನೀಡುತ್ತಾನೆ. ಇಂತಹ ದೇವಪ್ರೀತಿ ಪಡೆದ ಪ್ರವಾದಿ ಇಬ್ರಾಹಿಂರನ್ನು ನೆನಸ ಬೇಕಾಗಿದೆ. ವಿಶ್ವ ಮಾನವನಾಗಿ ಜಗತ್ತಿನ ಲ್ಲಿರುವ ಕೋಮುವಾದ, ಭಯೋತ್ಪಾ ದನೆ ನಾಶ ಪಡಿಸಿ ಬಡವ - ಶ್ರೀಮಂತ ಭೇದ ಅಳಿಸಿ ಹಾಕಬೇಕು ಎಂದರು.

ಜಗತ್ತಿನ ಅನೇಕ ರಾಷ್ಟ್ರಗಳಲ್ಲಿರುವ ನಾಗರಿಕರು ಇಂದು ಹಜ್ ಯಾತ್ರೆಯಲ್ಲಿ ಒಂದೇ ತರಹದ ಉಡುಪಿನಲ್ಲಿ ಭಗ ವಂತನನ್ನು (ಅಲ್ಲಾಹ) ನೆನಸುತ್ತಾರೆ. ದೇವರನ್ನು ನಮಗೆಲ್ಲವನ್ನು ನೀಡಿದ್ದಾನೆ. ಸಂಪಾದಿಸಿದ ಆಸ್ತಿಯಲ್ಲಿ ಬಡವರಿಗೂ, ಹಸಿದವನಿಗೂ ಪಾಲ ಇರುತ್ತದೆ. ಅರ್ಥ ವಿಲ್ಲದ ಮೂಢನಂಬಿಕೆ ಅಳಿಸಿ ಹಾಕುವ ಸಂಕಲ್ಪ ತಾಳಬೇಕು.

ನಾವೆಲ್ಲರೂ ಭಾರ ತೀಯರು ಎಲ್ಲರೊಂದಿಗೆ ಪ್ರೀತಿ ಮಮತೆ ಯಿಂದ ಬದುಕನ್ನು ಸಾಗಿಸಬೇಕು. ಯುವಕರು ಸಮಾಜದ ಮತ್ತು ಕುಟುಂಬದ ಜವಾಬ್ದಾರಿಯನ್ನು ಅರ್ಥ ಪೂರ್ಣವಾಗಿ ನಿಬಾಯಿಸಬೇಕು. ಎಲ್ಲ ರೊಂದಿಗೆ ಸಹನೆ ತಾಳ್ಮೆಯಿಂದ ವರ್ತಿ ಸಬೇಕು. ಇವತ್ತಿನ ಹಬ್ಬ ನಿರ್ಗತಿಕರೊಂದಿಗೆ ಆಚರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ, ವಿಡಿಎ ಅಧ್ಯಕ್ಷ ಆಜಾದ್ ಪಟೇಲ್, ಹಾಸಿಂಪೀರ ವಾಲೀಕಾರ, ಜಾವೇದ್ ಜಮಾದಾರ, ಅಬೂಬಕರ ಬಾಗವಾನ, ಎಂ.ಸಿ.ಮುಲ್ಲಾ, ಮೈನು ದ್ದೀನ್ ಲೋಣಿ, ಪ್ರಶಾಂತ ದೇಸಾಯಿ, ಯೂಸೂಫ್ ಬೆಣ್ಣೆಶಿರೂರ, ಎಂ.ಎಂ. ಸುತಾರ, ಡಿ.ಎಚ್.ಕಲಾಲ, ಡಿ.ಎಸ್. ಮುಲ್ಲಾ, ಮುಜಾವರ ಮಾಸ್ತರ, ಬಶೀರ ಬುದ್ನೂರ, ನಜೀರ ಶಾರಪಾದೆ, ಶಬ್ಬೀರ್ ಢಾಲಾಯತ್, ಪೀರಾ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.