ADVERTISEMENT

‘ಹೋರಾಟದಿಂದ ಹಿಂದೆ ಸರಿಯಿರಿ; ಇಲ್ಲ ಪೀಠ ತ್ಯಜಿಸಿ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 10:02 IST
Last Updated 8 ನವೆಂಬರ್ 2017, 10:02 IST

ವಿಜಯಪುರ: ‘ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃಂತ್ಯುಜಯ ಸ್ವಾಮೀಜಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟದಿಂದ ಹಿಂದೆ ಸರಿಯಬೇಕು. ಇಲ್ಲವೇ ಪೀಠ ತ್ಯಜಿಸಬೇಕು’ ಎಂದು ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಭೀಮನಗೌಡ ಬಿರಾದಾರ (ನಾಗರಾಳ ಹುಲಿ) ಆಗ್ರಹಿಸಿದರು.
‘ಸ್ವಾಮೀಜಿ ಹೋರಾಟದಿಂದ ವಿಮುಖರಾಗಬೇಕು.

ಅಥವಾ ಪಂಚಮಸಾಲಿ ಸಮಾಜದ ಹೆಸರು ಬಳಸಬಾರದು. ಪ್ರತ್ಯೇಕ ಧರ್ಮ ಹೋರಾಟಕ್ಕೆ ಪಂಚಮಸಾಲಿ ಸಮಾಜದ ಶೇ 80ಕ್ಕಿಂತ ಹೆಚ್ಚು ಜನರ ವಿರೋಧ ಇದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸ್ವಾಮೀಜಿಗೆ ರಾಜಕೀಯ ಮುಖ್ಯವೋ, ಪ್ರತ್ಯೇಕ ಧರ್ಮದ ಹೋರಾಟ ಮುಖ್ಯವೋ ಅಥವಾ ಪಂಚಮಸಾಲಿ ಸಮಾಜದ ಹಿತ ಮುಖ್ಯವೋ ಎಂಬುದನ್ನು ಮೊದಲು ನಿರ್ಧರಿಸಲಿ ಎಂದು ಅವರ ಹೇಳಿದರು.

ADVERTISEMENT

‘ಈಗಾಗಲೇ ತಮ್ಮ ಹೇಳಿಕೆ ಬಗ್ಗೆ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಅನಗತ್ಯ ವಿವಾದ ಸೃಷ್ಟಿಸುವುದು ಬೇಡ’ ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಬಿ.ಎಂ.ಪಾಟೀಲ ದೇವರಹಿಪ್ಪರಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಮುಖಂಡರನ್ನು ಸಮಾಧಾನಪಡಿಸಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.