ADVERTISEMENT

‘ಹಳೇ ಪಿಂಚಣಿ ಪದ್ಧತಿ ಜಾರಿಗೆ ಬರಲಿ’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 7:32 IST
Last Updated 5 ಫೆಬ್ರುವರಿ 2018, 7:32 IST

ಬಸವನಬಾಗೇವಾಡಿ: ನೂತನ ಪಿಂಚಣಿ ಯೋಜನೆ ನೌಕರರಿಗೆ ಮಾರಕವಾಗಿದೆ. ನೌಕರರಿಗೆ ನಿವೃತ್ತಿ ನಂತರ ಮಾಸಿಕವಾಗಿ ಪಿಂಚಣಿ ಹಣ ಸಿಗದೇ ಇರುವುದರಿಂದ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮಂಗಾನವರ ಹೇಳಿದರು.

ಪಟ್ಟಣದ ಎಂ.ಪಿ.ಎಸ್‌ ಶಾಲೆಯ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರ ವಿಚಾರ ಸಂಕಿರಣ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರ ರೂಪಿಸುವ ಪ್ರತಿಯೊಂದು ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ನೌಕರರು ಮಹತ್ವದ ಪಾತ್ರ ವಹಿಸುತ್ತಾರೆ. ಸರ್ಕಾರದ ಕೆಲಸವನ್ನು ಶ್ರೇಷ್ಠ ಕೆಲಸವೆಂದು ಕಾರ್ಯನಿರ್ವಹಿಸುವ ನೌಕರರ ಹಿತವನ್ನು ಕಾಪಾಡುವ ಕೆಲಸ ಸರ್ಕಾರ ಮಾಡಬೇಕು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ADVERTISEMENT

ನೂತನ ಪಿಂಚಣಿ ಯೋಜನೆಯಿಂದ ಬಾಧಿತರಾಗಿರುವ ನೌಕರರ ಹಕ್ಕು ಬಾಧ್ಯತೆಗಳ ರಕ್ಷಣೆಗಾಗಿ ಸರ್ಕಾರಿ ನೌಕರರ ಸಂಘ ಹೋರಾಟ ಮಾಡಲು ಸದಾ ಸಿದ್ದ ಎಂದು ಹೇಳಿದರು. ಸಭೆಯಲ್ಲಿ ಹೊನ್ನಪ್ಪ ಗೊಳಸಂಗಿ, ರವಿಂದ್ರ ಹೂಗಾರ, ಬಸವರಾಜ ಚಿಂಚೋಳಿ, ಉದಯ ಕೊಟ್ಯಾಳ, ಎಸ್‌.ಜಿ.ಪರಮಗೊಂಡ, ಚಿದಾನಂದ ಹೂಗಾರ, ಶರಣಪ್ಪ ಮಾದರ, ಎಸ್‌.ಬಿ.ದಳವಾಯಿ, ಆರ್.ಎಂ.ಬೆಳ್ಳುಬ್ಬಿ, ಎಸ್‌.ಬಿ.ಬಾಗಾನಗರ, ಕೊಟ್ರೇಶ ಹೆಗಡ್ಯಾಳ, ಅನಿಲ ಬಬಲೇಶ್ವರ, ಮಹೇಂದ್ರ ಬಡಿಗೇರ, ವಿ.ಐ.ಕೊಟ್ಯಾಳ, ಜಗನ್ನಾಥ ಬಿ.ಆರ್‌ ಇತರರು ಇದ್ದರು. ಸಭೆಯಲ್ಲಿ ಸಂಘದ ನೂತನ ಸಂಚಾಲಕರನ್ನಾಗಿ ವಿಜಯಕುಮಾರ ರಾಠೋಡ, ಸಹ ಸಂಚಾಲಕರನ್ನಾಗಿ ಸಂತೋಷ ಬೂದಿಹಾಳ ಅವರನ್ನು ನೇಮಕ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.