ADVERTISEMENT

ಕಾಲುವೆಗೆ ನೀರು; ಅಕ್ವಾಡಕ್ಟ್‌ಗೆ ಬಾಗಿನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 7:22 IST
Last Updated 6 ಫೆಬ್ರುವರಿ 2018, 7:22 IST

ವಿಜಯಪುರ: ‘ಮಲಘಾಣ ಪಶ್ಚಿಮ ಕಾಲುವೆಯ 118 ಕಿ.ಮೀ.ನಲ್ಲಿ 100 ಕಿ.ಮೀ. ಕಾಲುವೆ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ನಾಲ್ಕು ವರ್ಷದ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಲಾಗಿದೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಮುಳವಾಡ ಏತ ನೀರಾವರಿ ಯೋಜನೆ, ಮಲಘಾಣ ಪಶ್ಚಿಮ ಕಾಲುವೆ, 105ನೇ ಕಿ.ಮೀ.ನಿಂದ -118ನೇ ಕಿ.ಮೀ.ವರೆಗೆ ನೀರು ಹರಿಸುವ ಕಾರ್ಯಕ್ಕೆ ಹಾಗೂ ಹೆಬ್ಬಾಳಹಟ್ಟಿ ಹತ್ತಿರ 110 ಕಿ.ಮೀ.ನಲ್ಲಿ ನಿರ್ಮಿಸಿರುವ ಅಕ್ವಾಡಕ್ಟ್‌ಗೆ ಭಾನುವಾರ ಬಾಗಿನ ಅರ್ಪಿಸಿದ ಸಚಿವರು ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.

‘ಮುಳವಾಡ ಏತ ನೀರಾವರಿ ಯೋಜನೆಯಡಿ ವಿಜಯಪುರ ಮುಖ್ಯ ಕಾಲುವೆ (202 ಕಿ.ಮೀ), ಮಲಘಾಣ ಪಶ್ಚಿಮ ಕಾಲುವೆ (118 ಕಿ.ಮೀ) ಬೃಹತ್ ಕಾಲುವೆಗಳಾಗಿದ್ದು, ವಿಜಯಪುರ ಮುಖ್ಯ ಕಾಲುವೆ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕೂಡಗಿ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಮುಕ್ತಾಯಗೊಂಡ ನಂತರ ಕಾಲುವೆಗೆ ನೀರು ಹರಿಸಲಾಗುವುದು.

ADVERTISEMENT

ಮಲಘಾಣ ಪಶ್ವಿಮ ಕಾಲುವೆ 118 ಕಿ.ಮೀ. ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, 105 ಕಿ.ಮೀ.ಯವರೆಗೆ ಅಕ್ಟೋಬರ್‌ನಿಂದ ನೀರು ಹರಿಸಲಾಗುತ್ತಿದ್ದು, ಹೆಬ್ಬಾಳಹಟ್ಟಿ ಬಳಿ ನಿರ್ಮಿಸಿರುವ ಅಕ್ವಾಡಕ್ಟ್‌ ಕಾಮಗಾರಿ ಪೂರ್ಣಗೊಳಿಸಿ, ಕೊನೆಯ ತುದಿ 118ನೇ ಕಿ.ಮೀ.ಯವರೆಗೆ ಭಾನುವಾರದಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ’ ಎಂದರು.

ಹೆಬ್ಬಾಳಟ್ಟಿ ಗ್ರಾಮಸ್ಥರ ಪರವಾಗಿ ಅಶೋಕ ಕಾಖಂಡಕಿ, ಸಿದ್ದರಾಯ ಪೂಜಾರಿ, ಹೊನ್ನಮಲ್ಲಪ್ಪ ಹಟ್ಟಿ, ರೇವಣಪ್ಪ ಬ್ಯಾಕೋಡ, ಸಂಗಪ್ಪ ಬಸರಿಗಿ, ಸಿದ್ದರಾಯ ಪ್ರಧಾನಿ, ಸಚಿವ ಎಂ.ಬಿ.ಪಾಟೀಲ ದಂಪತಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಉಮೇಶ ಕೋಳಕೂರ, ಕಲ್ಪನಾ ಮಹೇಶ ಪಾಟೀಲ, ಸಿದ್ಧಲಿಂಗಯ್ಯ ಹಿರೇಮಠ, ಕಸ್ತೂರಿ ಕಾಖಂಡಕಿ, ವಿದ್ಯಾರಾಣಿ ತುಂಗಳ, ಸುನಂದಾ ಬ್ಯಾಕೋಡ ಉಪಸ್ಥಿತರಿದ್ದರು. ಗುತ್ತಿಗೆದಾರ ಜೆ.ಎನ್.ಶೆಟ್ಟಿ, ಸುಭಾಸ ಶೆಟ್ಟಿ ಅವರನ್ನು ಸಹ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.