ADVERTISEMENT

ಅಕ್ರಮ ಮರಳು ಕಡಿವಾಣಕ್ಕೆ ಕಠಿಣಕ್ರಮ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 9:53 IST
Last Updated 16 ಏಪ್ರಿಲ್ 2017, 9:53 IST
ಯಾದಗಿರಿಯಲ್ಲಿ ವಿವಿಧ ಪ್ರಕರಣಗಳಲ್ಲಿ ತನಿಖೆ ನಡೆಸಿ ಯಶಸ್ವಿಯಾದ ಪೊಲೀಸ್ ತನಿಖಾಧಿಕಾರಿಗಳಿಗೆ ಶನಿವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿಂಗ್‌ ಮಾರ್ಬನ್ಯಾಂಗ್ ನಗದು ಬಹುಮಾನ ಮತ್ತು ಪ್ರಶಂಸೆ ಪತ್ರ ವಿತರಿಸಿದರು
ಯಾದಗಿರಿಯಲ್ಲಿ ವಿವಿಧ ಪ್ರಕರಣಗಳಲ್ಲಿ ತನಿಖೆ ನಡೆಸಿ ಯಶಸ್ವಿಯಾದ ಪೊಲೀಸ್ ತನಿಖಾಧಿಕಾರಿಗಳಿಗೆ ಶನಿವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿಂಗ್‌ ಮಾರ್ಬನ್ಯಾಂಗ್ ನಗದು ಬಹುಮಾನ ಮತ್ತು ಪ್ರಶಂಸೆ ಪತ್ರ ವಿತರಿಸಿದರು   

ಯಾದಗಿರಿ: ‘ಅಕ್ರಮ ಮರಳು ದಂಧೆ ಯಲ್ಲಿ ತೊಡಗಿಕೊಂಡವರ ವಿರುದ್ಧ ಪೊಲೀಸ್‌ ಇಲಾಖೆ ಕಠಿಣ ಕ್ರಮ ಕೈಗೊಳ್ಳ ಲಿದೆ. 379 ಸೆಕ್ಷನ್ ಬಳಸಿ ವಾಹನ ಮಾಲೀಕರು ಮತ್ತು ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಇದಕ್ಕೆ ಜಿಲ್ಲಾಧಿಕಾರಿ ಅವರಿಂದ ವಿಶೇಷ ಅನುಮತಿ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿಂಗ್‌ ಮಾರ್ಬನ್ಯಾಂಗ್ ತಿಳಿಸಿದರು.

‘ಭೀಮಾ ಮತ್ತು ಕೃಷ್ಣಾ ನದಿ ಪಾತ್ರ ದಲ್ಲಿ ಅಕ್ರಮ ಮರಳು ದಂಧೆಗೆ ಸಂಬಂಧಿ ಸಿದಂತೆ ದಾಳಿ ನಡೆಸಿ ಒಟ್ಟು 106 ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ. 137 ವಾಹನ ವಶಕ್ಕೆ ಪಡೆದು 206 ಆರ ೋಪಿಗಳನ್ನು ಬಂಧಿಸಲಾಗಿದೆ’ ಎಂದು ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ವಿವಿಧ ಠಾಣೆ ಗಳಲ್ಲಿ ಒಟ್ಟು 43 ಪ್ರಕರಣ ದಾಖಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 52 ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು ₹ 89,645 ನಗದು ವಶ ಪಡಿಸಿಕೊಳ್ಳಲಾಗಿದೆ. ಇಸ್ಪೀಟ್ ಜೂಜಾ ಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸ್‌ ತಂಡಗಳು ಒಟ್ಟು 409 ಮಂದಿ ವಿರುದ್ಧ ಪ್ರಕರಣ ದಾಖಲಿ ಸಿಕೊಂಡಿವೆ. ₹ 3,93,026 ನಗದು ವಶ ಪಡಿಸಿಕೊಳ್ಳ ಲಾಗಿದೆ’ ಎಂದು ವಿವರಿಸಿದರು.

ADVERTISEMENT

ಜಿಲ್ಲೆಯ ವಿವಿಧ ನಗರಗಳಲ್ಲಿ ಸಂಚಾರ ನಿಯಮ ಪಾಲಿಸದ ದ್ವಿಚಕ್ರ ವಾಹನ ಸವಾರರ ವಿರುದ್ಧ 10,452 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿಎ.  ಐಎಂವಿ ಕಾಯ್ದೆಯಡಿ ಒಟ್ಟು ₹16,94,600 ದಂಡ ವಿಧಿಸಲಾಗಿದೆ’ ಎಂದು ವಿವರಿಸಿದರು.‘ಶಹಾಪುರ, ಯಾದಗಿರಿ, ಗುರುಮ ಠಕಲ್, ವಡಗೇರಾ, ಗ್ರಾಮೀಣ ಮತ್ತು ನಗರ ಠಾಣೆಗಳಲ್ಲಿ ದಾಖಲಾಗಿದ್ದ ಏಳು ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಸಂಪೂ ರ್ಣಗೊಂಡು ಆರೋಪಿಗಳಿಗೆ ದಂಡ ಸಹಿತ ಶಿಕ್ಷೆ ವಿಧಿಸಲಾಗಿದೆ‘ ಎಂದರು.

ಪ್ರಕರಣಗಳ ತನಿಖೆ ನಡೆಸಿ, ಯಶಸ್ವಿಯಾದ ಮಲ್ಲಿಕಾರ್ಜುನ್ ಡಪ್ಟಿನ್, ಭಾಗವಾಡ, ಚೌಧರಿ, ಅಂಬರಾಯ ಕಮಾನ್‌ಮನಿ ಮತ್ತು  ನ್ಯಾಯಾ ಲಯದಲ್ಲಿ ವಾದ ಮಂಡಿಸಿದ ಸರ್ಕಾರಿ ವಕೀಲ ಎಸ್.ಅನಂತರೆಡ್ಡಿ ಅವರಿಗೆ ಪೊಲೀಸ್ ಇಲಾಖೆಯಿಂದ ನಗದು ಬಹುಮಾನ ಮತ್ತು ಪ್ರಶಂಸೆ ಪತ್ರ ವಿತರಿಸಲಾಯಿತು.ಅಪರಾಧ ವಿಭಾಗದ ಪಿಐ ವಿಜಯ ಮುರಗುಂಡಿ, ಶಹಾಪುರ ಸಿಪಿಐ ಅಂಬ ರಾಯ ಕಮಾನ್‌ ಮನಿ, ಡಿವೈಎಸ್ ಪಿ.ಕೆ.ಚೌಧರಿ, ನಗರ ಸಿಪಿಐ ಬಾಲಚಂದ್ರ ಲಕ್ಕಂ, ನಗರ ಠಾಣೆ ಪಿಎಸ್‌ಐ ಸುನೀಲ್‌ ಕುಮಾರ್ ಮೂಲಿಮನಿ ಪತ್ರಿಕಾಗೋಷ್ಠಿ ಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.