ADVERTISEMENT

ಕೇಂದ್ರದ ಅನುದಾನದಲ್ಲಿ ರಾಜ್ಯದ ಹಲವು ಭಾಗ್ಯಗಳು: ಗುರುಪಾಟೀಲ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 10:08 IST
Last Updated 8 ನವೆಂಬರ್ 2017, 10:08 IST

ಕೆಂಭಾವಿ: ಪ್ರಧಾನಮಂತ್ರಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ಒಳಿತಿಗಾಗಿ ಹಲವಾರು ಜನಪರ ಯೋಜನೆಗಳನ್ನು ನೀಡಿದೆ ಎಂದು ಶಾಸಕ ಗುರುಪಾಟೀಲ ಸಿರವಾಳ ಹೇಳಿದರು. ಪಟ್ಟಣದ ಕೇದಾರಲಿಂಗ ಕಟ್ಟೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ ಕಿಟ್ ವಿತರಿಸಿ ಮಾತನಾಡಿದರು.

ಕೇಂದ್ರ ಸರ್ಕಾರದಿಂದ ಅನುದಾನವನ್ನು ಪಡೆದು ಅಕ್ಕಿ ಮತ್ತು ಗೋಧಿಯನ್ನು ರಾಜ್ಯ ಸರ್ಕಾರ ವಿತರಿಸುತ್ತಿದೆ, ಜೊತೆಗೆ ಕೇಂದ್ರ ದಿಂದ ಬಂದ ಅನುದಾನದಲ್ಲಿ ರಾಜ್ಯ ಸರ್ಕಾರ ಹಲವು ಭಾಗ್ಯಗಳನ್ನು ನೀಡುತ್ತಿದೆ ಹೊರತು ತನ್ನ ಸ್ವಂತ ಹಣದಿಂದಲ್ಲ, ರಾಜ್ಯ ಸರ್ಕಾರ ಬಡ ಜನರಿಗೆ ಕೇವಲ ದೌರ್ಭಾಗ್ಯಗಳನ್ನೆ ನೀಡಿದೆ ಎಂದು ಟೀಕಿಸಿದು.

ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕಾಗಿ ಹೊಗೆ ಮುಕ್ತ ಭಾರತಕ್ಕೆ ಪ್ರಧಾನಮಂತ್ರಿ ಉಜ್ವಲ್ ಯೋಜನೆ ಪೂರಕವಾಗಿದೆ, ವಲೆ ಊದಿ ಹೊಗೆಯಲ್ಲಿ ಅಡುಗೆ ಮಾಡುವ ಗ್ರಾಮೀಣ ಭಾಗದ ಮಹಿಳೆಯರ ಕಷ್ಟವನ್ನು ಅರಿತ ಮೋದಿಜ ಅವರು ಬಿಪಿಎಲ್ ಕಾರ್ಡದಾರರಿಗೆ ಉಚಿತವಾಗಿ ಗ್ಯಾಸ್ ನೀಡುತ್ತಿದ್ದಾರೆ.

ADVERTISEMENT

ಇದರಿಂದ ಮಹಿಳೆಯರು ಅನುಭವಿಸುತ್ತಿದ್ದ ತೊಂದರಗಳು ದೂರಾಗಿದೆ ಎಂದ ಅವರು, ಉಚಿತ ಗ್ಯಾಸ್ ಪಡೆದುಕೊಂಡವರು ಗ್ಯಾಸ್ ಬಗ್ಗೆ ಯಾವುದೇ ಅನುಮಾನ ಬೇಡ. ಅದರ ಉಪಯೋಗ ಮತ್ತು ಸುರಕ್ಷತೆಯ ಬಗ್ಗೆ ಪಟ್ಟಣದ ವಿತರಕರ ಹತ್ತಿರ ಸಂಪೂರ್ಣ ಮಾಹಿತಿ ಪಡೆದು ಬಳಕೆ ಮಾಡಬೇಕು. ಪ್ರತಿಯೊಬ್ಬ ಗ್ಯಾಸ್ ಕನೆಕ್ಷನ್ ಪಡೆಯದ ಬಿಪಿಎಲ್ ಕಾಡರ್್ದಾರರು ಗ್ಯಾಸ್ ವಿತರಕರನ್ನು ಸಂಪರ್ಕಿಸಿ ಗ್ಯಾಸ್ ಸಂಪರ್ಕ ಪಡೆದುಕೊಳ್ಳಬೇಕು ಎಂದು ಹೇಳೀದರು.

ಪುರಸಭೆ ಸದಸ್ಯರಾದ ಶಂಕ್ರಪ್ಪ ದೇವೂರ, ಗುರು ಕುಂಬಾರ, ವಿಕಾಸ ಸೊನ್ನದ, ಮುಖಂಡರಾದ ಶರಣಪ್ಪ ಬಂಡೋಳಿ, ಮಶಾಕಸಾಬ ಸಾಸನೂರ, ಹಣಮಂತ್ರಾಯ ಯಲಗೋಡ, ಈರಣ್ಣ ಸೊನ್ನದ, ರವೀಂದ್ರ ಮಿರ್ಜಿ, ಸಂಗಣ್ಣ ತುಂಬಗಿ, ದೇವು ಕವಾಲ್ದಾರ, ಭೀಮರಾಯ ದೊರಿ, ಕೆಕೆಎನ್ ಸದ್ದಾಂ, ಸಿದ್ದಣ್ಣ ಅಂಗಡಿ, ರವಿ ಸೊನ್ನದ, ಮಾಳಪ್ಪ ರಾಜಾಪುರ, ಬಸವಣ್ಣೆಪ್ಪ, ಪ್ರಶಾಂತ ದೊಡ್ಡಮನಿ, ಚಾಂದಪಾಶಾ, ಕೃಷ್ಣ ಪರಸನಹಳ್ಳಿ, ರವಿ ಅಂಗಡಿ, ನಾಗಪ್ಪ ಶಹಾಪುರ, ಪರಶುರಾಮ, ಆನಂದ ಇದ್ದರು. ಭೀಮನಗೌಡ ಕಾಚಾಪುರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.