ADVERTISEMENT

ನಾರಾಯಣಪುರ; ರೈತರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 9:48 IST
Last Updated 12 ಏಪ್ರಿಲ್ 2017, 9:48 IST

ಹುಣಸಗಿ: ರಾಂಪೂರ ಏತ ನೀರಾವರಿ ಕಾಲುವೆಗಳಿಗೆ ಏ. 25ರವರೆಗೆ ನೀರು ಹರಿಸುವಂತೆ  ನಾರಾಯಣಪುರದ ಮುಖ್ಯ ಎಂಜಿನಿಯರ್ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಧರಣಿ ಎರಡನೇ ದಿನವೂ ಮುಂದುವರೆಯಿತು.

ಈ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಸಿದ್ದು ಬಂಡಿ ಹಾಗೂ ಜಿ.ಪಂ ಸದಸ್ಯ ಬಸನಗೌಡ ಕಂಬಳಿ ಸೇರಿ ರೈತ ಮುಖಂಡರು ಪಾಲ್ಗೊಂಡಿದ್ದರು.
ನಿಗದಿಪಡಿಸಿರುವ ನೀರು ಬಿಡಬೇಕು ಅಲ್ಲಿಯ ತನಕ ಕದಲುವ ಮಾತೇ ಇಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತರು ಏಕಾಏಕಿ ರಸ್ತೆ ತಡೆಗೆ ಮುಂದಾದರು. ಆಗ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಮನವೊಲಿಸಲು ಪ್ರಯತ್ನಿಸಿದರು. ಜಲಾಶಯದಲ್ಲಿ ಸಂಗ್ರಹವಿರುವ ನೀರು ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಿಕೊಳ್ಳಲು ಸಂಗ್ರಹಿಸಲಾಗಿದೆ. ಕೃಷಿಗಾಗಿ ನೀರು ಇಲ್ಲ ಎಂದು ಹೇಳಿದರು.

ADVERTISEMENT

ಕೆಲ  ಪ್ರತಿಭಟನಾಕಾರರು ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಪರಿಸ್ಥಿತಿಯನ್ನು ಹತೋಟಿಗೆ ತರಲು  ಪ್ರತಿಭಟನಾ ನಿರತರನ್ನು  ಬಂಧಿಸಿ  ಬಿಡುಗಡೆ ಮಾಡಲಾಯಿತು.

ನಿಗಮದ ಕಚೇರಿಗೆ ಭದ್ರತೆ:  ಕಚೇರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ.ಕಚೇರಿ ಮುಖ್ಯದ್ವಾರದ ಬಳಿ ಬ್ಯಾರಿಕೇಡ್‌ ಹಾಕಿ. ಪೊಲೀಸರನ್ನು ಹಾಗೂ ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.