ADVERTISEMENT

ನಿಮ್ಮ ರಕ್ಷಣೆಗಾಗಿ ಪೊಲೀಸ್ ವ್ಯವಸ್ಥೆ: ನರೇಂದ್ರರೆಡ್ಡಿ

​ಪ್ರಜಾವಾಣಿ ವಾರ್ತೆ
Published 16 ಮೇ 2017, 9:21 IST
Last Updated 16 ಮೇ 2017, 9:21 IST

ಗುರುಮಠಕಲ್: ಪೊಲೀಸ್ ವ್ಯವಸ್ಥೆಯು ಸಾಮಾನ್ಯ ಜನರ ರಕ್ಷಣೆ, ಭದ್ರತೆ ಹಾಗೂ ಹಕ್ಕುಗಳ ರಕ್ಷಣೆಗಾಗಿ ಕಾರ್ಯನಿರ್ವಹಿ ಸುತ್ತದೆ. ಅದನ್ನು ಇನ್ನೂ ಪರಿಣಾಮ ಕಾರಿಯಾಗಿ ಜಾರಿಮಾಡಲೆಂದೇ ‘ಜನಸ್ನೇಹಿ ಪೊಲೀಸ್ ಯೋಜನೆ’ಯ ಮೂಲಕ ‘ನಿಮ್ಮ ಬೀಟ್ ಪೊಲೀಸ್’ ಎಂದು ಒಬ್ಬರನ್ನು ನೇಮಕ ಮಾಡ ಲಾಗಿದೆ ಎಂದು ಪೊಲೀಸ್ ಇಲಾಖೆಯ ನರೇಂದ್ರರೆಡ್ಡಿ ತಿಳಿಸಿದರು.

ಈಚೆಗೆ ಹತ್ತಿರದ ನಜರಾಪೂರ ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ನೇಹಿ ಪೊಲೀಸ್ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುಧಾರಿತ ನೂತನ ಬೀಟ್ ವ್ಯವಸ್ಥೆ ಯಿಂದ ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿಯ ನಡುವೆ ಸ್ನೇಹಪರ ವಾತಾವರಣ ನಿರ್ಮಿಸುವ ಮೂಲಕ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಣೆಯನ್ನು ಮಾಡುವ ಯೋಜನೆ ಇದಾಗಿದೆ ಎಂದರು.

ಗುರುಮಠಕಲ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವೈ.ಎನ್.ಗುಂಡೂರಾವ್ ಅವರ ಮಾರ್ಗದರ್ಶನದಲ್ಲಿ ನಮ್ಮ ಠಾಣೆಯ ವ್ಯಾಪ್ತಿಯ ಪ್ರತಿಯೊಂದು ಗ್ರಾಮಕ್ಕೂ ನೂತನ ಬೀಟ್ ವ್ಯವಸ್ಥೆಯಂತೆ ಒಬ್ಬೊಬ್ಬ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಗ್ರಾಮಸ್ಥರೊಂದಿಗೆ ಅವರು ಬೆರೆತು ಕಾರ್ಯನಿರ್ವಹಿಸ ಲಿದ್ದಾರೆ ಎಂದು ಹೇಳಿದರು.

ADVERTISEMENT

ಗ್ರಾಮದಲ್ಲಿ ಯಾವುದೇ ಕಾನೂನುಬಾಹಿರ ಘಟನೆಗಳಾಗಿರಲಿ ಅಥವಾ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಘಟನೆಗಳಾಗಲಿ ಜರುಗಿದರೆ ಅಥವಾ ಜರುಗುವ ಸಂಭವವಿದ್ದರೆ ಅವುಗಳನ್ನು ಶೀಘ್ರವೇ ಗುರುತಿಸಿ ಜನರ ಶಾಂತಿ, ನೆಮ್ಮದಿಯನ್ನು ಉಳಿಸುವ ಕಾರ್ಯಕ್ಕೆ ಈ ವ್ಯವಸ್ಥೆ ನೆರವಾಗಲಿದೆ ಎಂದರು.

ನಜರಾಪೂರ ಗ್ರಾಮದ ಬೀಟ್ ಸಿಬ್ಬಂದಿಯ ಮಾಹಿತಿ ಹಾಗೂ ಮೊಬೈಲ್ ನಂಬರ್ ನಮೂದಿಸಿದ ಮಾಹಿತಿ ಫಲಕವನ್ನು ಈ ಸಂದರ್ಭದಲ್ಲಿ ಅಳವಡಿ ಸಲಾಯಿತು.
ಕಾರ್ಯಕ್ರಮದಲ್ಲಿ ಶರಣರೆಡ್ಡಿ ಗೌಡ, ಲಕ್ಷ್ಮಾರೆಡ್ಡಿ, ಸೋಮನಾಥ ರೆಡ್ಡಿ, ಹುಸೇನ್ ಪಾಷಾ ಸೇರಿದಂತೆಗ್ರಾಮದ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.