ADVERTISEMENT

ಬಸ್‌ನಿಲ್ದಾಣದ ಉದ್ಘಾಟನೆ ಶೀಘ್ರ: ಸಾಲಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 14:37 IST
Last Updated 19 ಏಪ್ರಿಲ್ 2015, 14:37 IST

ಯಾದಗಿರಿ: ನಗರದಲ್ಲಿನ ಬಸ್‌ನಿಲ್ದಾಣದ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಶೀಘ್ರ ಉದ್ಘಾಟನೆ ಮಾಡಲಾಗುವುದು ಎಂದು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಭೀಮಣ್ಣ ಸಾಲಿ ತಿಳಿಸಿದರು.

ಶನಿವಾರ ನಗರದಲ್ಲಿ ನಿರ್ಮಿಸಲಾಗು ತ್ತಿರುವ ನೂತನ ಬಸ್‌ನಿಲ್ದಾಣಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ಮುಕ್ತಾಯ ಹಂತದಲ್ಲಿರುವ ನೂತನ ಬಸ್ ನಿಲ್ದಾಣವನ್ನು ಜುಲೈ ಅಂತ್ಯದವರೆಗೆ ಲೋಕಾರ್ಪಣೆ ಮಾಡಲಾಗುವುದು. ಈಗಾಗಲೇ ಈ ಬಸ್ ನಿಲ್ದಾಣ ಉದ್ಘಾಟನೆ ಆಗಬೇಕಿತ್ತು. ಆದರೆ ವಿಳಂಬವಾಗಿದ್ದು, ಇನ್ನಷ್ಟು ವಿಳಂಬ ಆಗದಂತೆ ಎಚ್ಚರಿಕೆ ವಹಿಸಬೇಕು. ಆದಷ್ಟು ಬೇಗ ಕಾಮಗಾರಿ ಗುಣಮಟ್ಟದಿಂದ ಮುಗಿಸುವಂತೆ ಅಧಿ ಕಾರಿಗಳಿಗೆ ಸೂಚಿಸಿದರು.

ಸಂಸ್ಥೆಯಲ್ಲಿ ಈಗಾಗಲೇ ಚಾಲಕ, ನಿರ್ವಾಹಕ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಗಿಯುವ ಹಂತ ದಲ್ಲಿದೆ. ಶೀಘ್ರದಲ್ಲಿ ಅವುಗಳ ಭರ್ತಿ ಕಾರ್ಯ ಆರಂಭವಾಗಲಿದೆ. ಹುದ್ದೆಗಳು ಭರ್ತಿಯಾದ ನಂತರ ದೂರದ ಊರು ಗಳಿಗೆ ಮತ್ತು ಬಸ್ ವಂಚಿತ ಗ್ರಾಮೀಣ ಪ್ರದೇಶಗಳಿಗೆ ಬಸ್‌ಗಳನ್ನು ಓಡಿಸಲಾಗು ತ್ತದೆ ಎಂದು ಹೇಳಿದರು.

ನರ್ಮ್‌ ಯೋಜನೆಯಡಿ ವಿನೂತನ ವಾದ 16 ಬಸ್‌ಗಳು ಯಾದಗಿರಿಗೆ ಬಿಡು ಗಡೆಯಾಗಿದ್ದು, ಸದ್ಯಕ್ಕೆ 5 ಬಸ್‌ಗಳು ಬಂದಿವೆ. ಈ ಬಸ್‌ಗಳಲ್ಲಿ ಸಿಸಿಟಿವಿ ಸೇರಿ ದಂತೆ ವಯಸ್ಕರು ಮತ್ತು ಚಿಕ್ಕಮಕ್ಕಳು ಸುಲಭವಾಗಿ ಬಸ್ ಹತ್ತುವ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಬೇರೆ ಜಿಲ್ಲೆಗಳಿಂದ ಬರುವ ಪ್ರಯಾಣಿ ಕರಿಗೆ ಯಾದಗಿರಿ ಜಿಲ್ಲಾ ಕೇಂದ್ರ ದಲ್ಲಿ ಪ್ರಯಾಣಿಸಲು ಒಂದು ದಿನದ ಪಾಸ್‌ಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಅವರು, ಜನತೆ ಆದಷ್ಟು ಸರ್ಕಾರಿ ಬಸ್‌ಗ ಳಲ್ಲೇ ಪ್ರಯಾಣಿಸುವಂತೆ ಮನವಿ ಮಾಡಿ ದರು. ಶ್ರೀನಿವಾಸರೆಡ್ಡಿ ಕಂದ ಕೂರ,  ಮಹಿಪಾಲರೆಡ್ಡಿ ಹತ್ತಿಕುಣಿ,  ಅಯ್ಯಣ್ಣ ಠಾಣಗುಂದಿ, ಶಿವರಾಜ ಜಕಾತಿ, ಮಂಜುನಾಥ ದಾಸನಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.