ADVERTISEMENT

ಸುರಪುರ: ಗ್ರಾಪಂ ನೌಕರರ ಧರಣಿ

​ಪ್ರಜಾವಾಣಿ ವಾರ್ತೆ
Published 14 ಮೇ 2017, 8:18 IST
Last Updated 14 ಮೇ 2017, 8:18 IST

ಸುರಪುರ: ಗ್ರಾಮ ಪಂಚಾಯಿತಿ ನೌಕರರು ವಿವಿಧ ಬೇಡಿಕೆಗಳ ಈಡೇರಿ ಕೆಗೆ ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಗುರುವಾರ  ಧರಣಿ ನಡೆಸಿದರು. ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ ಉಳ್ಳೆಸೂಗೂರು ಮಾತನಾಡಿ, ‘ಫೆಬ್ರವರಿ ತಿಂಗಳಿನಿಂದ ತಡೆ ಹಿಡಿದಿ ರುವ ಪಿಡಿಒ, ಕಾರ್ಯದರ್ಶಿ, ಲೆಕ್ಕ ಸಹಾಯಕರ ವೇತನ ತಕ್ಷಣ ಬಿಡುಗಡೆ ಮಾಡಬೇಕು. ವೇತನವನ್ನು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಪಾವತಿಸಬೇಕು’ ಎಂದು ಒತ್ತಾಯಿಸಿದರು.

‘ಪಿಡಿಒ ಹುದ್ದೆಗೆ ಬಡ್ತಿ ಹೊಂದಿದ ನೌಕರರ ಬಾಕಿ ವೇತನ ಬಿಡುಗಡೆ ಮಾಡಿ ಅವರ ವೇತನವನ್ನು ಪಿಡಿಒ ಹುದ್ದೆಗೆ ನಿಗದಿಪಡಿಸಬೇಕು.ಈ ವಿಷಯದಲ್ಲಿ ಅನಗತ್ಯವಾಗಿ ವಿಳಂಬ ಅನುಸರಿಸಿದ ವಿಷಯ ನಿರ್ವಾಹಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ಕಾರ್ಯದರ್ಶಿ ಹುದ್ದೆಗೆ ಬಡ್ತಿ ಹೊಂದಿದ ಕರ ವಸೂಲಿಗಾರರ ಸೇವಾ ಅವಧಿಯನ್ನು ಪರಿಗಣಿಸಲು ಅನು ಮೋದನೆಗಾಗಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು.  ಕಂಪ್ಯೂಟರ್ ಆಪರೇಟರ್‌ ಗಳ ಬಾಕಿ ವೇತನ ನೀಡಬೇಕು. 2013-–14ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನೆ ಇಲಾಖೆಯ ವಿಚಾರಣೆ ಮುಕ್ತಾಯಗೊಳಿಸಬೇಕು. 2007 ರಿಂದ 2012 ರ ವರೆಗಿನ ನರೇಗಾ ಯೋಜನೆ ಯ ಲೋಕಾಯುಕ್ತರ ಪ್ರಕರಣ ಹಿಂಪಡೆ ಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

’ಮೇ 22 ರೊಳಗಾಗಿ ಬೇಡಿಕೆ ಈಡೇರದಿದ್ದಲ್ಲಿ 25 ರಿಂದ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಅಹೋ ರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು. ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಚಂದ್ರಶೇಖರ ಜೇವರ್ಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಅನ್ಸರ್ ಪಟೇಲ್, ಬಾಪುಗೌಡ ಪಾಟೀಲ, ಪರಮಣ್ಣ ಹೂಗಾರ, ರಂಗನ ಗೌಡ ಪಾಟೀಲ, ಭೀಮನಗೌಡ, ಬಸವ ರಾಜ ಗುಂತಾ, ಮುನವರ್ ಬಾಷಾ, ಭೀಮರಾಯ ಮಕಾಶಿ, ಬಸವರಾಜ ಬಂಡೋಳಿ, ರಾಮನಗೌಡ ದದ್ದಲ, ಚಂದಪ್ಪ ಕಿಲಾರಿ, ಬಲಭೀಮರಾವ ಕುಲಕರ್ಣಿ, ಹಣಮಂತ ಮಕಾಶಿ, ಜಯ ತೀರ್ಥ ಜೋಶಿ, ಶಿವಕುಮಾರ ಚೌದ್ರಿ, ಮಲ್ಲಿಕಾರ್ಜುನ ಕೋರಿ, ಎಸ್.ಎಂ. ಬಿರಾದಾರ, ಎಸ್.ಜಿ.ಕೋರಿ, ಮಲ್ಲೇಶಪ್ಪ ಗೌಡ, ಸಂಗಪ್ಪ ಬಡಿಗೇರ, ವೆಂಕಟೇಶ ಕಟ್ಟಿಮನಿ, ಕೆಂಚಪ್ಪ.ಎಚ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.