ADVERTISEMENT

‘ಸ್ಥಳೀಯರಿಗೆ ಉದ್ಯೋಗ ಒದಗಿಸಲು ಕೈಗಾರಿಕೆಗಳ ಸ್ಥಾಪನೆ’

ಭೀಮನಹಳ್ಳಿ: ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:12 IST
Last Updated 18 ಏಪ್ರಿಲ್ 2017, 5:12 IST
ಯಾದಗಿರಿ: ‘ಗುರುಮಠಕಲ್ ಕ್ಷೇತ್ರದ ಜನತೆಗೆ ಸ್ಥಳೀಯವಾಗಿ ಉದ್ಯೋಗ  ಒದ ಗಿಸಿಕೊಡುವ ಕಡೇಚೂರ-ಬಾಡಿಯಾಳ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡಲಾಗುತ್ತಿದೆ’ ಎಂದು ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ರಾವ್ ಚಿಂಚನಸೂರ್ ಹೇಳಿದರು.  
 
ಸಮೀಪದ ಭೀಮನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಮಂಜೂರಾದ ₹15ಲಕ್ಷ ಮೊತ್ತದ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಈಚೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 
 
ಕೈಗಾರಿಕೆಗಳ ಸ್ಥಾಪನೆಯಿಂದ ಸೈದಾ ಪುರ ಹಾಗೂ ಸುತ್ತಲಿನ ಪ್ರದೇಶದ ಭೂಮಿಗಳ ಮೌಲ್ಯ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಅಕ್ಷರಸ್ಥ ಮತ್ತ ಅನಕ್ಷರಸ್ಥರಿಗೆಲ್ಲಾ ಉದ್ಯೋಗ ಸೌಲಭ್ಯ ದೊರೆಯಲಿದೆ’ ಎಂದರು. 
 
‘ಕರ್ನಾಟಕ ಇತಿಹಾಸಲ್ಲೇ ಅತ್ಯುತ್ತಮ ಬಜೆಟ್ ಮಂಡಿಸಿದ ಕೀರ್ತಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲು ತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ಬಡ ಹಾಗೂ ಹಿಂದುಳಿದ ಜನಾಂಗದ ಅಭಿವೃದ್ಧಿ ಮಾಡಲಾಗಿದೆ.
 
ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಹತ್ತಾರು ಜನಪರ ಯೋಜನೆಗಳು ಮುಂದಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೆಟ್ಟಿಲುಗಳಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 
ಸೈದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಹತ್ತಿಕುಣಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಲಿಂಗಪ್ಪ ಪುಟಗಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಚಂದ್ರಶೇಖರ ವಾರದ ಬಸವರಾಜಯ್ಯ ಸ್ವಾಮಿ ಬದ್ದೇ ಪಲ್ಲಿ, ಪಶುಭಾಗ್ಯ ಯೋಜನೆ ಆಯ್ಕೆ ಸಮಿತಿ ಸದಸ್ಯ ರವಿಕುಮಾರ ಹೊನ ಗೇರಾ, ಎಪಿಎಂಸಿ ನಿರ್ದೇಶಕ ಪ್ರಭು ಲಿಂಗ ವಾರದ, ರಾಘವೇಂದ್ರ ಸಂಬ್ರ, ಸಿದ್ದಲಿಂಗರೆಡ್ಡಿ ಭೀಮನಹಳ್ಳಿ, ಸಾಬಣ್ಣ ಸೈದಾಪುರ ಮುಂತಾದವರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.