ADVERTISEMENT

33 ಸಾವಿರ ಹೆಕ್ಟೇರ್‌ ಬೆಳೆ ಹಾನಿ: ಪರಿಹಾರಇಲ್ಲ

ಅಧಿಕಾರಿಗಳ ವರದಿಗೆ ತಾ.ಪಂ. ಸದಸ್ಯರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2014, 10:19 IST
Last Updated 1 ಅಕ್ಟೋಬರ್ 2014, 10:19 IST

ಯಾದಗಿರಿ: ಅತಿವೃಷ್ಟಿಯಿಂದ ತಾಲ್ಲೂ ಕಿನಲ್ಲಿ ಒಟ್ಟು 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಗೀಡಾದ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ನವೀದ್ ಅಫ್ಜಲ್‌ ಹೇಳಿದರು. ತಾಲ್ಲೂಕು ಪಂಚಾಯಿತಿ ಸಭಾಂಗ ಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಸದಸ್ಯ ಸಣ್ಣ ಹಣಂತಪ್ಪ ಬಳಿಚಕ್ರ ಮಾತನಾಡಿ, ಸರ್ಕಾರದ ಯೋಜನೆ ಗಳು ಗ್ರಾಮೀಣ ಭಾಗದ ಜನತೆಗೆ ತಲುಪಲಿಲ್ಲ ಎಂದರೆ ಜನ ನಮ್ಮನ್ನು ಪ್ರಶ್ನಿಸುತ್ತಾರೆ. ತಾಲ್ಲೂಕಿನಲ್ಲಿ ಅತಿವೃಷ್ಟಿ ಯಿಂದ ಜನ ಕಂಗೆಟ್ಟಿದ್ದಾರೆ. ಬೆಳೆವಿಮೆ ಸೇರಿದಂತೆ ಮಳೆಯಿಂದ ಹಾನಿಗೀಡಾದ ಬೆಳೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೀರಾ ಎಂದು ಕೃಷಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ, ತಾಲ್ಲೂಕಿನಲ್ಲಿ ಬೆಳೆಗಳು ಶೇ 25ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ ಎಂದು ಕೃಷಿ ಅಧಿಕಾರಿ ಮಹ್ಮದ್ ನವೀದ್‌ ಅಫ್ಜಲ್‌ ತಿಳಿಸಿದರು. ಅಧಿಕಾರಿಗಳ ಉತ್ತರಕ್ಕೆ ತೃಪ್ತರಾಗದ ಸದಸ್ಯೆ ಶ್ಯಾಮಲಾ ವಾರದ, ಅಲ್ರೀ ವರದಿ ಸಲ್ಲಿಸಿದ್ದೀರಿ. ಆದರೆ, ಕೆಳಗೆ ಪರಿಹಾರ ನೀಡುವ ಬಗ್ಗೆ ಇದರಲ್ಲಿ ಪ್ರಸ್ತಾಪ ಮಾಡಿಲ್ಲ ಎಂದು ಪ್ರಶ್ನಿಸಿದರು.

ಈ ಬಗ್ಗೆ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು ಎಂಬ ಕೃಷಿ ಅಧಿಕಾರಿಗಳ ಉತ್ತರಕ್ಕೆ ಕೆಂಡಾಮಂಡಲರಾದ ಸದಸ್ಯ ರಾದ ಹಣಮಂತ ಲಿಂಗೇರಿ, ಸದಾಶಿವ ರಡ್ಡಿ ಬೆಳಗೇರಾ, ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು ಎಂದ ಮೇಲೆ ನೀವೇಕೆ ಸಭೆಗೆ ಬಂದಿದ್ದೀರಿ ಎಂದು ಕಿಡಿಕಾರಿದರು.

ಬೆಳೆಹಾನಿ ಬಗ್ಗೆ ಸರಿಯಾದ ಮಾಹಿತಿ ನೀಡದಿರುವುದು ಸರಿಯಲ್ಲ. ಶಹಾಪುರ, ಸುರಪುರ ತಾಲ್ಲೂಕಿನಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ. ಆದರೆ, ನಮ್ಮಲ್ಲಿ ಹಾನಿ ಆಗಿಲ್ಲ ಎಂದರೆ ಹೇಗೆ?. ಈ ಬಗ್ಗೆ ಮರು ಪರಿಶೀಲನೆ ಮಾಡ ಬೇಕು. ಅಧಿಕಾರಿಗಳು ಈ ರೀತಿ ಬೇಜ ವಾಬ್ದಾರಿಯಿಂದ ಕೆಲಸ ಮಾಡಿದರೆ, ರೈತರಿಗೆ ತೊಂದರೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಹಿಸಲು ಸಾಧ್ಯವಿಲ್ಲ: ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಧಿಕಾರಿ ಗಳು ಸಭೆಗೆ ಬರದಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪ್ರಕಾಶರಡ್ಡಿ ನಜರಾಪುರ ಹೇಳಿದರು. ಅಧಿಕಾರಿಗಳಿಗೆ ಪ್ರತಿಸಭೆಗೆ ಹಾಜ ರಾಗಿ ಎಂದು ಕಡ್ಡಾಯವಾಗಿ ಸೂಚಿಸ ಲಾಗುತ್ತಿದೆ. ಆದರೆ, ನಮ್ಮ ಸೂಚನೆಗೆ ಬೆಲೆ ನೀಡುತ್ತಿಲ್ಲ. ಅಧಿಕಾರಿಗಳು ಕಳೆದ ಸಭೆಗೆ ಯಾಕೆ ಬಂದಿಲ್ಲ ಎಂಬ ಬಗ್ಗೆ ಕಾರಣ ನೀಡಬೇಕು ಎಂದರು.

ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಅನುಪಾಲನಾ ವರದಿ ಯನ್ನು ಬಹುತೇಕ ಇಲಾಖೆಗಳ ಅಧಿಕಾ ರಿಗಳು ನೀಡುತ್ತಿಲ್ಲ. ಜನಪ್ರತಿಧಿನಿಗಳ ಬಗ್ಗೆ ಅಧಿಕಾರಿಗಳು ತಾತ್ಸಾರ ಮನೋ ಭಾವನೆ ಸರಿಯಲ್ಲ. ತಾಲ್ಲೂಕಿನ ಅಭಿವೃ ದ್ಧಿಗೆ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಮಧ್ಯೆ ಸಮನ್ವಯ ಅವಶ್ಯ ಎಂದರು.

ಸದಸ್ಯ ಹಣಮಂತಪ್ಪ, ಕೃಷಿ ಇಲಾಖೆಯಲ್ಲಿ ಅನುವುಗಾರರ ಹುದ್ದೆ ಗಳನ್ನು ಭರ್ತಿ ಮಾಡಿಕೊಳ್ಳಲಾಗಿದ್ದು, ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿಲ್ಲ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾವಂತರಿಗೆ ಅನ್ಯಾಯವಾಗಿದ್ದು, ಕೂಡಲೇ ಈ ನೇಮಕಾತಿ ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದರು.

ಉಪಾಧ್ಯಕ್ಷ ಶರಣಪ್ಪ ಮೋಟ್ನಳ್ಳಿ, ತಾಲ್ಲೂಕಿನ ವಸತಿ ಶಾಲೆಗಳಲ್ಲಿ, ಶೌಚಾಲಯ, ಊಟದ ವ್ಯವಸ್ಥೆ ಸಮ ರ್ಪಕವಾಗಿಲ್ಲ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂದರು. ಈ ಬಾರಿ ಬಳಿಚಕ್ರ, ಸೈದಾಪುರ, ಗುರುಮಠಕಲ್, ಚಂಡ್ರಕಿ, ಪುಟಪಾಕ್, ಹೊನಗೇರಾ, ಯರಗೋಳ, ಮಾದ್ವಾರ್, ಕೊಂಕಲ್, ಯಲ್ಹೇರಿ, ಗಾಜರಕೋಟ್, ಕಂದಕೂರ ಗ್ರಾಮಗಳಲ್ಲಿ ವಸತಿ ನಿಲಯಗಳಲ್ಲಿ ವಿವಿಧ ಸಣ್ಣ ಪುಟ್ಟ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ಜಲಾನಯನ, ತೋಟ ಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷೆ ಭೀಮ ಬಾಯಿ, ಕಾರ್ಯನಿರ್ವಾಹಕ ಅಧಿಕಾರಿ ಹುಲಿಗೆಪ್ಪ, ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.