ADVERTISEMENT

ಪ್ರಜಾವಾಣಿ ಕ್ವಿಜ್ 13

ಎಸ್.ಎನ್.ಶ್ರೀನಿವಾಸಮೂರ್ತಿ
Published 11 ಮಾರ್ಚ್ 2018, 19:40 IST
Last Updated 11 ಮಾರ್ಚ್ 2018, 19:40 IST

1. ಶಿಸ್ತಿನ ಶಿವಪ್ಪ ನಾಯಕ ಯಾವ ಸಂಸ್ಥಾನದ ಪ್ರಸಿದ್ಧ ದೊರೆ?

ಅ) ವಿಜಯನಗರ ಆ) ಕೆಳದಿ ಇ) ಮೈಸೂರು ಈ) ಕೊಡಗು

2. ‘ಭಾರತ್ ಏಕ್ ಖೋಜ್’ ಧಾರಾವಾಹಿಯನ್ನು ನಿರ್ದೇಶಿಸಿದವರು ಯಾರು?
ಅ )ಜದುನಾಥ್ ಆ) ಋತ್ವಿಕ್ ಘಟಕ್ ಇ) ಗೋವಿಂದ ನಿಹಲಾನಿ ಈ) ಶ್ಯಾಮ್ ಬೆನಗಲ್

ADVERTISEMENT

3. ಈಜಿಪ್ಟಿನ ಇತಿಹಾಸವನ್ನು ಕುರಿತಾದ ನಿರಂಜನರ ಕಾದಂಬರಿ ಯಾವುದು?
ಅ) ಮೃತ್ಯುಂಜಯ ಆ) ಸ್ವಾಮಿ ಅಪರಂಪಾರ ಇ) ಕಲ್ಯಾಣ ಸ್ವಾಮಿ ಈ) ಚಿರಸ್ಮರಣೆ

4. ಪಾಕಿಸ್ತಾನದ ಸೆನೆಟ್‍ಗೆ ಇತ್ತೀಚೆಗೆ ಆಯ್ಕೆಯಾದ ಹಿಂದೂ ಮಹಿಳೆ ಯಾರು?
ಅ) ಕೃಷ್ಣಕುಮಾರಿ ಕೊಲ್ಹಿ ಆ) ಕೃಷ್ಣ ಸಿಂಗ್ ಇ) ಕೃಷ್ಣ ಪವಾರ್ ಈ) ಕೃಷ್ಣ ಕೌಷಿಕ್

5. ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳನ್ನು ಏನೆಂದು ಕರೆಯಲಾಗುತ್ತದೆ?
ಅ) ಆಗ್ನೇಯ ರಾಜ್ಯಗಳು ಆ) ನೈಋತ್ಯ ರಾಜ್ಯಗಳು ಇ) ಈಶಾನ್ಯ ರಾಜ್ಯಗಳು ಈ) ವಾಯುವ್ಯ ರಾಜ್ಯಗಳು

6. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈಗಿನ ಅಧ್ಯಕ್ಷರು ಯಾರು?
ಅ) ಬರಗೂರು ರಾಮಚಂದ್ರಪ್ಪ ಆ) ನೆಲಮನೆ ದೇವೇಗೌಡ ಇ) ಜಿ.ಟಿ.ದೇವೇಗೌಡ ಈ) ಎಸ್.ಜಿ.ಸಿದ್ಧರಾಮಯ್ಯ

7. ಜಿ.ಡಿ.ಪಿಯು ಯಾವುದರ ವೃದ್ಧಿಯನ್ನು ಸೂಚಿಸುತ್ತದೆ?
ಅ) ವಿದೇಶಿ ಆರ್ಥಿಕತೆ ಆ) ದೇಶಿ ಆರ್ಥಿಕತೆ ಇ) ವ್ಯಕ್ತಿಯ ಆರ್ಥಿಕತೆ ಈ) ಸಂಸ್ಥೆಯ ಆರ್ಥಿಕತೆ

8. ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್‍ನಲ್ಲಿ ವಿಶ್ವದಾಖಲೆ ಮಾಡಿದ ಭಾರತೀಯ ಯಾರು?
ಅ) ಶಾಜರ್ ರಿಜ್ವಿ ಆ) ಜಿತು ರಾಯ್ ಇ) ಓಂಪ್ರಕಾಶ್ ಈ) ಮೆಹುಲಿ ಘೋಷ್

9. ಆಸ್ಟಿಯಾದ ಮೊಜಾರ್ಟನು ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ?
ಅ) ಕಲೆ ಆ) ಸಂಗೀತ ಇ) ಶಿಲ್ಪ ಈ) ಕ್ರೀಡೆ

10. ಇವುಗಳಲ್ಲಿ ನಯಸೇನ ಬರೆದ ಕೃತಿ ಯಾವುದು?
ಅ) ಧರ್ಮ ಪರೀಕ್ಷೆ ಆ) ಧರ್ಮಾಮೃತ ಇ) ಧರ್ಮದೀಕ್ಷೆ ಈ) ಧರ್ಮಕಾರಣ

ಹಿಂದಿನ ಸಂಚಿಕೆಯ ಸರಿಯುತ್ತರಗಳು:

1.ಇ) ಸತ್ಯಜಿತ್ ರೇ 2. ಆ) ತಮಿಳು 3. ಇ) ಶೇಕ್ಸ್‌ಪಿಯರ್‌ 4. ಆ) ಉಭಯ ವಾಸಿ 5. ಅ) ಫ್ರೀ ಪ್ರೆಸ್ ಜರ್ನಲ್ 6. ಆ) ಹುಲಿ ಗಣತಿ 7. ಈ) ಕಾಂಗ್ರೆಸ್ 8. ಅ) ಗುರುಪ್ರಸಾದ್ ಕಾಗಿನೆಲೆ 9. ಆ) ಕೆ.ಎಂ. ಮುನ್ಷಿ 10. ಈ) ಗುರುಗುಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.