ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 19:30 IST
Last Updated 16 ಏಪ್ರಿಲ್ 2017, 19:30 IST
ಮಲಾಲ ಯೂಸುಫ್‌ಝೈ
ಮಲಾಲ ಯೂಸುಫ್‌ಝೈ   

1) ವಿಶ್ವಸಂಸ್ಥೆ ನೀಡುವ ಪ್ರತಿಷ್ಠಿತ ‘ಶಾಂತಿದೂತ’ ಪ್ರಶಸ್ತಿಯನ್ನುಈ ವರ್ಷ ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟ ಕಾರ್ಯಕರ್ತೆ ಮಲಾಲ ಯೂಸುಫ್‌ಝೈ ಅವರಿಗೆ ನೀಡಲಾಗಿದೆ. ಇವರು ಪಾಕಿಸ್ತಾನದ ಯಾವ ಕಣಿವೆಯವರು? 
a) ಸ್ವಾತ್ ಕಣಿವೆ            b) ಸಿಂಧ್ ಕಣಿವೆ
c) ಬಲೂಚಿಸ್ತಾನ್ ಕಣಿವೆ 
d) ಪಂಜಾಬ್ ಕಣಿವೆ

2) 2016ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು ‘ಅಮರಾವತಿ’ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಈ ಚಿತ್ರದ ನಿರ್ದೇಶಕರು ಯಾರು?
a) ಅಭಯಸಿಂಹ  b) ಬಿ.ಎಂ. ಗಿರಿರಾಜ್
c) ಪಿ.ಶೇಷಾದ್ರಿ  d) ಎಂ. ಆರ್. ಗರಣಿ

3) ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಮಾಲ್ಕಂ ಟರ್ನಬುಲ್ ಅವರ ಭಾರತ ಪ್ರವಾಸ ಕೈಗೊಂಡು ಪ್ರಮುಖ ಆರು ಒಪ್ಪಂದಗಳಿಗೆ ಸಹಿ ಹಾಕಿದರು. ಇವರು ಯಾವ ದೇಶದ ಪ್ರಧಾನ ಮಂತ್ರಿಗಳು?
a) ಅಮೆರಿಕ  b) ಇಂಗ್ಲೆಂಡ್
c) ಆಸ್ಟ್ರೇಲಿಯಾ  d) ಜರ್ಮನಿ

4) ಬೆಂಗಳೂರಿನಲ್ಲಿ ನಾಗರಿಕರ ಸುರಕ್ಷತೆಗಾಗಿ ಹೊಯ್ಸಳ ವಾಹನಗಳನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ ‘ಪಿಂಕ್ ಹೊಯ್ಸಳ’ ವಾಹನಗಳನ್ನು ಈ ಕೆಳಕಂಡ ಯಾರ ತುರ್ತು ಸೇವೆಗೆ  ನಿಯೋಜಿಸಲಾಗಿದೆ? 
a) ಹಿರಿಯ ನಾಗರಿಕರು
b) ಅಂಗವಿಕಲರು   c) ಭಿಕ್ಷುಕರು
d) ಮಹಿಳೆಯರು ಮತ್ತು ಮಕ್ಕಳು

5) ತೀಸ್ತಾ ನದಿ ನೀರು ಹಂಚಿಕೆ ವಿವಾದ ಈ ಕೆಳಕಂಡ ಯಾವ ದೇಶಗಳ ಮಧ್ಯೆ ನಡೆಯುತ್ತಿದೆ?
a) ಭಾರತ–ಬಾಂಗ್ಲಾದೇಶ
b) ಬಾಂಗ್ಲಾದೇಶ–ಶ್ರೀಲಂಕಾ
c) ಭಾರತ–ಪಾಕಿಸ್ತಾನ
d) ಪಾಕಿಸ್ತಾನ–ಬಾಂಗ್ಲಾದೇಶ

6) ಮಾನವ ತ್ಯಾಜ್ಯಮುಕ್ತ ರೈಲ್ವೆ ಮಾರ್ಗವನ್ನು ಹಸಿರು ಕಾರಿಡಾರ್ ರೈಲ್ವೆ ಮಾರ್ಗ ಎಂದು ಕರೆಯಲಾಗುತ್ತದೆ. ದೇಶದಲ್ಲಿ ಒಟ್ಟು ಎಷ್ಟು ಹಸಿರು ಕಾರಿಡಾರ್ ರೈಲ್ವೆ ಮಾರ್ಗಗಳಿವೆ ? 
a) ಹತ್ತು  b) ಐದು
c) ಇಪ್ಪತ್ತು  d) ಮೂವತ್ತು

7) ಸಲಿಂಗಕಾಮಿಗಳ ಸಮುದಾಯದ ಸಂಕೇತವಾಗಿ ಕಾಮನಬಿಲ್ಲಿನ ಬಣ್ಣಗಳ ಬಾವುಟ ವಿನ್ಯಾಸ ಮಾಡಿದ್ದ ಅಮೆರಿಕ ಕಲಾವಿದ ಕಳೆದ ಮಾರ್ಚ್ 31(2017)ರಂದು ನಿಧನರಾದರು. ಅವರ ಹೆಸರು ಏನು?
a) ಹಾರ್ವೇ ಮಿಲ್ಕ್      b) ಚಾರ್ಲಿ ಡೇವಿಡ್‌
c) ಗಿಲ್ಬರ್ಟ್‌ ಬೇಕರ್‌ 
d) ಗಿಸ್ ವ್ಯಾನ್‌ ಸ್ಯಾಂಟ್‌

8) ದೇಶದಲ್ಲಿಯೇ ಅತಿದೊಡ್ಡ ಬ್ಯಾಂಕ್‌ ಆಗಿರುವ ‘ಭಾರತೀಯ ಸ್ಟೇಟ್‌ ಬ್ಯಾಂಕ್‌’ನಲ್ಲಿ (ಎಸ್‌ಬಿಐ)ಈ ಕೆಳಕಂಡ ಯಾವ ಬ್ಯಾಂಕ್‌ಗಳು ವಿಲೀನವಾಗಿವೆ?
a) ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌
b) ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು
c) ಸ್ಟೇಟ್‌ ಬ್ಯಾಂಕ್‌ ಆಫ್ ಪಟಿಯಾಲ
d) ಮೇಲಿನ ಎಲ್ಲವು

9)2018ರ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಮೊದಲ ತಂಡವಾಗಿ ಬ್ರೆಜಿಲ್ ಅರ್ಹತೆ ಪಡೆದಿದೆ. ಮುಂಬರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಆತಿಥ್ಯವನ್ನು  ಯಾವ ದೇಶ ವಹಿಸಿದೆ?
a)  ರಷ್ಯಾ b)  ಜರ್ಮನಿ
c) ಬ್ರೆಜಿಲ್   d)  ಇಂಗ್ಲೆಂಡ್

10) 149 ಸ್ಪಾಟ್‌ಲೈಟ್‌ಗಳನ್ನು ಜೋಡಿಸಿ ವಿಶ್ವದ ಅತಿ ದೊಡ್ಡ ಕೃತಕ ಸೂರ್ಯನನ್ನು ಸೃಷ್ಟಿ ಮಾಡಲಾಗಿದೆ. ಇದನ್ನು ಯಾವ ದೇಶದ ವಿಜ್ಞಾನಿಗಳು ನಿರ್ಮಾಣ ಮಾಡಿದ್ದಾರೆ? 
a) ಚೀನಾ ವಿಜ್ಞಾನಿಗಳು
b) ನಾಸಾ ವಿಜ್ಞಾನಿಗಳು (ಅಮೆರಿಕ)
c) ಇಸ್ರೋ ವಿಜ್ಞಾನಿಗಳು (ಭಾರತ)
d)ಜರ್ಮನಿ ಬಾಹ್ಯಾಕಾಶ ವಿಜ್ಞಾನಿಗಳು

ಉತ್ತರಗಳು: 1–a, 2–b, 3–c, 4–d, 5–a, 6–b, 7–c, 8–d,  9–a, 10–d

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT