ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 28 ಮೇ 2017, 19:30 IST
Last Updated 28 ಮೇ 2017, 19:30 IST

1)  ಆಫ್ರಿಕನ್ ಅಭಿವೃದ್ಧಿ ಬ್ಯಾಂಕ್‌ನ 52ನೇ ವಾರ್ಷಿಕ ಸರ್ವಸದಸ್ಯರ ಸಭೆ ಮೇ ತಿಂಗಳ 22 ರಿಂದ 26ರ ವರೆಗೆ ಯಾವ ಮಹಾನಗರದಲ್ಲಿ ನಡೆಯಿತು?  
a) ಗಾಂಧಿನಗರ   b) ಡರ್ಬಾನ್
c)  ನೈರೋಬಿ      d) ಹರಾರೆ

2) ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಹೊಸದಾಗಿ ಪತ್ತೆಯಾಗಿರುವ ಸೊಲಿಬಾಸಿಲಸ್ ಬ್ಯಾಕ್ಟೀರಿಯಾಗೆ ನಾಸಾ ಯಾವ ವಿಜ್ಞಾನಿಯ ಹೆಸರನ್ನು ಗೌರವಾರ್ಥವಾಗಿ  ನಾಮಕರಣ ಮಾಡಿದೆ?  
a)  ಜಾನ್ ಗುರ್ಡೊನ್ 
b)  ಡಾ.ಎ.ಪಿ.ಜೆ. ಅಬ್ದುಲ್ ಕಲಾಂ
c)  ಸ್ಟೀಫನ್ ಹಾಕಿನ್ಸ್‌ 
d) ಜೆನಿಫರ್ ಹಾಕಿನ್ಸ್

3)  ಇರಾನ್‌ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಸನ್‌ ರೌಹಾನಿ ಅವರು ಜಯ ಸಾಧಿಸಿ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಇದು ಸೇರಿದಂತೆ ಅವರು ಎಷ್ಟು ಸಲ ಅಧ್ಯಕ್ಷರಾಗಿದ್ದಾರೆ?     
a) ಎರಡನೇ ಸಲ    b) ಮೂರನೇ ಸಲ
c) ನಾಲ್ಕನೇ ಸಲ     d) ಐದನೇ ಸಲ

4)  ಪ್ರತಿಷ್ಠಿತ  ಗ್ರೀನ್ ಆಸ್ಕರ್ ಎಂದೇ ಹೆಸರಾದ ವೈಟ್ಲಿ ಪ್ರಶಸ್ತಿ ಯನ್ನು ಈ ಸಲ ಯಾರಿಗೆ ನೀಡಲಾಗಿದೆ? 
a) ಡಬ್ಲ್ಯೂಎಪ್‌ಎನ್‌ ಪ್ಯಾರ್ಟನ್‌ 
b) ಡೇವಿಡ್ ಅಟೆನ್‌ಬರೋ 
c) ಸಂಜಯ್ ಗುಬ್ಬಿ
d) ಮೊಹಮ್ಮದ್ ಆಲಿ ನವಾಜ್‌ 

5) ಹಣಕಾಸು ನೆರವು ನೀಡುವ ಕೇಂದ್ರ ಸರ್ಕಾರದ ‘ಇಂದಿರಾಗಾಂಧಿ ಮಾತೃತ್ವ ಸಹ­ಯೋಗ ಯೋಜನೆ’(ಐ.ಜಿ.ಎಂ.­ಎಸ್.ವೈ.) ಈ ಕೆಳಕಂಡ ಯಾರಿಗೆ ಸಂಬಂಧಿಸಿದೆ?  
a) ಗರ್ಭಿಣಿಯರು ಮತ್ತು ಬಾಣಂತಿಯರು
b) ನವ ವಿವಾಹಿತೆಯರು
c) ಮೂರು ಮಕ್ಕಳಿರುವ ತಾಯಂದಿರು
d) 50 ವರ್ಷ ಮೇಲ್ಪಟ್ಟ ತಾಯಂದಿರು

6) ಇತ್ತೀಚೆಗೆ ನಿಧನರಾದ  ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅನಿಲ್ ಮಾಧವ್ ದವೆ ಅವರು............?  
a) ಲೋಕಸಭಾ ಸದಸ್ಯರಾಗಿದ್ದರು     
b) ರಾಜ್ಯಸಭಾ ಸದಸ್ಯರಾಗಿದ್ದರು
c) ನಾಮನಿರ್ದೇಶಿತ ಸದಸ್ಯರಾಗಿದ್ದರು
d) ಆಂಗ್ಲೋ ಇಂಡಿಯನ್ ಸದಸ್ಯರಾಗಿದ್ದರು

7)  ನೀತಿ ಆಯೋಗದ ಕಾಯಂ ಸದಸ್ಯರಾದ, ವಿಜ್ಞಾನಿ ವಿಜಯ್ ಕುಮಾರ್ ಸಾರಸ್ವತ್ ಅವರನ್ನು ಯಾವ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಲಾಗಿದೆ? 
a) ಹಿಂದೂ ಬನಾರಸ ವಿಶ್ವವಿದ್ಯಾಲಯ
b) ಕೇಂದ್ರಿಯ ತಂತ್ರಜ್ಞಾನ ವಿಶ್ವವಿದ್ಯಾಲಯ
c) ಕೇಂದ್ರಿಯ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ
d)  ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ

8)  ಭಾರತದ ಮೊಟ್ಟಮೊದಲನೇ ಜೈವಿಕ ಶುದ್ಧೀಕರಣ ಘಟಕವನ್ನು ಮಹಾರಾಷ್ಟ್ರದ ಯಾವ ನಗರದಲ್ಲಿ ನಿರ್ಮಾಣ ಮಾಡಲಾಗಿದೆ? 
a) ಪುಣೆ             b) ಸೊಲ್ಲಪುರ
c) ನಾಗಪುರ       d) ಮುಂಬೈ

9) ಭಾರತದ ರಕ್ಷಣಾ ನಿರ್ವಹಣೆಯ ಪರಾಮರ್ಶೆಗಾಗಿ 2001ರಲ್ಲಿ ರಚಿಸಲಾಗಿರುವ ಸಮಗ್ರ ರಕ್ಷಣಾ ಸಿಬ್ಬಂದಿಯ (ಐಡಿಎಸ್)ಉಪ ಮುಖ್ಯಸ್ಥರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?
a) ಏರ್‌ಮಾರ್ಷಲ್‌  ಪಿ.ಎನ್. ಪ್ರಧಾನ್ 
b) ಏರ್‌ಮಾರ್ಷಲ್‌  ಪಿ. ಪಿ. ರೆಡ್ಡಿ
c) ಲೆ. ಜನರಲ್ ಸತೀಶ್‌ ದುವ  
d)  ಮೇಜರ್ ಕಾರ್ತೀಕೆಯನ್

10) ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ ) ವ್ಯವಸ್ಥೆ ಈ ಕೆಳಕಂಡ ಯಾವ ದಿನದಿಂದ ಜಾರಿಗೆ  ಜಾರಿಗೆ ಬರಲಿದೆ? 
      a) ಜೂನ್ 1       b) ಜೂನ್ 11
      c) ಜುಲೈ 1        d) ಜುಲೈ 31

ಉತ್ತರಗಳು: 1–a, 2–b, 3–a, 4–c, 5–a, 6–b, 7–d, 8–a,  9–a, 10–c

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.