ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2016, 19:30 IST
Last Updated 18 ಸೆಪ್ಟೆಂಬರ್ 2016, 19:30 IST

1) ಕೇಂದ್ರಿಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌)ಗೆ ನೂತನ ರಾಯಭಾರಿಯನ್ನಾಗಿ  ಯಾರನ್ನು ನೇಮಕ ಮಾಡಲಾಗಿದೆ ?
a) ದೀಪಿಕಾ ಪಡುಕೋಣೆ  b) ಪಿ.ವಿ. ಸಿಂಧು c) ಸಾಕ್ಷಿ ಸಿಂಗ್‌  d) ಆಲಿಯಾ ಭಟ್‌

2)  ಈ ಕೆಳಕಂಡ ಯಾವ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಅಂತರರಾಷ್ಟ್ರೀಯ ’ಏಷ್ಯನ್‌ ಟೆನಿಸ್‌ ಟೂರ್ನಿ’ (ಸೆ. 16 ರಿಂದ 18)ಅನ್ನು  ಆಯೋಜಿಸಲಾಗಿದೆ ?
a) ಶ್ರೀಲಂಕಾ b) ಭಾರತ
c) ಜಪಾನ್‌ d) ಭೂತಾನ್‌

3)  ಸೆಪ್ಟೆಂಬರ್‌ ತಿಂಗಳ ಮೊದಲ ವಾರದಲ್ಲಿ ಭಾರತಕ್ಕೆ  ಭೇಟಿ ನೀಡಿದ್ದ ಮ್ಯಾನ್ಮಾರ್  ದೇಶದ ಅಧ್ಯಕ್ಷರು ಯಾರು? 
a) ಯು.ಟಿನ್ ಕ್ಯಾವ್   b) ಆಂಗ್‌ ಸಾನ್‌ ಸೂಕಿ c) ಅಲ್ಮಾ ಮ್ಯಾಟರ್
d) ಸು ಅಲಿವಿನ್‌ ಡಾವ್‌

4) ಸೆ. 1ರಿಂದ ಎರಡು ದಿನಗಳ ಕಾಲ ನಡೆದ ಬ್ರಿಕ್ಸ್‌ ದೇಶಗಳ ಪ್ರವಾಸೋದ್ಯಮ ಸಮಾವೇಶ ಮಧ್ಯಪ್ರದೇಶ ರಾಜ್ಯದ ಯಾವ ಪ್ರವಾಸಿ ತಾಣದಲ್ಲಿ ನಡೆಯಿತು ?
a) ಉಜ್ಜಯಿನಿ b) ಖಜುರಾಹೊ
c) ಗ್ವಾಲಿಯಾರು d) ಇಂದೋರ್‌

5) 340 ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಿರುವ, ದೇಶದ ಏಕೈಕ ದ್ವೀಪ ಜಿಲ್ಲೆ ವಜೂಲಿ ನಗರ ಈ ಕೆಳಕಂಡ ಯಾವ ರಾಜ್ಯದಲ್ಲಿದೆ?
a) ನಾಗಾಲ್ಯಾಂಡ್‌ b) ಮಣಿಪುರ
c) ಅಸ್ಸಾಂ d) ಪುದುಚೆರಿ

6) ಚಾಮರಾಜ ನಗರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ  ಈ ಕೆಳಕಂಡ ಯಾವ ಪ್ರದೇಶವನ್ನು ‘ಕೃಷ್ಣಮೃಗ ವನ್ಯಜೀವಿ ತಾಣ’ ಎಂದು ಘೋಷಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
a) ರಾಣೆಬೆನ್ನೂರು b) ಮಧುಗಿರಿ
c) ಬಾಗೇಪಲ್ಲಿ d) ಉಮ್ಮತ್ತೂರು

7) ಬ್ರೆಜಿಲ್‌ ದೇಶದ ನೂತನ ಅಧ್ಯಕ್ಷರಾಗಿ ಈ ಕೆಳಕಂಡವರಲ್ಲಿ ಯಾರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು?
a) ದಿಲ್ಮಾ ರೌಸೆಫ್‌b) ಮೈಕಲ್‌ ಟೇಮರ್‌
c)  ಆ್ಯಂಡ್ರೋ ಟೈಸ್ಮನ್‌  d) ಮರೋನಾ ಆಲ್ಡಿಯೊ

8) ವ್ಯಾಟಿಕನ್‌ ಸಿಟಿಯಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ್‌ ತೆರೆಸಾ ಅವರಿಗೆ ಸಂತ ಪದವಿಯನ್ನು ಘೋಷಿಸಿದವರು ಯಾರು?
a) ಬರಾಕ್‌ ಒಬಾಮಾ b) ಮದರ್‌ ನಿರ್ಮಲ
c)  ಪೋಪ್ ಫ್ರಾನ್ಸಿಸ್  d) ಯಾರೂ ಅಲ್ಲ

9) ಭಾರತೀಯ ರಿಸರ್ವ್‌ ಬ್ಯಾಂಕ್‌ನ ನೂತನ ಗವರ್ನರ್‌ ಆಗಿ ಊರ್ಜಿತ್‌ ಪಟೇಲ್‌ ನೇಮಕಗೊಂಡಿದ್ದಾರೆ. ಇವರು ಎಷ್ಟನೇ ಗವರ್ನರ್‌ ?
a) 21 b) 22 c) 23  d) 24

10) ಕಾಲೇಜು ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಹೆಣ್ಣುಮಕ್ಕಳಿಗೆ ಉಚಿತ ಸ್ಕೂಟಿ ನೀಡುವ  ‘ ಸಿಎಂ ಸ್ಕೂಟಿ’ ಯೋಜನೆಯನ್ನು ಯಾವ ರಾಜ್ಯದಲ್ಲಿ ಜಾರಿಗೆ ತರಲಾಗಿದೆ?
a) ತಮಿಳುನಾಡು b) ಜಮ್ಮು ಮತ್ತು ಕಾಶ್ಮೀರಾ
c) ಪಶ್ಚಿಮ ಬಂಗಾಳ d) ರಾಜಸ್ತಾನ

ಉತ್ತರಗಳು: 1-b, 2-d, 3-a, 4-b, 5-c, 6-d, 7-b, 8-c, 9-d, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.