ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2016, 19:30 IST
Last Updated 9 ಅಕ್ಟೋಬರ್ 2016, 19:30 IST

1) ಇತ್ತೀಚೆಗೆ ಕೇಂದ್ರ ಸರ್ಕಾರ  ರಾಜ್ಯದ ನಾಲ್ಕು ನಗರಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯ ವ್ಯಾಪ್ತಿಗೆ  ಸೇರಿಸಿತು. ಈ ಕೆಳಕಂಡ ಯಾವ ನಗರ ಈ ಯೋಜನೆಯಲ್ಲಿ ಸ್ಥಾನ ಪಡೆದಿಲ್ಲ.
a) ಶಿವಮೊಗ b) ತುಮಕೂರು
c )ಮಂಗಳೂರು d) ಬೆಂಗಳೂರು ಗ್ರಾಮಾಂತರ

2) ಸೆಪ್ಟೆಂಬರ್‌ ತಿಂಗಳ ಮಧ್ಯಭಾಗದಲ್ಲಿ  ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ  ‘10 ವಾರಗಳ ಭಾರತೀಯ ಸಂಗೀತ ಉತ್ಸವಕ್ಕೆ’ ಯಾವ ದೇಶದಲ್ಲಿ ಚಾಲನೆ ನೀಡಲಾಯಿತು?
a) ಅಮೆರಿಕ b) ಜರ್ಮನಿ 
c) ಕೆನಡಾ d) ಆಸ್ಟ್ರೇಲಿಯಾ

3) ಕೆನ್ ಮತ್ತು  ಬೆಟ್ವಾ ನದೀಜೋಡಣೆ  ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ನೀಡಿದ್ದು , ಈ ಯೋಜನೆ  ಯಾವ ರಾಜ್ಯದಲ್ಲಿ ಅನುಷ್ಠಾನಕ್ಕೆ ಬರಲಿದೆ ? 
a) ರಾಜಸ್ತಾನ b) ಉತ್ತರ ಪ್ರದೇಶ
c) ಹರಿಯಾಣ d) ಮಧ್ಯಪ್ರದೇಶ

4) ಭಾರತ ಸರ್ಕಾರ ‘ಬರಾಕ್‌–8’ ಕ್ಷಿಪಣಿಯನ್ನು ಈ ಕೆಳಕಂಡ ಯಾವ ದೇಶದ  ಸಹಯೋಗದಲ್ಲಿ ನಿರ್ಮಾಣ ಮಾಡಿದೆ?
a) ಇಸ್ರೇಲ್‌ b) ಜರ್ಮನಿ
c) ಅಮೆರಿಕ d) ರಷ್ಯಾ

5) ಮುಂಬರುವ ಹಣಕಾಸು ವರ್ಷದಿಂದ (2017–18)  ರೈಲ್ವೆ ಬಜೆಟ್‌  ಅನ್ನು ಸಾಮಾನ್ಯ ಬಜೆಟ್‌ನಲ್ಲಿ  ವಿಲೀನಗೊಳಿಸಿ ಮಂಡಿಸುವುದಾಗಿ ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಿದೆ. ದೇಶದಲ್ಲಿ ಮೊಟ್ಟ ಮೊದಲ ರೈಲ್ವೆ ಬಜೆಟ್‌ ಯಾವ ವರ್ಷ ಮಂಡಿಸಲಾಯಿತು?
a) 1938 b) 1924
c) 1965 d) 1948

6) ರಾಜ್ಯ ಸರ್ಕಾರ ಇತ್ತಿಚೆಗೆ ಕರ್ನಾಟಕ ಅಬಕಾರಿ ಕಾಯ್ದೆ –1965ಕ್ಕೆ ತಿದ್ದುಪಡಿ ತರುವ ಮೂಲಕ ಯಾವ ಮರದಿಂದ ನಿರಾ ಇಳಿಸಲು ಅನುಮತಿ ನೀಡಿದೆ?
a) ತೆಂಗಿನ ಮರ b) ತಾಳೆ ಮರ
c) ಈಚಲು ಮರ d) ಅಡಕೆ ಮರ

7) ಜಗತ್ತಿನ ಅತಿ ದೊಡ್ಡ ಟೆಲಿಸ್ಕೋಪ್‌ ಅನ್ನು ಯಾವ ದೇಶ ನಿರ್ಮಾಣ ಮಾಡಿದೆ?
a) ಅಮೆರಿಕ b) ಚೀನಾ
c)  ರಷ್ಯಾ d) ಜಪಾನ್‌

8) ಕರ್ನಾಟಕ ಸರ್ಕಾರದ ‘ಗಾಂಧಿ ಪಥ ಗ್ರಾಮ ಪಥ’ ಎಂಬ ನೂತನ ಯೋಜನೆ  ಯಾವುದಕ್ಕೆ ಸಂಬಂಧಿಸಿದೆ?
a)  ಗ್ರಾಮೀಣ ಅಭಿವೃದ್ಧಿ
b) ಶೌಚಾಲಯ ಅಭಿವೃದ್ಧಿ
c) ರಸ್ತೆ  ಅಭಿವೃದ್ಧಿ  
d) ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ

9) ಮೊಲದ ಜಾತಿಗೆ ಸೇರುವ  ಪುಟ್ಟ ಸಸ್ತನಿ ‘ಪಿಕ’ ಎಂಬ ಹೊಸ   ಪ್ರಭೇದವನ್ನು ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರದ (ಎನ್‌ಸಿಬಿಎಸ್‌) ವಿಜ್ಞಾನಿಗಳು ಯಾವ ರಾಜ್ಯದಲ್ಲಿ ಪತ್ತೆ ಹಚ್ಚಿದ್ದಾರೆ ?
a) ಪಶ್ಚಿಮ ಬಂಗಾಳ
b) ಕರ್ನಾಟಕ
c) ಮಧ್ಯಪ್ರದೇಶ
d) ಸಿಕ್ಕಿಂ

10) ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನೀಡುವ 2016ನೇ ಸಾಲಿನ ‘ಕುವೆಂಪು ರಾಷ್ಟ್ರೀಯ ಪ್ರಶಸ್ತಿ’ಗೆ ಕನ್ನಡದ ಯಾವ ಸಾಹಿತಿ ಆಯ್ಕೆಯಾಗಿದ್ದಾರೆ?
a) ಸಿದ್ಧಲಿಂಗಯ್ಯ                    b) ದೇವನೂರು ಮಹಾದೇವ
c) ಚಂದ್ರಶೇಖರ ಕಂಬಾರ d) ಗಿರೀಶ್‌ ಕಾರ್ನಾಡ

ಉತ್ತರಗಳು: 1-d, 2-d, 3-d, 4-a, 5-b, 6-a, 7-b, 8-c, 9-d, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT