ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2016, 19:30 IST
Last Updated 30 ಅಕ್ಟೋಬರ್ 2016, 19:30 IST

1. ವಿಶ್ವಸಂಸ್ಥೆಯ ನೂತನ ಮಹಾಪ್ರಧಾನ ಕಾರ್ಯದರ್ಶಿಯಾಗಿ ಅಂಟೊನಿಯೊ ಗುಟೆರಸ್‌ ಅವರನ್ನು ಆಯ್ಕೆ ಮಾಡಲಾಗಿದೆ.  2017ರ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿರುವ ಅಂಟೊನಿಯೊ ಯಾವ ದೇಶದವರು?
a) ಪೋಲೆಂಡ್  b) ಪೋರ್ಚುಗಲ್
c)ಪೂರ್ವ ಆಫ್ರಿಕಾ    d) ಪೆರುಗ್ವೆ

2) ಭಾರತದಲ್ಲಿ 1932ರಿಂದ ಅಧಿಕೃತವಾಗಿ ವಾಯುಪಡೆ ದಿನವನ್ನು ಆಚರಣೆ ಮಾಡಲಾಗುತ್ತಿದೆ.  ಈ ಕೆಳಕಂಡ ಯಾವ ದಿನದಂದು ವಾಯುಪಡೆ ದಿನ ಆಚರಿಸಲಾಗುತ್ತದೆ?
a) 8, ಅಕ್ಟೋಬರ್‌       b) 16, ಅಕ್ಟೋಬರ್‌
c) 24,ಅಕ್ಟೋಬರ್‌      d) 31, ಅಕ್ಟೋಬರ್‌

3)  ಭಾರತದ ಇತಿಹಾಸ ಲೇಖಕಿ ನಯನ್‍ ಜೋತ್ ಲಹಿರಿ ಅವರಿಗೆ   2016ನೇ ಸಾಲಿನ ಅಮೆರಿಕದ ಪ್ರತಿಷ್ಠಿತ ಜಾನ್ ಎಫ್. ರಿಚರ್ಡ್ಸ್‌ ಪ್ರಶಸ್ತಿ  ಲಭಿಸಿದೆ. ಅವರ ಯಾವ ಕೃತಿಗೆ ಈ ಪ್ರಶಸ್ತಿ ಸಂದಿದೆ ? 
a) ಭಾರತದ ಇತಿಹಾಸ   
b) ಭಾರತದಲ್ಲಿ ಮುಸ್ಲಿಂ ದೊರೆಗಳ ಆಳ್ವಿಕೆ
c) ಗುಪ್ತರ ಸುವರ್ಣ ಯುಗ
d) ಪುರಾತನ ಭಾರತದ ಅಶೋಕ

4)  ಅಮೆರಿಕದ ಅರ್ಥಶಾಸ್ತ್ರಜ್ಞ  ಆಲಿವರ್‌ ಹಾರ್ಟ್‌ ಮತ್ತು ಫಿನ್ಲೆಂಡ್‌ನ ಬೆಂಗ್ಟ್‌ ಹೋಲ್ಮಸ್ಟ್ರಾಮ್‌ ಅವರುಗಳಿಗೆ 2016ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್  ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇವರು ಅಭಿವೃದ್ಧಿಪಡಿಸಿರುವ ಸಿದ್ಧಾಂತ ಯಾವುದು?
a) ಗುತ್ತಿಗೆ ಸಿದ್ಧಾಂತ 
b) ಬಂಡವಾಳ ಸಿದ್ಧಾಂತ
c) ಶ್ರಮ ಸಿದ್ಧಾಂತ    
d) ಚಿಲ್ಲರೆ ಹಣಕಾಸು ಸಿದ್ಧಾಂತ

5)  ನ್ಯಾಷನಲ್ ಸೆಂಟರ್ ಫಾರ್ ಅಂಟಾರ್ಟಿಕ್ ಅಂಡ್ ಓಷನ್ ರೀಸರ್ಚ್ (ಎನ್‍ಸಿಎಓಆರ್) ಸಂಸ್ಥೆಯು ಹಿಮಾಲಯ ಪರ್ವತದಲ್ಲಿ ಹಿಮನದಿ ಸಂಶೋಧನಾ ಪ್ರಯೋಗಾಲಯ ಸ್ಥಾಪಿಸಿದೆ.  ಈ ಪ್ರಯೋಗಾಲಯಕ್ಕೆ ಭಾರತದ ಯಾವ ನದಿಯ ಹೆಸರನ್ನು ಇಡಲಾಗಿದೆ.
a) ಸರಸ್ವತಿ  b) ಹಿಮಾಂಶು
c) ಸಿಂಧೂ  d) ಗಂಗಾ

6) ಭಾರತದ ಖ್ಯಾತ ಲೇಖಕಿ ಆರುಂಧತಿ ರಾಯ್  ಅವರು ತಮ್ಮ ಎರಡನೇ ಕಾದಂಬರಿಯ ಹೆಸರನ್ನು ಇತ್ತೀಚೆಗೆ ಪ್ರಕಟಿಸಿದ್ದಾರೆ.  ಅದರ ಹೆಸರೇನು?
a) ‘ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್’  
b) ಇಂಡಿಯಾನ್‌ ವುಮನ್‌
c)  ದ ಮಿನಿಸ್ಟ್ರಿ ಆಫ್ ಅಟ್ಮೋಸ್ ಹ್ಯಾಪಿನೆಸ್  
d)  ಸ್ಟೋರಿ ಆಫ್‌ ಅರುಂಧತಿ

7)  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಈ ಕೆಳಕಂಡ ಯಾವ ಉಪಗ್ರಹದ ಮೇಲೆ ದೂರದರ್ಶಕ ಸ್ಥಾಪಿಸಲು ಯೋಜನೆ ರೂಪಿಸಿದೆ ?
a) ಚಂದ್ರ   b) ಟೈಟನ್
c)  ಗ್ಯಾನಿಮಿಡ್   d) ಮಂಗಳ

8)  ಪ್ರಸ್ತುತ ಚರ್ಚೆಯಲ್ಲಿರುವ ಲೋಧ ಸಮಿತಿಯು ಈ ಕೆಳಕಂಡ ಯಾವ ಕ್ರೀಡೆಗೆ ಸಂಬಂಧಿಸಿದೆ?
a) ಹಾಕಿ    b) ಕ್ರಿಕೆಟ್‌   c) ಕುಸ್ತಿ   d) ಬ್ಯಾಡ್ಮಿಂಟನ್‌

9) ಈ ಕೆಳಕಂಡ ಯಾವ ಕಂಪೆನಿಯು ಸ್ವದೇಶಿ ತಂತ್ರಜ್ಞಾನದಲ್ಲಿ ದೇಶದ ಮೊದಲ ವಿದ್ಯುತ್‌ಚಾಲಿತ ಬಸ್ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದೆ ?
a) ಟಾಟಾ ಮೋಟಾರ್ಸ್   
b)  ಅಶೋಕ್ ಲೇಲ್ಯಾಂಡ್
c) ಟಿವಿಎಸ್ ಮೋಟಾರ್ಸ್ 
d) ಹಿರೋ ಕಂಪೆನಿ

10)   82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಜಿಲ್ಲೆಯಲ್ಲಿ ನಡೆಯಲಿದೆ ?
a) ಕೊಪ್ಪಳ    b) ವಿಜಯಪುರ 
c) ಬಳ್ಳಾರಿ   d) ರಾಯಚೂರು

ಉತ್ತರಗಳು: 1-b, 2-a, 3-d, 4-a, 5-b,6-c, 7-a, 8-b, 9-b, 10-d.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.