ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2016, 19:30 IST
Last Updated 11 ಡಿಸೆಂಬರ್ 2016, 19:30 IST

1) ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಹೋರಿ ಬೆದರಿಸುವ ಜಲ್ಲಿಕಟ್ಟು ಸಾಂಪ್ರದಾಯಿಕ ಕ್ರೀಡೆಯನ್ನು ನಿಷೇಧಿಸಿ ಮಹತ್ವದ ತೀರ್ಪು ಪ್ರಕಟಿಸಿತು. ಈ ಕ್ರೀಡೆ ಯಾವ ರಾಜ್ಯದಲ್ಲಿ ಜನಪ್ರಿಯವಾಗಿದೆ?
a) ಕರ್ನಾಟಕ              b) ತಮಿಳುನಾಡು
c) ಆಂಧ್ರಪ್ರದೇಶ          d) ಕೇರಳ

2) ಕಳೆದ ತಿಂಗಳು ಪ್ರಧಾನಿ  ನರೇಂದ್ರ ಮೋದಿ ಅವರು ನೂತನ ‘ಪ್ರಧಾನಮಂತ್ರಿ  ಗ್ರಾಮೀಣ ಆವಾಸ್‌ ಯೋಜನೆ’ಯನ್ನು ಲೋಕಾರ್ಪಣೆ ಮಾಡಿದರು. ಈ ಯೋಜನೆ ಯಾವುದಕ್ಕೆ ಸಂಬಂಧಿಸಿದೆ?
a) ವಸತಿ ಯೋಜನೆ  b) ಪಿಂಚಣಿ ಯೋಜನೆ
c) ಶೌಚಾಲಯ ಯೋಜನೆ   d) ನಿರ್ಮಲಗ್ರಾಮ ಯೋಜನೆ

3) 2016ರ ಮಾರ್ಚ್ ವೇಳೆಗೆ  ಭಾರತದಲ್ಲಿ  ಸುಮಾರು 34.26 ಕೋಟಿ ಮಂದಿ ಅಂತರ್ಜಾಲವನ್ನು ಬಳಸುವವರಾಗಿದ್ದಾರೆ. ಅಂತರ್ಜಾಲ ಬಳಕೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ,  ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?   
a) ಎರಡನೇ ಸ್ಥಾನ            b) ಮೂರನೇ ಸ್ಥಾನ
c) ನಾಲ್ಕನೇ ಸ್ಥಾನ             d) ಐದನೇ ಸ್ಥಾನ

4) ಭೂಮಿಗಿಂತ 5.4 ಪಟ್ಟು ಹೆಚ್ಚು ದ್ರವ್ಯರಾಶಿ ಹೊಂದಿರುವ ಗ್ರಹವೊಂದನ್ನು ನಾಸಾ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಗ್ರಹದ ಹೆಸರೇನು? 
a) ಸೂಪರ್ ಸನ್    b) ಸೂಪರ್ ಮೂನ್
c) ಸೂಪರ್ ಸ್ಟಾರ್  d) ಸೂಪರ್ ಅರ್ಥ್ (ಸೂಪರ್ ಭೂಮಿ)

5) ಈ ಕೆಳಕಂಡ ಯಾವ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಎಎಫ್‌ ಯುದ್ಧ ವಿಮಾನವನ್ನು  ಇಳಿಸುವ ಸೌಲಭ್ಯ ಕಲ್ಪಿಸಲಾಗಿದೆ?
a) ಆಗ್ರಾ–ಲಖನೌ ಎಕ್ಸ್‌ಪ್ರೆಸ್‌ ಹೆದ್ದಾರಿ 
b) ದೆಹಲಿ–ಶ್ರೀನಗರ ರಾಷ್ಟ್ರೀಯ ಹೆದ್ದಾರಿ
c) ಮುಂಬೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ)
d) ಕೋಲ್ಕತ್ತ–ಚೆನ್ನೈ ರಾಷ್ಟ್ರೀಯ ಹೆದ್ದಾರಿ

6) ಕರ್ನಾಟಕ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕ ಮಂಗಲಂಪಲ್ಲಿ ಬಾಲಮುರಳಿಕೃಷ್ಣ (86) ಅವರು ಚೆನ್ನೈನಲ್ಲಿ ನವೆಂಬರ್ 22ರಂದು ನಿಧನರಾದರು. ಅವರು ಹುಟ್ಟಿದ ಜಿಲ್ಲೆ ಯಾವುದು? 
a) ಪಶ್ಚಿಮ ಗೋದಾವರಿ    b) ಶಂಕರಗುಪ್ತಂ
c)  ಚೆನ್ನೈ       d) ಮೈಸೂರು

7) ಎಲ್ಲಿ ರಾಷ್ಟ್ರಗೀತೆ  ಕಡ್ಡಾಯ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಆದೇಶಿಸಿದೆ?
a) ರಂಗಮಂದಿರಗಳು    b) ಶಾಪಿಂಗ್ ಮಾಲ್‌ಗಳು
c)  ಹೋಟೆಲ್‌ಗಳು     d)  ಚಲನಚಿತ್ರಮಂದಿರಗಳು

8) ನ್ಯೂಯಾರ್ಕ್‌ನ ಪ್ರತಿಷ್ಠಿತ ಟೈಮ್‌ ನಿಯತಕಾಲಿಕೆ ಕೈಗೊಂಡ ಅಂತರ್ಜಾಲ ಓದುಗರ ಸಮೀಕ್ಷೆಯಲ್ಲಿ ಯಾರು  ‘ವರ್ಷದ ವ್ಯಕ್ತಿ’ (2016) ಯಾಗಿ ಆಯ್ಕೆಯಾಗಿದ್ದಾರೆ ?
a) ಡೊನಾಲ್ಡ್‌ ಟ್ರಂಪ್   b) ಹಿಲರಿ ಕ್ಲಿಂಟನ್‌
c) ನರೇಂದ್ರ ಮೋದಿ    d) ವ್ಲಾದಿಮಿರ್‌ ಪುಟಿನ್‌

9) ನವೆಂಬರ್‌ 25ರಂದು ಕ್ಯೂಬಾದ ಕ್ರಾಂತಿಕಾರಿ ನಾಯಕ ಹಾಗೂ ಮಾಜಿ ಅಧ್ಯಕ್ಷರಾದ ಫಿಡೆಲ್‌ ಕ್ಯಾಸ್ಟ್ರೊ ನಿಧನರಾದರು. ಪ್ರಸ್ತುತ ಕ್ಯೂಬಾದಲ್ಲಿ ಯಾವ ಸರ್ಕಾರವಿದೆ?
a) ಮಿಲಿಟರಿ ಸರ್ಕಾರ     b) ಕಮ್ಯೂನಿಸ್ಟ್ ಸರ್ಕಾರ
c) ಪ್ರಜಾಪ್ರಭುತ್ವ ಸರ್ಕಾರ   d) ಸರ್ವಾಧಿಕಾರಿ ಆಡಳಿತ

10) ಇಟಲಿಯಲ್ಲಿ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಹಿನ್ನಡೆ ಅನುಭವಿಸಿ ರಾಜೀನಾಮೆ ನೀಡಿದ ಪ್ರಧಾನಿ ಯಾರು?
a) ಸೆರ್ಗಿಯೊ ಮಾಟರೆಲ್ಲ     b) ಬರ್ನಾಡ್ 
c) ಮಟ್ಟೆಯೊ ರೆಂಜಿ  d) ಯಾರೂ ಅಲ್ಲ

ಉತ್ತರಗಳು: 1-b, 2-a, 3-c, 4-d, 5-a, 6-b, 7-d, 8-c, 9-b, 10-c.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT