ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST

1)  ಕೇಂದ್ರ ಸರ್ಕಾರದ ನೆರವಿನಲ್ಲಿ  ಕೆನ್–ಬೆಟ್ವಾ ನದೀಜೋಡಣೆ ಯೋಜನೆಯು ಯಾವ ಎರಡು ರಾಜ್ಯಗಳ ಮಧ್ಯೆ ಅಸ್ತಿತ್ವಕ್ಕೆ ಬರಲಿದೆ?
a) ಉತ್ತರಪ್ರದೇಶ–ಮಧ್ಯಪ್ರದೇಶ    
b)  ಮಧ್ಯಪ್ರದೇಶ–ಆಂಧ್ರಪ್ರದೇಶ
c)  ಗುಜರಾತ್–ರಾಜಸ್ತಾನ    
d)  ಹಿಮಾಚಲಪ್ರದೇಶ–ಅರುಣಾಚಲಪ್ರದೇಶ

2) ದೇಶದ ಜನಸಾಮಾನ್ಯರು ಡಿಜಿಟಲ್ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಯಾವ ಆ್ಯಪ್‌ ಅನ್ನು ಲೋಕಾರ್ಪಣೆ ಮಾಡಿತು? 
a)  ಇಂದ್ರಧನುಷ್ ಆ್ಯಪ್    
b) ನಗದು ರಹಿತ ಆ್ಯಪ್
c) ಭೀಮ್ ಆ್ಯಪ್‌
d) ಜನಧನ್ ಆ್ಯಪ್

3)  2008ರ ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್ ಆಗಿದ್ದ ಖ್ಯಾತ ಟೆನಿಸ್‌ ಆಟಗಾರ್ತಿ ಅನಾ ಇವಾನೊವಿಕ್ ತಮ್ಮ 29ನೇ ವಯಸ್ಸಿನಲ್ಲಿ ಇತ್ತೀಚೆಗಷ್ಟೆ ವೃತ್ತಿಪರ ಟೆನಿಸ್‌ಗೆ ವಿದಾಯ ಘೋಷಿಸಿದ್ದಾರೆ. ಇವರು ಯಾವ ದೇಶದವರು? 
a) ಫ್ರಾನ್ಸ್          
b) ಸರ್ಬಿಯಾ
c) ರಷ್ಯಾ        
d) ಚೀನಾ

4)  ದೇಶದ ನೂತನ ಸೇನಾಮುಖ್ಯಸ್ಥರನ್ನಾಗಿ ಇವರಲ್ಲಿ ಯಾರನ್ನು ನೇಮಕ ಮಾಡಲಾಗಿದೆ?
a) ಬೀರೇಂದರ್ ಸಿಂಗ್ ಧನೋವಾ 
b) ದಲ್ಬಿರ್ ಸಿಂಗ್ ಸುಹಾಗ್ 
c) ಅರೂಪ್ ರಹಾ 
d) ಬಿಪಿನ್ ರಾವತ್

5) ಬ್ರಿಟನ್ ಮಹಾರಾಣಿ ಎರಡನೇ ಎಲಿಜಬೆತ್ ಅವರು  ಹೊಸ ವರ್ಷದ (2017) ಗೌರವಾರ್ಥ  ನೀಡುವ ಪ್ರತಿಷ್ಠಿತ ನೈಟ್ ಹುಡ್‌ ಗೌರವ ಪ್ರಶಸ್ತಿಯನ್ನು  ಯಾವ ಭಾರತೀಯ ವಿಜ್ಞಾನಿಗೆ ನೀಡಲಾಗಿದೆ?   
a) ಶಂಕರ್ ಬಾಲಸುಬ್ರಮಣಿಯನ್
b) ಎನ್. ಬಾಲಸುಬ್ರಮಣ್ಯಂ  
c) ಗುರುಪ್ರೀತ್‌ ಸಿಂಗ್
d) ರಾಮಕೃಷ್ಣ ರೆಡ್ಡಿ

6)  ಇತ್ತೀಚೆಗೆ ಯಾವ ಎರಡು ದೇಶಗಳ ಮಧ್ಯೆ ಸರಕು ಸೇವೆಗಳ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ?
a) ಅಮೆರಿಕ–ಜರ್ಮನಿ         
b) ಭಾರತ–ಪಾಕಿಸ್ತಾನ
c) ಇಂಗ್ಲೆಂಡ್–ಚೀನಾ      
d) ರಷ್ಯಾ–ಚೀನಾ

7) 1915ರ ಜನವರಿ 9ರಂದು ಮಹಾತ್ಮಾ ಗಾಂಧೀಜಿ  ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ಬಂದು ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು. ಆ ದಿನದ ಸ್ಮರಣಾರ್ಥ ಭಾರತದಲ್ಲಿ ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?
a) ವಲಸೆ ದಿವಸ 
b) ಆಫ್ರಿಕನ್ ದಿವಸ 
c) ಪ್ರವಾಸಿ ಭಾರತ ದಿವಸ
d) ಸತ್ಯಾಗ್ರಹ ದಿವಸ

8) ಮೊಟ್ಟಮೊದಲ ಬಾರಿಗೆ ಯಾವ ರಾಜ್ಯದಲ್ಲಿ ತಂತ್ರಜ್ಞಾನ ಆಧಾರಿತ ಲೇಸರ್ ಚೆಕ್ ಪೊಸ್ಟ್ ಅನ್ನು ನಿರ್ಮಾಣ ಮಾಡಲಾಗಿದೆ?  
a) ಜಮ್ಮು ಮತ್ತು ಕಾಶ್ಮೀರ
b)  ಪಂಜಾಬ್
c) ಅರುಣಾಚಲ ಪ್ರದೇಶ
d) ಗುಜರಾತ್‌

9)  ಇತ್ತೀಚೆಗೆ ಖಾಂಡೇರಿ ಜಲಾಂತರ್ಗಾಮಿ ನೌಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಈ ನೌಕೆಯನ್ನು ಯಾವ ದೇಶದ ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ?
a) ಫ್ರಾನ್ಸ್ 
b) ಅಮೆರಿಕ 
c) ರಷ್ಯಾ
d) ಜಪಾನ್

10)  ಇತ್ತೀಚೆಗೆ ಕೇಂದ್ರದ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಉದ್ದವಾದ ಮಹಾಗೋಡೆಯ ಕುರುಹು ಪತ್ತೆಯಾಗಿರುವುದು ಯಾವ ರಾಜ್ಯದಲ್ಲಿ ?
a) ಅಸ್ಸಾಂ 
b) ಮಧ್ಯಪ್ರದೇಶ
c)  ತಮಿಳುನಾಡು
d) ರಾಜಸ್ತಾನ

ಉತ್ತರಗಳು: 1–a, 2-–c, 3–b, 4–d, 5–a, 6–c, 7–c, 8–d,  9–a, 10–b

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.