ADVERTISEMENT

ಅಮ್ಮನೇ ಸ್ಫೂರ್ತಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2014, 19:30 IST
Last Updated 15 ಏಪ್ರಿಲ್ 2014, 19:30 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ತಾಯಿಯಂತೆ ಮಗಳು, ನೂಲಿನಂತೆ ಸೀರೆ ಎಂಬುದು ಗಾದೆ ಮಾತು. ಅಮ್ಮನ ಪ್ರತಿಯೊಂದು ಅಂಶವನ್ನು ಅನುಸರಿಸುವ ಮಗಳಿಗೆ ಅವಳ ಫ್ಯಾಷನ್‌ ಮಂತ್ರವೂ ಬಳುವಳಿಯಾಗಿ ಬಂದಿರುತ್ತದೆ. ಇದಕ್ಕೆ ನಟಿ ದೀಪಿಕಾ ಪಡುಕೋಣೆ ಕೂಡ ಹೊರತಲ್ಲ. ಬಾಲಿವುಡ್‌ ಗಲ್ಲಿಯಲ್ಲಿ ತನ್ನ ಸ್ಟೈಲ್‌, ನಟನೆಯ ಮೂಲಕ ಹೆಸರುವಾಸಿಯಾದ ನಟಿ ದೀಪಿಕಾ ಪಡುಕೋಣೆಗೆ ಅವರ ತಾಯಿಯೇ ಸ್ಟೈಲ್‌ ಐಕಾನ್‌.

‘ಸ್ಟೈಲ್‌ ವಿಷಯಕ್ಕೆ ಬಂದರೆ ನನ್ನ ತಾಯಿಯೇ ನನಗೆ ಸ್ಫೂರ್ತಿ. ಅವರ ಸ್ಟೈಲ್‌ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಸರಳವಾಗಿರಬೇಕು, ಕ್ಲಾಸಿಕ್‌ ಆಗಿ ಕಾಣಿಸಬೇಕು ಎಂಬ ಯೋಚನೆ ನನ್ನ ತಾಯಿಯಿಂದಲೇ ಬಳುವಳಿಯಾಗಿ ಬಂದಿದ್ದು. ಅವರು ಯಾವತ್ತೂ ಆಭರಣ ಹೇರಿಕೊಂಡಿದ್ದನ್ನು ನಾನು ನೋಡಿಲ್ಲ. ಸಿಂಪಲ್‌ ಆಗಿ ಚೆನ್ನಾಗಿ ಕಾಣಿಸುತ್ತಿದ್ದರು ನನ್ನ ಅಮ್ಮ’ ಎಂದು ತಾಯಿಯ ಬಗ್ಗೆ ಹೊಗಳಿಕೆ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.