ADVERTISEMENT

ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಬ್ಯೂಟಿಫುಲ್ ಮನಸುಗಳು
ಜಯತೀರ್ಥ ಅವರ ನಿರ್ದೇಶನದ ಚಿತ್ರ ‘ಬ್ಯೂಟಿಫುಲ್ ಮನಸುಗಳು’. ನೀನಾಸಂ ಸತೀಶ್ ಮತ್ತು ಶ್ರುತಿ ಹರಿಹರನ್ ‘ಲೂಸಿಯಾ’ ಚಿತ್ರದ ನಂತರ ಮತ್ತೆ ಇಲ್ಲಿ ಒಂದಾಗಿದ್ದಾರೆ. ಬಿ.ಜೆ. ಭರತ್ ಸಂಗೀತ ನಿರ್ದೇಶನ, ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿರುವ ಚಿತ್ರಕ್ಕೆ ಪ್ರಸನ್ನ ಕುಮಾರ್ ಹಾಗೂ ಶಶಿಕಲಾ ಬಾಲಾಜಿ ನಿರ್ಮಾಪಕರು. ಅಚ್ಯುತ ಕುಮಾರ್, ತಬಲನಾಣಿ, ಮುಂತಾದವರು ತಾರಾಗಣದಲ್ಲಿದ್ದಾರೆ.
 
**
ರಿಕ್ತ
ಹಾರರ್ ಮತ್ತು ಫ್ಯಾಂಟಸಿ ಕಥಾಹಂದರದ ‘ರಿಕ್ತ’ ಚಿತ್ರಕ್ಕೆ ಅಮೃತ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂಚಾರಿ ವಿಜಯ್, ವಾಗ್ದೇವಿ ಅದ್ವಿಕಾ, ಸಂಗೀತಾ ವರದನ್, ಸುಷ್ಮಿತಾ, ಮಾದೇಶ್, ಅಭಿಷೇಕ್ ಮುಂತಾದವರು ತಾರಾಗಣದಲ್ಲಿದ್ದಾರೆ. ರಿಕ್ಕಿ ಸೋನು ಸಂಗೀತವಿರುವ ಈ ಚಿತ್ರವನ್ನು ಅರುಣ್ ಕುಮಾರ್ ನಿರ್ಮಿಸಿದ್ದಾರೆ.
 
**
ಏನ್ ನಿನ್ ಪ್ರಾಬ್ಲಮ್ಮು
‘ತಿಥಿ’ ಖ್ಯಾತಿಯ ಕಲಾವಿದರಾದ ಸಿಂಗ್ರಿಗೌಡ, ಚನ್ನೇಗೌಡ ಹಾಗೂ ಅಭಿಷೇಕ್ ನಟಿಸಿರುವ ಚಿತ್ರ ‘ಏನ್‌ ನಿನ್ ಪ್ರಾಬ್ಲಮ್ಮು’. ಗಾಲಿ ಲಕ್ಕಿ ನಿರ್ದೇಶನದ ಈ ಚಿತ್ರಕ್ಕೆ ನಂದಿನಿ ನಾಯಕಿಯಾಗಿದ್ದು, ಯೋಗೇಶ್ ರಾಮನಗರ ನಿರ್ಮಾಪಕಿ. ಸೆಂಥಿಲ್ ಛಾಯಾಗ್ರಹಣ, ಸಿ.ಎಚ್. ಕುಮಾರ ಸಂಕಲನ ಚಿತ್ರಕ್ಕಿದೆ.
 
**
ಅರಿವು
ಸೋಸಲೆ ಗಂಗಾಧರ್ ಅವರ ಕಾದಂಬರಿ ಆಧಾರಿತ ಈ ಚಿತ್ರವನ್ನು ರಂಗನಾಥ್ ನಿರ್ದೇಶಿಸಿದ್ದಾರೆ. ಮಹೇಂದ್ರ ಮುನೋತ್ ಬಂಡವಾಳ ಹಾಕುವ ಜತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನವನೀತ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.