ADVERTISEMENT

ಐಶ್ವರ್ಯಾ ಮತ್ತೆ ಬೆಳ್ಳಿ ಪರದೆಗೆ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2015, 19:30 IST
Last Updated 25 ಮಾರ್ಚ್ 2015, 19:30 IST
ಇರ್ಫಾನ್‌ ಖಾನ್‌, ಐಶ್ವರ್ಯಾ ರೈ
ಇರ್ಫಾನ್‌ ಖಾನ್‌, ಐಶ್ವರ್ಯಾ ರೈ   

ಬರುವ ಅಕ್ಟೋಬರ್‌ 9ರಂದು ತೆರೆ ಕಾಣಲಿರುವ  ಆ್ಯಕ್ಷನ್‌ ಡ್ರಾಮಾ ‘ಜಜ್ಬಾ’ ಚಿತ್ರದ ಮೂಲಕ ನಟಿ ಐಶ್ವರ್ಯಾ ರೈ ಬಚ್ಚನ್‌ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಐದು ವರ್ಷಗಳ ಬಿಡುವಿನ ಬಳಿಕ ಮತ್ತೆ ಬಣ್ಣದ ಪರದೆ ಮೇಲೆ ಕಾಣಿಸಿಕೊಳ್ಳಲಿರುವ ಬಚ್ಚನ್‌ ಕುಟುಂಬದ ಸೊಸೆಯನ್ನು ನೋಡಲು ಅವರ ಅಭಿಮಾನಿಗಳು ಕಾತರರಾಗಿದ್ದಾರೆ.

ಸದ್ಯ ‘ಜಜ್ಬಾ’ ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ. ಇರ್ಫಾನ್‌ ಖಾನ್‌, ಶಬಾನಾ ಅಜ್ಮಿ, ಅಭಿಮನ್ಯು ಸಿಂಗ್‌, ಅತುಲ್‌ ಕುಲಕರ್ಣಿ, ಚಂದನ್‌ ರಾಯ್‌ ಸನ್ಯಾಲ್‌ ಮತ್ತು ಅನುಪಮ್‌ ಖೇರ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವರು.

‘‘ಬರುವ ಅಕ್ಟೋಬರ್‌ 9ರಂದು ರಿಲೀಸ್‌ ಆಗಲಿರುವ ‘ಜಜ್ಬಾ’ ಚಿತ್ರಕ್ಕಾಗಿ ಕೌಂಟ್‌ಡೌನ್‌ ಆರಂಭವಾಗಿದೆ’ ಎಂದು ಚಿತ್ರದ ನಿರ್ದೇಶಕ ಸಂಜಯ್‌ ಗುಪ್ತಾ ಟ್ವೀಟ್‌ ಮಾಡಿದ್ದಾರೆ. ‘ಜಜ್ಬಾ’ ಚಿತ್ರದ ಕಥೆಯನ್ನು ಕಮಲೇಶ್‌ ಪಾಂಡೆ ಮತ್ತು ರಾಬಿನ್‌ ಭಟ್ಟ ಬರೆದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.