ಬೆಂಗಳೂರು: ಕಾಲೇಜ್‌ಕುಮಾರ್ ಚಿತ್ರದ ಟ್ರೇಲರ್ ಯುಟ್ಯೂಬ್ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಈಗಾಲೇ ಟ್ರೇಲರ್ 2.66 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ.
ಮಗ ಹುಟ್ಟಿದಾಗಲೇ ಭವಿಷ್ಯದ ಕನಸಿಗೆ ರೆಕ್ಕೆಪುಕ್ಕ ಕಟ್ಟಿಕೊಂಡ ಅಪ್ಪ. ಪುತ್ರನ ಮೇಲೆ ಅಪ್ಪನಿಗೆ ಬೆಟ್ಟದಷ್ಟು ಪ್ರೀತಿ. ಮಗ ದೊಡ್ಡವನಾಗಿ ಉನ್ನತ ಹುದ್ದೆಗೇರುತ್ತಾನೆಂಬ ಆಸೆ. ಆದರೆ, ಕಾಲೇಜು ಸೇರಿದ ಮಗ ಲಾಸ್ಟ್ ಬೆಂಚ್ ಹುಡುಗರ ಲೀಡರ್! ಈ ‘ಕಾಲೇಜ್‌ಕುಮಾರ್’ ಮಾಡುವ ಅವಾಂತರಗಳ ಸುತ್ತ ಕಥೆ ಹೆಣೆದಿದ್ದಾರೆ ನಿರ್ದೇಶಕ ‘ಅಲೆಮಾರಿ’ ಸಂತು.
‘ಕಾಲೇಜ್‌ಕುಮಾರ್’ ಚಿತ್ರ ಬಿಡುಗಡೆ ಸಿದ್ಧವಾಗಿದೆ. ಎಂ.ಆರ್. ಪಿಕ್ಚರ್ಸ್‌ನಡಿ ಈ ಚಿತ್ರ ತೆರೆ ಕಾಣುತ್ತಿದೆ. ಬಿಡದಿ ಬಳಿ ಇರುವ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ನಿವಾಸದಲ್ಲಿ ಚಿತ್ರದ ಟ್ರೈಲರ್ ಮತ್ತು ಮೂರು ಹಾಡುಗಳನ್ನು ಬಿಡುಗಡೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.