ADVERTISEMENT

ತೆರೆ ಮೇಲೆ ‘ಸರ್ಕಾರಿ ಕೆಲಸ ದೇವರ ಕೆಲಸ’

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 11:12 IST
Last Updated 1 ಜೂನ್ 2017, 11:12 IST
ತೆರೆ ಮೇಲೆ ‘ಸರ್ಕಾರಿ ಕೆಲಸ ದೇವರ ಕೆಲಸ’
ತೆರೆ ಮೇಲೆ ‘ಸರ್ಕಾರಿ ಕೆಲಸ ದೇವರ ಕೆಲಸ’   

ಬೆಂಗಳೂರು: ಎಲ್ರೂ –––(ಡ್ಯಾಷ್‌ ಡ್ಯಾಷ್‌)ನನ್‌ ಮಕ್ಳು...ಇದು ಚಿತ್ರದ ಉಪಶೀರ್ಷಿಕೆ. ವ್ಯವಸ್ಥೆಯ ಎಲ್ಲರನ್ನೂ ಮೂದಲಿಸುವ ಸುಳಿವು ಈ ಒಂದೇ ಸಾಲು ನೀಡುವಂತಿದೆ.

ವಿಧಾನಸೌಧದ ದ್ವಾರದಲ್ಲಿ ಎದ್ದು ಕಾಣುವ ‘ಸರ್ಕಾರಿ ಕೆಲಸ ದೇವರ ಕೆಲಸ’ ಸಾಲು ಈ ಸಿನಿಮಾದ ಶೀರ್ಷಿಕೆ. ಜೋಗಿ ಚಿತ್ರ ಖ್ಯಾತಿಯ ನಿರ್ಮಾಪಕ ಅಶ್ವಿನಿ ರಾಮಪ್ರಸಾದ್ ನಿರ್ಮಿಸಿ, ಆರ್‌.ರವೀಂದ್ರ ನಿರ್ದೇಶಿಸಿರುವ ಚಿತ್ರ ಶುಕ್ರವಾರ(ಜೂನ್‌ 2) ತೆರೆಕಾಣುತ್ತಿದೆ.

ಸಮಕಾಲೀನ ರಾಜಕೀಯ ಪರಿಸ್ಥಿತಿಗೆ ವ್ಯಂಗ್ಯಗನ್ನಡಿ ಹಿಡಿಯುವ ಈ ಚಿತ್ರಕ್ಕೆ ‘ಮಠ’ ಗುರುಪ್ರಸಾದ್‌ ಸಂಭಾಷಣೆಯ ಇದೆ.

ADVERTISEMENT

ರವಿಶಂಕರ್‌ ಗೌಡ ಮತ್ತು ಸಂಯುಕ್ತಾ ಹೊರನಾಡು, ರಂಗಾಯಣ ರಘು, ಸುಚೇಂದ್ರಪ್ರಸಾದ್‌, ರಾಜು ತಾಳಿಕೋಟೆ, ನರ್ಸ್‌ ಜಯಲಕ್ಷ್ಮೀ, ಸೇರಿದಂತೆ ಕಲಾವಿದರ ದಂಡೇ ಇದೆ.

ನಾಗೇಂದ್ರಪ್ರಸಾದ್ ಬರೆದಿರುವ ಎರಡು ಗೀತೆಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಮಂಜುನಾಥ್ ನಾಯಕ್ ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.