ADVERTISEMENT

‘ಥಗ್ಸ್ ಆಫ್‌ ಹಿಂದೋಸ್ತಾನ್’ ಚಿತ್ರದಲ್ಲಿ ಕತ್ರೀನಾ

ಪಿಟಿಐ
Published 11 ಮೇ 2017, 15:04 IST
Last Updated 11 ಮೇ 2017, 15:04 IST
‘ಥಗ್ಸ್ ಆಫ್‌ ಹಿಂದೋಸ್ತಾನ್’ ಚಿತ್ರದಲ್ಲಿ ಕತ್ರೀನಾ
‘ಥಗ್ಸ್ ಆಫ್‌ ಹಿಂದೋಸ್ತಾನ್’ ಚಿತ್ರದಲ್ಲಿ ಕತ್ರೀನಾ   

ಮುಂಬೈ: ಬಾಲಿವುಡ್‌ ಹಿರಿಯ ನಟ ಅಮಿತಾಬ್ ಬಚ್ಚನ್, ಅಮೀರ್‌ ಖಾನ್‌ ಅವರೊಂದಿಗೆ ‘ಥಗ್ಸ್ ಆಫ್‌ ಹಿಂದೋಸ್ತಾನ್’  ಚಿತ್ರದಲ್ಲಿ ನಟಿ ಕತ್ರೀನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ.

Finally we have our last thug..... Katrina ! Welcome aboard Kat :-)

— Aamir Khan (@aamir_khan) May 11, 2017

ADVERTISEMENT

‘ ಚಿತ್ರ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಕತ್ರೀನಾ ಕೈಫ್‌ಗೆ ಸ್ವಾಗತ’ ಎಂದು ಅಮೀರ್‌ ಟ್ವೀಟ್‌ ಮಾಡಿದ್ದಾರೆ.

ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟೈಗರ್ ಜಿಂದಾ ಹೈ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಕತ್ರೀನಾ ಸದ್ಯ ಅಬುಧಾಬಿಯಲ್ಲಿದ್ದಾರೆ.

2012ರ ತೆರೆ ಕಂಡಿದ್ದ ‘ಏಕ್  ಥಾ ಟೈಗರ್’ ಚಿತ್ರದಲ್ಲಿ ಸಲ್ಮಾನ್‌ ಖಾನ್‌ಗೆ ಜೋಡಿಯಾಗಿ ಕತ್ರೀನಾ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ‘ಟೈಗರ್ ಜಿಂದಾ ಹೈ’ ಚಿತ್ರದ ಮೂಲಕ ಜತೆಯಾಗಿದ್ದಾರೆ.

‘ಥಗ್ಸ್ ಆಫ್‌ ಹಿಂದೋಸ್ತಾನ್’ ಚಿತ್ರ ವಿಜಯ್‌ ಕೃಷ್ಣ ಆಚಾರ್ಯ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಇದೇ ಮೊದಲ ಬಾರಿ ಬಿಗ್‌ ಬೀ ಹಾಗೂ ಅಮೀರ್‌ ಖಾನ್‌ ಒಟ್ಟಿಗೆ ನಟಿಸುತ್ತಿದ್ದಾರೆ.

‘ದಂಗಲ್‌’ ಚಿತ್ರದ ನಟಿ ಫಾತಿಮಾ ಸನಾ ಶೇಖ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ಜೂನ್‌ ತಿಂಗಳಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, 2018ರ ದೀಪಾವಳಿ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಚಿತ್ರ ತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.