ಬೆಂಗಳೂರು: ಪಾರ್ಟ್ 2 ಸಿನಿಮಾದಲ್ಲಿ ನಾನು ಬೆತ್ತಲೆಯಾಗಿ ನಟಿಸಿಲ್ಲ ಎಂದು ನಟಿ ಸಂಜನಾ ತಿಳಿಸಿದ್ದಾರೆ.
ಇಂದು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಂಜನಾ, 'ವಿಡಿಯೊದಲ್ಲಿ ಇರುವುದು ನಾನೇ, ಆದರೆ ಸಿನಿಮಾದಲ್ಲಿ ಸಂಪೂರ್ಣ ಬೆತ್ತಲೆಯಾಗಿ ನಟಿಸಿಲ್ಲ, ಸ್ಕರ್ಟ್ ಮತ್ತು ಮುಂದುಗಡೆ ಬಟ್ಟೆಯನ್ನು ಧರಿಸಿದ್ದೆ' ಎಂದು ಸ್ಪಷ್ಟನೆ ನೀಡಿದರು.
ಇದಕ್ಕೆ ಸಂಬಂಧಿಸಿದಂತೆ ಆ ದೃಶ್ಯದ ಚಿತ್ರಿಕರಣ ವೇಳೆ ತೆಗೆದಿದ್ದ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದರು.
'ಸಿನಿಮಾದಲ್ಲಿ ಇಲ್ಲದ ಹಾಗೂ ಸೆನ್ಸಾರ್ ಮಂಡಳಿಯವರು ಕತ್ತರಿ ಹಾಕಿದ್ದ ಆ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರು ಅಪ್ಲೋಡ್ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ' ಎಂದು ಸಂಜನಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.