ಪನ್ನಗ ಭರಣ ಚೊಚ್ಚಿಲ ನಿರ್ದೇಶನದ, ಬಹುತಾರಾಗಣದ ಸಿನಿಮಾ ‘ದ ಹ್ಯಾಪಿ ನ್ಯೂ ಇಯರ್’ ಮುಂದಿನ ವಾರ (ಮೇ 5) ತೆರೆಕಾಣುತ್ತಿದೆ. ಐದು ಭಿನ್ನ ಪ್ರೇಮಕಥೆಗಳನ್ನು ಒಂದೇ ಬಂಧದಲ್ಲಿ ಹೆಣೆದಿರುವ ಚಿತ್ರ ಇದು. ಮುಖ್ಯ ಪಾತ್ರಗಳನ್ನು ಪರಿಚಯಿಸುವ ಐದು ಪ್ರತ್ಯೇಕ ಟೀಸರ್ಗಳನ್ನೂ ತಂಡ ಅನಾವರಣ ಮಾಡಿದೆ.
‘ರಾಜ್ಕುಮಾರ’ ಚಿತ್ರ ಹೊರತುಪಡಿಸಿದರೆ ಈಚಿನ ದಿನಗಳಲ್ಲಿ ಒಂದೊಳ್ಳೆಯ ಕೌಟುಂಬಿಕ ಮನರಂಜನಾ ಸಿನಿಮಾ ಬಂದಿಲ್ಲ. ಆ ಕೊರತೆಯನ್ನು ‘ದ ಹ್ಯಾಪಿ ನ್ಯೂ ಇಯರ್’ ಚಿತ್ರ ತುಂಬಿಕೊಡುತ್ತದೆ ಎಂಬುದು ಪನ್ನಗ ಅವರ ವಿಶ್ವಾಸ.
ಐದು ಕಥೆಗಳಿದ್ದರೂ ಇದು ಪ್ರಯೋಗಾತ್ಮಕ ಸಿನಿಮಾ ಅಲ್ಲ, ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಎಲ್ಲ ಅಂಶಗಳು ಇವೆ ಎಂದು ಅವರು ಹೇಳುತ್ತಾರೆ. ‘ಹೊಸ ವರ್ಷಾಚರಣೆ ಎಂದರೆ ಅದು ದಿನಾಂಕದ ಮಾತಲ್ಲ. ನಮ್ಮ ವ್ಯಕ್ತಿತ್ವದಲ್ಲಿ ಹೊಸತನ ಕಂಡುಕೊಳ್ಳುವುದನ್ನೇ ಹ್ಯಾಪಿ ನ್ಯೂ ಇಯರ್.
ಅದು ಯಾವಾಗ ಬೇಕಾದರೂ ಆಗಬಹುದು. ಹಾಗೆ ನಮ್ಮ ಚಿತ್ರದಲ್ಲಿ ಪ್ರತಿಯೊಂದು ಪಾತ್ರವೂ ತನ್ನಲ್ಲಿ ಹೊಸತನವನ್ನು ಕಂಡುಕೊಳ್ಳುತ್ತದೆ’ ಎಂದು ಸಿನಿಮಾದ ವೈಶಿಷ್ಟ್ಯ ಹೇಳಿದರು.
ಬಿ.ಸಿ. ಪಾಟೀಲ್, ಸಾಯಿಕುಮಾರ್, ಧನಂಜಯ್, ವಿಜಯ್ ರಾಘವೇಂದ್ರ, ದಿಗಂತ್, ಸುಧಾರಾಣಿ, ಶ್ರುತಿ ಹರಿಹರನ್, ಸೋನು ಗೌಡ, ರಾಜ್ಶ್ರೀ ಪೊನ್ನಪ್ಪ, ಸೃಷ್ಠಿ ಪಾಟೀಲ್, ರಷ್ಯಾದ ಮಾರ್ಗರಿಟಾ ಮುಖ್ಯ ತಾರಾಗಣದಲ್ಲಿದ್ದಾರೆ. ರಘು ದೀಕ್ಷಿತ್ ಸಂಗೀತ, ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.
‘ಬಾಹುಬಲಿ 2’ ಬಿಡುಗಡೆ ಆಗಿ ಒಂದೇ ವಾರಕ್ಕೆ ‘ದ ಹ್ಯಾಪಿ ನ್ಯೂ ಇಯರ್’ ಸಿನಿಮಾ ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ‘ಪರಭಾಷಾ ಸಿನಿಮಾಗಳ ದಬ್ಬಾಳಿಕೆ ಕನ್ನಡದ ನೆಲದಲ್ಲಿ ಹೆಚ್ಚಾಗುತ್ತಿದೆ. ಕನ್ನಡಿಗರು ಕನ್ನಡ ಸಿನಿಮಾ ಪ್ರೋತ್ಸಾಹಿಸಬೇಕು, ಗೆಲ್ಲಿಸಬೇಕು’ ಎಂಬ ಬೇಡಿಕೆಯೂ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದಿಂದ ಕೇಳಿಬಂತು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.