ADVERTISEMENT

ಫ್ಲಾಪ್ ಮತ್ತು ಸೂಪರ್‌ ಸ್ಟಾರ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST
ಫ್ಲಾಪ್ ಮತ್ತು  ಸೂಪರ್‌ ಸ್ಟಾರ್
ಫ್ಲಾಪ್ ಮತ್ತು ಸೂಪರ್‌ ಸ್ಟಾರ್   

ಗಾಂಧಿನಗರದ ಸಿನಿಮಾ ಪೆಟ್ಟಿಗೆಯಿಂದ ಹೊರಬರುತ್ತಿರುವ ಯಶಸ್ವಿ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೋ; ಇಲ್ಲ ಕ್ಯಾಚಿಯಾಗಿರಲಿ ಎನ್ನುವ ಕಾರಣಕ್ಕೋ ನಿರ್ದೇಶಕ ಕರಣ್ ಕುಮಾರ್ ತಮ್ಮ ಸಿನಿಮಾಕ್ಕೆ ‘ಫ್ಲಾಪ್‌’ ಹೆಸರಿಟ್ಟು ಗಮನ ಸೆಳೆದಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿರುವ ‘ಫ್ಲಾಪ್’ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರದ ಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ನಿರೂಪಕಿ ‘ತಮ್ಮ ಚಿತ್ರದ ಆಡಿಯೊವನ್ನು ಸೂಪರ್ ಸ್ಟಾರ್ ಒಬ್ಬರು ಬಿಡುಗಡೆ ಗೊಳಿಸುವರು’ ಎಂದ ತಕ್ಷಣ ಹಾಜರಿದ್ದ ಮಂದಿಗೆ ಅಪಾರ ಕುತೂಹಲ. ‘ಯಾರು ಆ ಸ್ಟಾರ್’ ಎನ್ನುವ ಕೌತುಕ. ವೇದಿಕೆಯ ಮುಂಬದಿಯಲ್ಲಿ ಕುರ್ಚಿಗಳಲ್ಲಿ ಕುಳಿತಿದ್ದ ಮಂದಿ ತಮ್ಮ ಕೈಗಳನ್ನು ಮೇಲೆ ಎತ್ತಿ ಆಡಿಯೊ ಬಿಡುಗಡೆಗೊಳಿದ ತಕ್ಷಣ, ‘ಪ್ರೇಕ್ಷಕರೇ ನಮ್ಮ ಸೂಪರ್ ಸ್ಟಾರ್‌ಗಳು’ ಎನ್ನುವ ಘೋಷಣೆ. ಸಭಾಂಗಣದಲ್ಲಿ ಕವಿಗಡಚಿಕ್ಕುವ ಕರತಾಡನ.

ಚಿತ್ರದಲ್ಲಿ ಆರು ಹಾಡುಗಳಿದ್ದು ಎನ್‌.ಎಲ್. ಶಾಸ್ತ್ರಿ ರಾಗ ಸಂಯೋಜಿಸಿದ್ದಾರೆ. ಕಥೆ, ಚಿತ್ರಕಥೆ ಹೆಣೆದು ನಿರ್ದೇಶಕವನ್ನೂ ಮಾಡಿರುವ ಕರಣ್ ಕುಮಾರ್, ತಮ್ಮ ತಂಡದ ಬಗ್ಗೆ ಹೊಗಳಿಕೆಯ ಮಾತನಾಡಿದರು. ಹಾಡುಗಳನ್ನು ಮತ್ತು ಸ್ವರಸಂಯೋಜನೆಯನ್ನು ಮೆಚ್ಚಿದರು. ‘ಲಹರಿ’ ಸಂಸ್ಥೆ ಆಡಿಯೊ ಹಕ್ಕುಗಳನ್ನು ಪಡೆದಿದೆ. ನಟಿ ಸುಕೃತಾ ವಾಗ್ಳೆ, ವಿಜೇತ್, ಸಂದೀಪ್ ಸಂಗೀತ ನಿರ್ದೇಶಕ ಅನೂಫ್ ಸೀಳಿನ್, ‘ಲಹರಿ’ ವೇಲು, ಚಿತ್ರದ ನಿರ್ಮಾಪಕ ಕೆ.ಎಸ್. ದೇವರಾಜ್ ಮತ್ತಿತರರು ಆಡಿಯೊ ಬಿಡುಗಡೆಗೆ ಕೈ ಜೋಡಿಸಿದರು.  z

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.