ADVERTISEMENT

ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ‘ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌’ #1

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 16:39 IST
Last Updated 11 ಸೆಪ್ಟೆಂಬರ್ 2017, 16:39 IST
ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ‘ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌’ #1
ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ‘ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌’ #1   

ಬೆಂಗಳೂರು: ಮತ್ತೊಂದು ಕನ್ನಡ ಚಿತ್ರ ಭಿನ್ನ ನಿರೂಪಣೆ, ಸಂಭಾಷಣೆಯಿಂದ ಗಮನ ಸೆಳೆಯುತ್ತಿದ್ದು, ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ‘ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌’ ಚಿತ್ರದ ಮೊದಲ ಟೀಸರ್‌ ಈಗಾಗಲೇ 3.34 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

‘ನಾನು ಮಾಡ್ತಿರೋದು ನನ್ನ ಸ್ವಾರ್ಥಕ್ಕಲ್ಲ...ನಮ್ಮ ನಗರದ ಜನಗಳ ಹಿತಕ್ಕೆ...’ ರಾಜಕಾರಣಿಗಳು ಆಡ ಬಹುದಾದ ಇಂಥ ಅನೇಕ ಸಂಭಾಷೆಗಳಿಗೆ ಹಾಸ್ಯದ ಲೇಪನವಿದೆ. ರಾಜಕಾರಣಿ ನಾಗರಾಜ್ ಇಂಗ್ಲಿಷ್‌ ವ್ಯಾಮೋಹ ಮತ್ತು ಡೈಲಾಗ್‌ ನಗೆಯುಕ್ಕಿಸುತ್ತದೆ.

ಮೇ 1ರಂದು 1 ನಿಮಿಷ 49 ಸೆಕೆಂಡ್‌ ಅವಧಿಯ ಚಿತ್ರದ ಮೊದಲ ಟೀಸರ್‌ ಬಿಡುಗಡೆಯಾಗಿತ್ತು. ಪ್ರಸ್ತುತ ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಇದು ಮೊದಲ ಸ್ಥಾನದಲ್ಲಿದೆ. ಕಿರಿಕ್‌ ಪಾರ್ಟಿ ಖ್ಯಾತಿಯ ರಕ್ಷಿತ್‌ ಶೆಟ್ಟಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಿರ್ದೇಶಕ ಹೇಮಂತ್‌ ಎಂ.ರಾವ್‌  ಹಾಗೂ ಪುಷ್ಕರ ಮಲ್ಲಿಕಾರ್ಜುನಯ್ಯ ಚಿತ್ರಕ್ಕೆ ಹಣ ಹೂಡಿದ್ದಾರೆ.

ADVERTISEMENT

ಸಂಭಾಷಣೆಯಲ್ಲಿ  ಕನ್ನಡದೊಂದಿಗೆ ಇಂಗ್ಲಿಷ್‌ ಕೂಡ ಸಮಪ್ರಮಾಣದಲ್ಲಿ ಬಳಕೆಯಾಗಿರುವಂತೆ ತೋರುತ್ತಿದೆ. ಕಂಗ್ಲಿಂಷ್‌ ಸಂಭಾಷಣೆಯನ್ನು ಒಳಗೊಂಡಿರುವ ಈ ಚಿತ್ರವನ್ನು ಸಾದ್‌ ಖಾನ್‌ ನಿರ್ದೇಶಿಸಿದ್ದಾರೆ. ನಾಯಕನಾಗಿ ನಿರೂಪಕ ಡ್ಯಾನಿಶ್‌ ಸೇಠ್‌ ಕಾಣಿಸಿಕೊಂಡಿದ್ದು, ರೋಜರ್‌ ನಾರಾಯಣ್, ಶೃತಿ ಹರಿಹರನ್‌, ವಿಜಯ್‌ ಚೆಂಡೂರ್, ಸುಮುಖಿ ಸುರೇಶ್‌ ಮುಂತಾದವರ ಅಭಿನಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.