ADVERTISEMENT

ರಣಬೀರ್‌ ಕಂಡ ಖುಷಿಯಲ್ಲಿ ಅಮೃತಾ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 6 ಮೇ 2015, 19:30 IST
Last Updated 6 ಮೇ 2015, 19:30 IST
ರಣಬೀರ್‌ ಕಂಡ ಖುಷಿಯಲ್ಲಿ ಅಮೃತಾ
ರಣಬೀರ್‌ ಕಂಡ ಖುಷಿಯಲ್ಲಿ ಅಮೃತಾ   

‘ನಚ್‌ ಬಲಿಯೆ’ ಸೆಟ್‌ಗೆ ಆಗಮಿಸಿದ್ದ ರಣಬೀರ್‌ ಕಪೂರ್‌ ಅವರನ್ನು ನೋಡಿದ ಸ್ಪರ್ಧಿ ಅಮೃತಾ ಖಾನ್ವಿಲ್ಕರ್‌ ಕ್ಷಣಹೊತ್ತು ಭಾವುಕರಾದರಂತೆ. ರಣಬೀರ್‌ ಕಪೂರ್‌ ಅವರನ್ನು ನೋಡಿ ಬದುಕಿನ ಕನಸು ನನಸಾಯಿತು ಎಂದು ಹಿರಿಹಿರಿ ಹಿಗ್ಗಿದರಂತೆ.

ಮರಾಠಿ ಸಿನಿಮಾದ ಜನಪ್ರಿಯ ನಾಯಕಿ ಹಾಗೂ ಬಾಲಿವುಡ್‌ ಸಿನಿಮಾಗಳಲ್ಲೂ ನಟಿಸಿ ಹೆಸರು ಮಾಡಿರುವ ನಟಿ ಅಮೃತಾ ‘ನಚ್‌ ಬಲಿಯೆ 7’ರಲ್ಲಿ ಉತ್ತಮ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ನಚ್‌ ಬಲಿಯೆ ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ಗೆ ರಣಬೀರ್‌ ಕಪೂರ್‌ ಅತಿಥಿಯಾಗಿ ಆಗಮಿಸಿದ್ದರು.

ತಮ್ಮ ನೂತನ ಸಿನಿಮಾ ‘ಬಾಂಬೆ ವೆಲ್ವೆಟ್‌’ ಚಿತ್ರದ ಪ್ರಚಾರಕ್ಕಾಗಿ ಬಂದ ರಣಬೀರ್‌ ಕಪೂರ್‌ ಜೊತೆಗೆ ನಟಿ ಅನುಷ್ಕಾ ಬಂದಿದ್ದರು. ‘ರಣಬೀರ್‌ ಕಪೂರ್‌ ಬಂದಿದ್ದು ನೋಡಿ ನನಗೆ ತೀರಾ ಖುಷಿಯಾಯಿತು. ಅದೂ ಅಲ್ಲದೆ ನನ್ನ ನೃತ್ಯದ ಬಗ್ಗೆ ಅವರು ಮೆಚ್ಚುಗೆ ಮಾತಾಡಿದ್ದು ಕನಸು ನನಸಾದ ಆನಂದ ನೀಡುತ್ತಿದೆ. ಬದುಕಿನುದ್ದಕ್ಕೂ ಈ ದಿನವನ್ನು ನಾನು ನೆನಪಿಸಿಕೊಳ್ಳುತ್ತಲೇ ಇರುತ್ತೇನೆ’ ಎನ್ನುತ್ತಿದ್ದ ಅಮೃತಾ, ರಣಬೀರ್‌ ಅವರೊಂದಿಗೆ ಛಾಯಾಚಿತ್ರವನ್ನೂ ತೆಗೆಸಿಕೊಂಡು ಖುಷಿಪಟ್ಟರು.             v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.