ADVERTISEMENT

‘ರಾಜಕುಮಾರ’ನಿಗೆ ನೆರೆ ರಾಜ್ಯಗಳಲ್ಲೂ ಸ್ವಾಗತ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 11:30 IST
Last Updated 8 ಮಾರ್ಚ್ 2017, 11:30 IST
‘ರಾಜಕುಮಾರ’ನಿಗೆ ನೆರೆ ರಾಜ್ಯಗಳಲ್ಲೂ ಸ್ವಾಗತ
‘ರಾಜಕುಮಾರ’ನಿಗೆ ನೆರೆ ರಾಜ್ಯಗಳಲ್ಲೂ ಸ್ವಾಗತ   

ಬೆಂಗಳೂರು: ‘ಜನರನ್ನು ಆಳೋರಿಗೆ ಪೊಲಿಟಿಕಲ್ ಪವರ್ ಬೇಕು. ನಾವು ಜನರನ್ನು ಪ್ರೀತಿಸೋರು, ನಮಗೆ ವಿಲ್‌ಪವರ್ ಇದ್ರೆ ಸಾಕು...’

ಇದು ‘ರಾಜಕುಮಾರ’ ಸಿನಿಮಾ ಟ್ರೇಲರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಹೇಳುವ ಮಾತು. ಮಾರ್ಚ್‌ 6ರಂದು ಸಿನಿಮಾದ 2ನೇ ಟ್ರೇಲರ್ ಯುಟ್ಯೂಬ್‌ಗೆ ಅಪ್‌ಲೋಡ್ ಆಗಿದೆ. ಕೇವಲ ಒಂದೇ ದಿನದಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ.

ಹಿನ್ನೆಲೆಯಲ್ಲಿ ತೇಲಿ ಬರುವ ‘ಹೀ ಈಸ್ ಮಿಸ್ಟರ್ ಪರ್ಫೆಕ್ಟ್‌, ರಾಜರ ರಾಜ ರೆಸ್ಪೆಕ್ಟ್‌’ ಗೀತೆಯ ಮಾಧುರ್ಯ ಮೋಡಿ ಮಾಡುತ್ತದೆ. ತೆರೆಯ ಮೇಲೆ ಪುನೀತ್‌ ಡಾನ್ಸ್‌ ಮತ್ತು ಫೈಟ್‌ಗಳು ಮನಸೆಳೆಯುತ್ತವೆ.

ADVERTISEMENT

ನಾಯಕಿಯ ಪಾತ್ರದಲ್ಲಿರುವ ಪ್ರಿಯಾ ಆನಂದ್‌ ಮುದ್ದಾಗಿ ಲಲ್ಲೆಗರೆಯುವುದು ಇಷ್ಟವಾಗುತ್ತೆ. ಶರತ್‌ಕುಮಾರ್, ಪ್ರಕಾಶ್‌ರಾಜ್, ಅಚ್ಯುತ ಕುಮಾರ್, ಅನಂತನಾಗ್, ಚಿಕ್ಕಣ್ಣ, ದತ್ತಣ್ಣ, ರಂಗಾಯಣ ರಘು ಸಹ ಇಣುಕಿ ಮಾಯವಾಗಿದ್ದಾರೆ.

ಪುನೀತ್‌ ರಾಜ್‌ಕುಮಾರ್ ಅವರ ಟಫ್‌ ಲುಕ್ಸ್‌, ಫೈಟ್‌ ಮತ್ತು ಡಾನ್ಸ್‌ಗಳು ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟು ಹಾಕಿವೆ. ಆಂಧ್ರ ಮತ್ತು ತಮಿಳುನಾಡಿನಿಂದಲೂ ಅಭಿಮಾನಿಗಳು ಟ್ರೇಲರ್‌ಗೆ ಕಾಮೆಂಟ್‌ ಮಾಡಿ, ಚಿತ್ರಕ್ಕೆ ಸ್ವಾಗತ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.