ADVERTISEMENT

ರಾಹುಲ್‌ ಜತೆ ಸಂಗೀತ ಸಂಜೆ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 19:30 IST
Last Updated 30 ಮಾರ್ಚ್ 2015, 19:30 IST
ರಾಹುಲ್ ಬೋಸ್
ರಾಹುಲ್ ಬೋಸ್   

ಇತ್ತೀಚೆಗೆ ನಗರದಲ್ಲಿ ಬ್ಲೆಂಡರ್ಸ್ ಪ್ರೈಡ್ ರಿಸರ್ವ್ ಸಂಗ್ರಹದೊಂದಿಗೆ ಉತ್ಸಾಹಪೂರ್ಣ ಸಂಜೆಯನ್ನು ಆಚರಿಸಲಾಯಿತು. ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ನಟ ರಾಹುಲ್ ಬೋಸ್ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು.‌

ಅಲ್ಲದೇ‌ ‘ಕರ್ಕುರ ಎನ್ಸೆಂಬಲ್‌’ ಸಂಗೀತ ತಂಡ ತನ್ನ ಸಂಗೀತ ಸುಧೆಯಿಂದ ಈ ಸಂಜೆಗೆ ಇನ್ನಷ್ಟು ರಂಗು ತುಂಬಿತು.ಗ್ಲಾಮರ್ ಹಾಗೂ ವೈಭವದ ಜೊತೆಗೆ ಇತ್ತೀಚಿನ ಶೈಲಿಗಳ ಹಾಗೂ ಕೈಯಿಂದ ನೇಯ್ಗೆ ಮಾಡಿರುವಂತಹ ಆಕರ್ಷಕ ಉಡುಗೆಗಳ ಪ್ರದರ್ಶನ ಈ ಸಂಜೆಯ ವಿಶೇಷತೆಯಾಗಿತ್ತು.

ನಟ ರಾಹುಲ್ ಬೋಸ್ ಅವರು, ‘ಸ್ಟೈಲ್ ಎನ್ನುವುದು ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಬ್ಲೆಂಡರ್ಸ್ ಪ್ರೈಡ್ ರಿಸರ್ವ್ ಸಂಗ್ರಹ ಇದನ್ನು ಅತ್ಯಂತ ಯೋಗ್ಯವಾಗಿ ಪ್ರತಿನಿಧಿಸುತ್ತದೆ. ಬ್ಲೆಂಡರ್ಸ್ ಪ್ರೈಡ್ ರಿಸರ್ವ್ ಸಂಗ್ರಹದೊಂದಿಗೆ ಸಹಯೋಗವನ್ನು ಹೊಂದಿರುವುದು ನನಗೆ ಹೆಮ್ಮೆ ಎನಿಸುತ್ತದೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.