ADVERTISEMENT

ಲೈಂಗಿಕ ದೌರ್ಜನ್ಯ: ದೂರು ದಾಖಲಿಸಿದ ಬಾಲಿವುಡ್‌ ನಟಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 14:42 IST
Last Updated 4 ಮಾರ್ಚ್ 2017, 14:42 IST
ಲೈಂಗಿಕ ದೌರ್ಜನ್ಯ: ದೂರು ದಾಖಲಿಸಿದ ಬಾಲಿವುಡ್‌ ನಟಿ
ಲೈಂಗಿಕ ದೌರ್ಜನ್ಯ: ದೂರು ದಾಖಲಿಸಿದ ಬಾಲಿವುಡ್‌ ನಟಿ   

ಮುಂಬೈ: ಬಾಲಿವುಡ್‌ ನಟಿ ಹಾಗೂ ಮಾಜಿ ಮಿಸ್ ಇಂಡಿಯಾ ಪ್ರಶಸ್ತಿ ವಿಜೇತ ನಟಿ ಸೋನು ವಾಲಿಯಾ ಅವರು ಲೈಂಗಿಕ ದೌರ್ಜನ್ಯ ಕಾನೂನಿನಡಿ ನಗರದ ಬಂಗಾರ್‌ನಗರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಟಿ, ‘ತಮಗೆ ಬಹು ದಿನಗಳಿಂದ ಅಪರಿಚಿತ ಹಾಗೂ ಅನಾಮಿಕ ವ್ಯಕ್ತಿಯಿಂದ ಅನಗತ್ಯ ಕರೆಗಳು ಬರುತ್ತಿದ್ದು, ಅಶ್ಲೀಲ ವಿಡಿಯೊಗಳು ಸಹ ಆತನಿಂದ ಬರುತ್ತಿವೆ. ನಾನು ಆತನಿಗೆ ಎಚ್ಚರಿಕೆಯನ್ನು ನೀಡಿದ ಹೊರತಾಗಿಯೂ ಆತ ಕರೆ ಮಾಡುವುದು ಹಾಗೂ ವಿಡಿಯೊ ಕಳುಹಿಸುವುದನ್ನು ನಿಲ್ಲಿಸುತ್ತಿಲ್ಲ’ ಎಂದು ತಮ್ಮ ದೂರಿನಲ್ಲಿ ಅವರು ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 354 ಮತ್ತು ಮಾಹಿತಿ ತಂತ್ರಜ್ಞಾನ ಕಾನೂನಿನ ಪ್ರಕಾರ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ADVERTISEMENT

ಸೋನು ವಾಲಿಯಾ ಅವರು 1985ರಲ್ಲಿ ನಟಿ ಮಿಸ್‌ ಇಂಡಿಯಾ ಪ್ರಶಸ್ತಿ ಗಳಿಸಿದ್ದರು. ಜತೆಗೆ ಅದೇ ವರ್ಷ ಮಿಸ್‌ ಯುನಿವರ್ಸ್‌ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.