ADVERTISEMENT

ವರ್ಮಾ ಚಿತ್ರಕ್ಕೆ ಮೊದಲ ‘ಯು’ ಸರ್ಟಿಫಿಕೇಟ್

​ಪ್ರಜಾವಾಣಿ ವಾರ್ತೆ
Published 6 ಮೇ 2015, 19:30 IST
Last Updated 6 ಮೇ 2015, 19:30 IST

ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ ಹೊಸ ಸಿನಿಮಾ ‘365 ಡೇಸ್‌’ ಚಿತ್ರಕ್ಕೆ ಯು ಸರ್ಟಿಫಿಕೆಟ್‌ ದೊರೆತಿದೆ.  ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ವರ್ಮಾ ನಿರ್ದೇಶನದ ಚಿತ್ರವೊಂದಕ್ಕೆ ಯು ಸರ್ಟಿಫಿಕೆಟ್‌ ದೊರೆತಿರುವುದು ಇದೇ ಮೊದಲು.

‘ನನ್ನ ಇಪ್ಪತ್ತೈದು ವರ್ಷದ ಚಿತ್ರಯಾನದಲ್ಲಿ ‘365 ಡೇಸ್‌’ ಸಿನಿಮಾಕ್ಕೆ ಮಾತ್ರ ಯು ಸರ್ಟಿಫಿಕೆಟ್‌ ದೊರೆತಿದೆ. ಈ ಚಿತ್ರದಲ್ಲಿ ಪ್ರೇಕ್ಷಕರು ಒಂದೊಳ್ಳೆ ಪ್ರೇಮಕತೆ  ನೋಡಬಹುದು. ಈ ಸಿನಿಮಾದಲ್ಲಿ ಕ್ರೈಂ ಹಾಗೂ ರಕ್ತಪಾತದ ದೃಶ್ಯಗಳಿಲ್ಲ’ ಎಂದಿದ್ದಾರೆ ಅವರು.
‘365 ಡೇಸ್‌’ ಸಿನಿಮಾದಲ್ಲಿ ನಟ ನಂದೂ ಮತ್ತು ನಟಿ ಅನೈಕ ಸೊತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.