ADVERTISEMENT

ವಿಚ್ಛೇದನ ನಿರ್ಧಾರ ಕೈಬಿಟ್ಟ ಕ್ಲೋಯಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2015, 19:30 IST
Last Updated 28 ಏಪ್ರಿಲ್ 2015, 19:30 IST

ರಿಯಾಲಿಟಿ ಷೋಗಳಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿರುವ ಕ್ಲೋಯಿ ಕರ್ದಶಿಯಾನ್‌, ಪತಿ ಬಾಸ್ಕೆಟ್‌ಬಾಲ್‌ ಆಟಗಾರ ಲಾಮರ್‌ ಓಡಮ್‌ ಅವರಿಗೆ ವಿಚ್ಛೇದನ ನೀಡುವ ನಿರ್ಧಾರವನ್ನು ಕೈಬಿಟ್ಟಿದ್ದಾರಂತೆ.

ಕಳೆದ ಎರಡು ವರ್ಷದಿಂದ ಬೇರೆಯಾಗಿರುವ ಈ ಜೋಡಿ ಡಿಸೆಂಬರ್‌ನಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚ್ಛೇದನಕ್ಕೆ ಸಂಬಂಧಿಸಿದಂತೆ ಓಡಮ್‌ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ.
ಅದೂ ಅಲ್ಲದೆ ವಾದ ಪ್ರತಿವಾದದ ಸಂದರ್ಭದಲ್ಲೂ ಕ್ಲೋಯಿ ನ್ಯಾಯಾಲಯಕ್ಕೆ ತೆರಳದೇ ಇರುವುದರಿಂದ ನ್ಯಾಯಾಲಯವು ಪ್ರಕರಣವನ್ನು ಕೈಬಿಡುವ ಸಾಧ್ಯತೆಯಿದೆ. 

ಇಬ್ಬರೂ ವಿಚ್ಛೇದನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ಅವರಿಬ್ಬರಲ್ಲಿ ಇನ್ನೂ ಪ್ರೀತಿ ಉಳಿದಿದೆ ಎಂದು ಮೂಲಗಳು ಹೇಳುತ್ತಿವೆ. ಅಂದಹಾಗೆ ಕ್ಲೋಯಿ ಹೃದಯವೈಶಾಲ್ಯ ಹೊಂದಿದ್ದು ಪತಿ ಓಡಮ್‌ ಅವರ ಮನಸ್ಸನ್ನು ನೋಯಿಸಲಾರದೆ ಮೌನವಾಗಿದ್ದಾರೆ ಎನ್ನುವುದು ಕ್ಲೋಯಿ ಆಪ್ತರ ಗುಸುಗುಸು.

ಓಡಮ್‌ ಅವರಿಂದ ಬೇರೆಯಾದಾಗಿನಿಂದ ಫ್ರೆಂಚ್‌ ಮೊಂಟಾನಾ ಅವರೊಂದಿಗೆ ಸಂಬಂಧ ಹೊಂದಿರುವ ಕ್ಲೋಯಿ ವಿಚ್ಛೇದನದಲ್ಲಿ ನಂಬಿಕೆ ಇಲ್ಲ ಎಂದೂ ಉಲಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.