ADVERTISEMENT

ವಿಚ್ಛೇದನ ಪಡೆದ ನಟ ಫರ್ಹಾನ್ ಅಖ್ತರ್

ಏಜೆನ್ಸೀಸ್
Published 25 ಏಪ್ರಿಲ್ 2017, 13:18 IST
Last Updated 25 ಏಪ್ರಿಲ್ 2017, 13:18 IST
ವಿಚ್ಛೇದನ ಪಡೆದ ನಟ ಫರ್ಹಾನ್ ಅಖ್ತರ್
ವಿಚ್ಛೇದನ ಪಡೆದ ನಟ ಫರ್ಹಾನ್ ಅಖ್ತರ್   

ಮುಂಬೈ: ಬಾಲಿವುಡ್ ನಟ ಹಾಗೂ ನಿರ್ಮಾಪಕ  ಫರ್ಹಾನ್‌  ಅಖ್ತರ್‌ ಮತ್ತು ಕೇಶ ವಿನ್ಯಾಸಕಿ ಅಧುನಾ ಭಬಾನಿ ಅವರಿಗೆ ವಿಚ್ಛೇದನ ದೊರೆತಿದೆ. ಇಲ್ಲಿನ ಸ್ಥಳೀಯ  ಕೌಟುಂಬಿಕ ನ್ಯಾಯಾಲಯ ಮಂಗಳವಾರ ವಿಚ್ಛೇದನ ನೀಡಿದೆ.

2016ರ ಆಕ್ಟೋಬರ್ ತಿಂಗಳಲ್ಲಿ ಈ ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿತ್ತು.  ಇವರಿಗೆ ಶಾಕ್ಯ ಮತ್ತು ಅಕಿರಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು  ಅವರು ತಾಯಿಯ ಪೋಷಣೆಯಲ್ಲಿ ಬೆಳೆಯಲಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಫರ್ಹಾನ್‌  ಅಖ್ತರ್‌ ಮತ್ತು ಅಧುನಾ ಭಬಾನಿ ಪರಸ್ಪರ ಮೆಚ್ಚಿ 2000ನೇ ವರ್ಷದಲ್ಲಿ ಮದುವೆಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.