ADVERTISEMENT

ಶ್ರೀಕಂಠ

ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 19:30 IST
Last Updated 5 ಜನವರಿ 2017, 19:30 IST

ಶಿವರಾಜ್‌ಕುಮಾರ್ ಅಭಿನಯದ ಚಿತ್ರ ‘ಶ್ರೀಕಂಠ’. ಮಂಜು ಸ್ವರಾಜ್ ನಿರ್ದೇಶನದ ಈ ಚಿತ್ರಕ್ಕೆ ಎಂ.ಎಸ್. ಮನು ಗೌಡ  ಬಂಡವಾಳ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸುರೇಶ್ ಬಾಬು ಛಾಯಾಗ್ರಹಣದ ಚಿತ್ರಕ್ಕಿದೆ. ಚಾಂದಿನಿ ಶ್ರೀಧರನ್ ಚಿತ್ರದ ನಾಯಕಿ. ಉಳಿದಂತೆ ವಿಜಯ ರಾಘವೇಂದ್ರ, ದತ್ತಣ್ಣ ಮುಂತಾದವರು ತಾರಾಗಣದಲ್ಲಿದ್ದಾರೆ.

*
ಪುಷ್ಪಕ ವಿಮಾನ
‘ಪುಷ್ಪಕ ವಿಮಾನ’ ರಮೇಶ್ ಅರವಿಂದ್ ಅಭಿನಯದ 100ನೇ ಚಿತ್ರ. ವಿಖ್ಯಾತ್, ಸುಕೃತ್, ದೇವೇಂದ್ರ ರಾಜ್ ಗೌಡ, ದೀಪಕ್ ಕಿಶೋರ್, ದೀಪಕ್ ಕೃಷ್ಣ, ವಿಖ್ಯಾತ್ ಮತ್ತಿತರರು ನಿರ್ಮಿಸಿರುವ ಈ ಚಿತ್ರಕ್ಕೆ ಎಸ್‌. ರವೀಂದ್ರನಾಥ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಲನಟಿ ಯುವಿನಾ ಪಾರ್ಥವಿ, ಜೂಹಿ ಚಾವ್ಲಾ, ರಚಿತಾ ರಾಮ್, ರವಿಕಾಳೆ ಮುಂತಾದವರು ಚಿತ್ರದಲ್ಲಿದ್ದಾರೆ. ಚರಣ್‌ರಾಜ್ ಸಂಗೀತ ಚಿತ್ರಕ್ಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT