ADVERTISEMENT

ಸಾಮಾಜಿಕ ಜಾಲತಾಣದ ಒಡನಾಟಕ್ಕೆ 7 ವರ್ಷ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2015, 19:30 IST
Last Updated 17 ಏಪ್ರಿಲ್ 2015, 19:30 IST
ಅಮಿತಾಭ್‌ ಬಚ್ಚನ್‌
ಅಮಿತಾಭ್‌ ಬಚ್ಚನ್‌   

ಸಿನಿಮಾ ಚಿತ್ರೀಕರಣ ಮತ್ತಿತರ ಚಟುವಟಿಕೆಗಳಿಂದ ಪುರುಸೊತ್ತು ಮಾಡಿಕೊಂಡು ಅಮಿತಾಭ್‌ ಬಚ್ಚನ್‌ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜೊತೆ ಸಂವಾದ ಮಾಡತೊಡಗಿ ಶುಕ್ರವಾರಕ್ಕೆ (ಏ.17) ಏಳು ವರ್ಷಗಳು ಸಂದಿವೆ.

‘ಎಷ್ಟು ಕಾಲ ಸರಿದುಹೋಯಿತು ಜನರ ಜೊತೆ ಮಾತನಾಡಲು ಆರಂಭಿಸಿ’  ಎಂದು ತಮ್ಮ ಹೊಸ ಸಂದೇಶವನ್ನು ಪ್ರಾರಂಭಿಸಿರುವ ಅಮಿತಾಭ್‌, ಕಳೆದ ಏಳು ವರ್ಷಗಳಿಂದ ಟ್ವಿಟ್ಟರ್‌, ಬ್ಲಾಗ್‌ ಹಾಗೂ ವಾಯ್ಸ್‌ ಬ್ಲಾಗ್‌ ಮೂಲಕ ಅಭಿಮಾನಿ ಗಳ ಜೊತೆ ಸಂಪರ್ಕದಲ್ಲಿದ್ದರು.

‘ಏಳು ವರ್ಷ ಸತತವಾಗಿ ಜನರೊಟ್ಟಿಗೆ ಸಂವಾದ ನಡೆಸಿದ್ದು, ಒಂದು ದೊಡ್ಡ ಕುಟುಂಬ ಕಟ್ಟಿದಂಥ ಪ್ರಕ್ರಿಯೆ. ಅದು ಹೆಚ್ಚು ಶ್ರಮ ಬೇಡುವ ಕೆಲಸವಾಗಿತ್ತು’ ಎಂಬ ಅರ್ಥದ ಸಂದೇಶವನ್ನು ಅಮಿತಾಭ್‌ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.

ಕೆಲವು ಕಾಲ ಅವರು ಸಾಮಾಜಿಕ ಜಾಲತಾಣಗಳಿಂದ ಬಿಡುವು ಪಡೆಯಲಿದ್ದು, ಆಮೇಲೆ ಮತ್ತೆ ಅಭಿಮಾನಿಗಳಿಗೆ ಸಂದೇಶ ಕಳುಹಿಸುವು ದನ್ನು ಮುಂದುವರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.