ADVERTISEMENT

‘ಸೀಕ್ರೆಟ್ ಸೂಪರ್ ಸ್ಟಾರ್’ ಮೊದಲ ಹಾಡು ಬಿಡುಗಡೆ ಮಾಡಿದ ಆಮೀರ್‌

ಏಜೆನ್ಸೀಸ್
Published 23 ಆಗಸ್ಟ್ 2017, 9:53 IST
Last Updated 23 ಆಗಸ್ಟ್ 2017, 9:53 IST
‘ಸೀಕ್ರೆಟ್ ಸೂಪರ್ ಸ್ಟಾರ್’ ಮೊದಲ ಹಾಡು ಬಿಡುಗಡೆ ಮಾಡಿದ ಆಮೀರ್‌
‘ಸೀಕ್ರೆಟ್ ಸೂಪರ್ ಸ್ಟಾರ್’ ಮೊದಲ ಹಾಡು ಬಿಡುಗಡೆ ಮಾಡಿದ ಆಮೀರ್‌   

ಮುಂಬೈ: ಬಾಲಿವುಡ್‌ ನಟ ಆಮೀರ್‌ ಖಾನ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರದ ಮೊದಲ ಹಾಡು ’ಮೆ ಕೌನ್ ಹೂ’ ಸೋಮವಾರ ಬಿಡುಗಡೆಗೊಂಡಿದೆ.

‘ನನ್ನ ಮೊದಲ ಯುಟ್ಯೂಬ್ ವಿಡಿಯೊ ಇದಾಗಿದ್ದು ನನ್ನ ಹೆಸರು ಹೇಳಲು ಸಾಧ್ಯವಿಲ್ಲ ಎಂದು ಬುರ್ಖಾ ತೊಟ್ಟ ಹುಡುಗಿಯೊಬ್ಬಳು ಮಾತನಾಡಿ, ಹಾಡು ಪ್ರಾರಂಭಿಸುತ್ತಾಳೆ. ಕೌಸರ್ ಮುನೀರ್ ಬರೆದು ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿರುವ ಹಾಡನ್ನು 16 ವರ್ಷದ ಮೇಘನಾ ಮಿಶ್ರಾ ಹಾಡಿದ್ದಾರೆ.

ಅದ್ವೈತ ಚಂದನ್ ನಿರ್ದೇಶನದ ಈ ಚಿತ್ರದಲ್ಲಿ ದಂಗಲ್ ಹುಡುಗಿ ಝಾಯಿರಾ ವಾಸಿಮ್ ಮುಖ್ಯ ಭೂಮಿಕೆಯಲ್ಲಿದ್ದು, ಆಮೀರ್ ಚಿತ್ರದಲ್ಲಿ ಪ್ರಸಿದ್ಧ ಪಾಪ್ ಗಾಯಕರಾಗಿ ಹಾಡುಗಾರಿಕೆ ರಿಯಾಲಿಟಿ ಷೋ ಒಂದರ ತೀರ್ಪುಗಾರನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ADVERTISEMENT

ತಂದೆಯ ವಿರೋಧದ ನಡುವೆ ಹುಡುಗಿಯೊಬ್ಬಳು ಪ್ರಸಿದ್ಧ ಗಾಯಕಿಯಾಗಲು ಬಯಸುವ ಕಥೆಯನ್ನು ಚಿತ್ರ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.