ಲಾಸ್‌ಏಂಜಲ್ಸ್: ‘ರಾಕಿ’ ಮತ್ತು ‘ದಿ ಕರಾಟೆ ಕಿಡ್’ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಜಾನ್ ಜಿ ಅವಿಲ್ಡ್‌ಸೆನ್ ಅವರು ಶುಕ್ರವಾರ ನಿಧನರಾಗಿದ್ದಾರೆ.
‘ತಂದೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶುಕ್ರವಾರ ಲಾಸ್‌ಏಂಜಲ್ಸ್‌ನಲ್ಲಿ ನಿಧನರಾಗಿದ್ದಾರೆ’ ಎಂದು ಜಾನ್ ಜಿ ಅವಿಲ್ಡ್‌ಸೆನ್ ಅವರ ಪುತ್ರ ಆಂಟನಿ ಅವಿಲ್ಡ್‌ಸೆನ್ ತಿಳಿಸಿದ್ದಾರೆ.
‘ಅವರೊಬ್ಬ ಅದ್ಭುತ ವ್ಯಕ್ತಿ. ಬಹುಮುಖ ಪ್ರತಿಭೆಯುಳ್ಳವರಾಗಿದ್ದು, ಜತೆಗೆ ಹೆಚ್ಚು ಮೊಂಡುತನದ ಸ್ವಭಾವದವರಾಗಿದ್ದರು. ಇದು ಅವರ ವಿನಾಶಕ್ಕೆ ಕಾರಣವಾಯಿತ್ತು’ ಎಂದು ಆಂಟನಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.