ADVERTISEMENT

‘ರಣಬೀರ್ ಸೂಪರ್‌ಸ್ಟಾರ್’

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2015, 19:30 IST
Last Updated 29 ಮಾರ್ಚ್ 2015, 19:30 IST

‘ನಟ ರಣಬೀರ್ ಕಪೂರ್ ನಮ್ಮ ಪೀಳಿಗೆಯ ಸೂಪರ್ ಸ್ಟಾರ್’ ಎಂದು ನಟ ಅರ್ಜುನ್ ಕಪೂರ್‌ ಹೊಗಳಿದ್ದಾರೆ . ಈ ಹೊಸ ಪೀಳಿಗೆಯ ಸೂಪರ್‌ಸ್ಟಾರ್  ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅರ್ಜುನ್, ‘ನಾನಂತೂ ರಣಬೀರ್ ಕಪೂರ್ ಅವರನ್ನು ನಮ್ಮ ಕಾಲದ ಸೂಪರ್‌ಸ್ಟಾರ್ ಎಂದುಕೊಂಡಿದ್ದೇನೆ.

ಅವರು ಆಯ್ಕೆ ಮಾಡಿಕೊಳ್ಳುವ ಪಾತ್ರಗಳೂ ಹಾಗೇ ಇವೆ. ಅವರು ಹೊಸ ಹೊಸ ಪಾತ್ರಗಳನ್ನು, ಚಿತ್ರಕಥೆಯನ್ನು ಆರಿಸಿಕೊಳ್ಳುವಲ್ಲಿ ರಿಸ್ಕ್ ತೆಗೆದುಕೊಳ್ಳುತ್ತಾರೆ.  ಅವರ ಆ ಪ್ರಯತ್ನವನ್ನು ಮೆಚ್ಚಲೇಬೇಕು’ ಎಂದಿದ್ದಾರೆ ‘2 ಸ್ಟೇಟ್ಸ್’ ಹೀರೊ. ‘ಬಾಂಬೆ ವೆಲ್ವೆಟ್’ನಲ್ಲಿ ಈಗ ಮತ್ತೆ ರಣಬೀರ್ ರಿಸ್ಕ್‌ ತೆಗೆದುಕೊಳ್ಳುತ್ತಿದ್ದಾರೆ.  ನಮ್ಮ ಜಮಾನಾದ ಹೆಚ್ಚಿನ ಯುವಕ–ಯುವತಿಯರಿಗೆ ಅವರೇ ಮಾದರಿ. ಅವರ ಚಿತ್ರಗಳನ್ನು ನೋಡುವುದೇ ಒಂದು ಖುಷಿ’ ಎನ್ನುವುದು ಅರ್ಜುನ್ ಅಭಿಪ್ರಾಯ.

‘2 ಸ್ಟೇಟ್ಸ್’,  ‘ಇಷ್ಕ್ ಝಾದೆ’, ‘ಗುಂಡೇ’, ‘ತೇವರ್‌’ನಂತಹ ಚಿತ್ರಗಳಲ್ಲಿ ನಟಿಸಿರುವ ನಟ ಅರ್ಜುನ್ ಕಪೂರ್, ‘ಇನ್ನು ಮುಂದೆ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ನಾನು ಇನ್ನೂ ಚೂಸಿ ಆಗುತ್ತೇನೆ. ರಣಬೀರ್ ಅವರಂತೆ ವಿಶಿಷ್ಟ ಚಿತ್ರಗಳನ್ನಷ್ಟೇ ಎತ್ತಿಕೊಳ್ಳುತ್ತೇನೆ. ಅದು ವರ್ಷಕ್ಕೆ ಒಂದೇ ಚಿತ್ರವಾದರೂ ಸರಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.