ADVERTISEMENT

ಮತ್ತೆ ಟ್ರಾನ್ಸಲ್‌ವೇನಿಯಾ ಮಜಾ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 20:29 IST
Last Updated 5 ಜುಲೈ 2018, 20:29 IST
ಟ್ರಾನ್ಸಲ್ವೇನಿಯಾ ಚಿತ್ರ ಪೋಸ್ಟರ್
ಟ್ರಾನ್ಸಲ್ವೇನಿಯಾ ಚಿತ್ರ ಪೋಸ್ಟರ್   

ನಾಗರಿಕ ಪ್ರಪಂಚದೊಂದಿಗೆ ಸಂಬಂಧವಿಲ್ಲದ, ರಾಕ್ಷಸರೇ ತುಂಬಿರುವಂತಹ ಹೋಟೆಲ್‌ಗೆ ಪ್ರವೇಶಿಸುವ ಮನುಷ್ಯರ ಪಾಡು ಹೇಗಿರುತ್ತದೆ ಎಂದು ಹಾಸ್ಯಮಯವಾಗಿ ತೋರಿಸಿಕೊಟ್ಟ ಆ್ಯನಿಮೇಟೆಡ್ ಚಲನಚಿತ್ರ ‘ಹೋಟೆಲ್ ಟ್ರಾನ್ಸಲ್ವೇನಿಯಾ’.

2012ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ, ಪ್ರೇಕ್ಷಕರ ಮನಗೆದ್ದಿತ್ತು. ಚಿತ್ರದ ಯಶಸ್ಸಿನಿಂದಾಗಿ ಚಿತ್ರತಂಡ 2015ರಲ್ಲಿ ಮತ್ತೊಮ್ಮೆ ಟ್ರಾನ್ಸಲ್ವೇನಿಯಾ–2 ಹೆಸರಿನಲ್ಲಿ ಮತ್ತೊಂದು ಚಿತ್ರವನ್ನು ಬಿಡುಗಡೆ ಮಾಡಿತ್ತು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು.

ಈಗ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು, ಚಿತ್ರದ ಮೂರನೇ ಭಾಗ ಸಿದ್ಧವಾಗಿದೆ. ಇದೇ 20ರಂದು ಇಂಗ್ಲಿಷ್‌ ಮತ್ತು ತಮಿಳು ಭಾಷೆಗಳಲ್ಲಿ ಈ ಚಿತ್ರ ತೆರೆಕಾಣಲಿದೆ. 43 ದೇಶಗಳ ಕಲಾವಿದರು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಸುಮಾರು 15 ತಿಂಗಳು ಶ್ರಮವಹಿಸಿ ಚಿತ್ರಕಥೆ ರಚಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ.

ADVERTISEMENT

ಹಿಂದಿನ ಎರಡು ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ಗೆಂಡಿ ಟರ್ಟಕೊವಿಸ್ಕಿ ಅವರೇ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮೈಕೆಲ್‌ ಮ್ಯಾಕ್‌ಕುಲ್ಲರ್ಸ್ ಅವರ ಜತೆಗೂಡಿ ಚಿತ್ರಕಥೆಯನ್ನೂ ಅವರು ಬರೆದಿದ್ದಾರೆ. ಮಾರ್ಕ್‌ ಮದರ್ಸ್‌ಬಾಗ್ ಅವರು ಸಂಗೀತ ನೀಡಿದ್ದಾರೆ. ಚಿತ್ರ 3ಡಿ ಮಾದರಿಯಲ್ಲಿ ಮೂಡಿ ಬರಲಿದೆ.

‘ಎರಡನೇ ಚಿತ್ರದ ಯಶಸ್ಸಿನ ನಂತರ, ಕುಟುಂಬದೊಂದಿಗೆ ಸಮುದ್ರಯಾನ ಕೈಗೊಂಡಿದ್ದೆ, ನಮ್ಮಂತೆ ಹಲವು ಕುಟುಂಬಗಳು ವಿಹಾರಕ್ಕೆ ಬಂದಿದ್ದವು. ಬೃಹತ್ ಹಡಗಿನಲ್ಲಿ ಅವರ ವರ್ತನೆ ಗಮನಿಸುತ್ತಿದ್ದ ನನಗೆ ಟ್ರಾನ್ಸಲ್‌ವೇನಿಯಾ ಸರಣಿಯ ಮೂರನೇ ಚಿತ್ರ ಮಾಡಬೇಕು ಎಂದು ಎನಿಸಿತು. ಈ ಸ್ಫೂರ್ತಿಯಿಂದಲೇ ಚಿತ್ರಕಥೆ ಬರೆದಿದ್ದೇನೆ’ ಎಂದು ಗೆಂಡಿ ಅವರು ಹೇಳಿದ್ದಾರೆ.

‘ಕಣ್ಣು ಹಾಯಿಸಿದಷ್ಟು ದೂರ ನೀರು ಮಾತ್ರ ಕಾಣುವಂತಹ ಯಾನದ ಅನುಭವ, ಹೋಟೆಲ್‌ನಲ್ಲಿ ವಾಸಿಸುವ ಜನರ ಭಯ ಮುಂತಾದ ವಿಷಯಗಳನ್ನೇ ಕಥಾರೂಪಕ್ಕೆ ಇಳಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.