ADVERTISEMENT

‘ಮಹಾದೇವಿ’ಯ ಕಥೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST
‘ಮಹಾದೇವಿ’ಯ ಕಥೆ
‘ಮಹಾದೇವಿ’ಯ ಕಥೆ   

ಜೀ ಕನ್ನಡ ವಾಹಿನಿಯ ಧಾರಾವಾಹಿಗಳಲ್ಲೊಂದಾದ ‘ಮಹಾದೇವಿ’ ಈಗಾಗಲೇ 550 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಸ್ವರ್ಣಪುರಿಯಲ್ಲಿ ಮಹಾದೇವಿಯ ಪರಮಭಕ್ತ ವಿರೂಪಾಕ್ಷ ಶಾಸ್ತ್ರಿ ಶ್ರೀಚಕ್ರ ಹುಡುಕಿಕೊಂಡು ಹೊರಡುವ ಕಥೆಯಿಂದ ಮಹಾದೇವಿಯ ಪಯಣ ಆರಂಭವಾಗಿತ್ತು. ಕಥೆಯ ನಾಯಕಿ ಸುಂದರಿಯ ದೇಹದೊಳಗಿದ್ದ ಶ್ರೀಚಕ್ರ, ಚಕ್ರಾಪುರಿಯ ಜಾಜಿಯ ದೇಹ ಸೇರುವ ಮೂಲಕ ಕಥೆ ಮತ್ತೊಂದು ಸ್ವರೂಪ ಪಡೆಯಿತು.

ಜಾಜಿ- ಬಂಗಾರಿಯ ಮಗು ಹಿರಣ್ಮಯಿಗೆ ಶೀಘ್ರವೇ 5 ವರ್ಷ 48 ದಿನ ತುಂಬಲಿದೆ. ಕಥೆಯಂತೆ ಈ ದಿನದಂದು ಹಿರಣ್ಮಯಿಯೊಳಗಿರುವ ಶ್ರೀಚಕ್ರ ಪ್ರಾಕೃತಿಕ ರೂಪ ಪಡೆಯುತ್ತಿದೆ.

ADVERTISEMENT

ಶ್ರೀಚಕ್ರವನ್ನು ಕೈವಶ ಮಾಡಿಕೊಳ್ಳಲು ಹಪಹಪಿಸುತ್ತಿರುವ ವಿರೂಪಾಕ್ಷ ಶಾಸ್ತ್ರಿ ಹಾಗೂ ಖಡಕಿ ಮಗುವಿನ ಹಿಂದೆ ಬಿದ್ದಿದ್ದಾರೆ. ಸದಾ ಒಳ್ಳೆಯವರ ಜೊತೆ ನಿಲ್ಲುವ ಅಮ್ಮನವರು ಈ ದುಷ್ಟರಿಂದ ಪುಟಾಣಿ ಹಿರಣ್ಮಯಿಯನ್ನು ಹೇಗೆ ರಕ್ಷಿಸುತ್ತಾರೆ? ಶ್ರೀಚಕ್ರದ ಪ್ರಯಾಣ ಯಾವ ಕಡೆ ಸಾಗುತ್ತದೆ.

ವಿರೂಪಾಕ್ಷ ಶಾಸ್ತ್ರಿ ಮತ್ತು ಖಡಕಿಯ ಶ್ರೀಚಕ್ರದ ಕನಸು ನನಸಾಗುತ್ತದೆಯೇ? ಎಂಬ ಕುತೂಹಲಕಾರಿ ಅಂಶಗಳೊಂದಿಗೆ ಮುಂದಿನ ಕಥೆ ಸಾಗಲಿದೆ.

ಹೊಸ ಕಥೆ ಹೊಂದಿರುವ ನವೀನ ಸ್ವರೂಪದ ಮಹಾದೇವಿ ಧಾರಾವಾಹಿ ಅಕ್ಟೋಬರ್ 23ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.